ಮಾರುತಿಪುರ : ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆಗೆ ಕ್ಷಣಗಣನೆ!!!

ಮಾರುತಿಪುರ : ದಿನಾಂಕ : 22-09-2025, ಸೋಮವಾರ ದಿಂದ 02-10-2025 ಗುರುವಾರ ವರೆಗೆ ಲೋಕಕಲ್ಯಾಣಾರ್ಥವಾಗಿ ಹಾಗೂ ಸರ್ವಜನರ ಶ್ರೇಯಸ್ಸಿಗಾಗಿ ಶ್ರೀ ಮನಿ।ಪ್ರ। ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸದಾನಂದ ಶಿವಯೋಗಾಶ್ರಮ, ಮೂಲೆಗದ್ದೆ ಮಠ, ಹೊಸನಗರ ತಾ|| ಇವರ ಕೃಪಾಶೀರ್ವಾದಗಳೊಂದಿಗೆ ಹೊಸನಗರ ತಾಲೂಕು ಮಾರುತಿಪುರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ.

ಸ್ವಸ್ತಿಶ್ರೀ ಶಾಲಿವಾಹನ ಶಕೆ ೧೯೪೬ ನೇ ವಿಶ್ವಾವಾಸು ನಾಮ ಸಂ |ದ ಆಶ್ವಯುಜ ಮಾಸ ಶುಕ್ಷ ಪಕ್ಷ ಪಾಡ್ಯದಿಂದ  ದಸರಾ ಶರನ್ನವರಾತ್ರಿ ಆರಾಧನೆ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಕೆಳಗಿನ ಕಾರ್ಯಕ್ರಮಗಳ ಜೊತೆಯಲ್ಲಿ ಏರ್ಪಡಿಸಲಾಗಿದೆ..

 ಪ್ರತಿ ವರ್ಷವೂ ಸಹ ಮಾರುತಿಪುರ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಶರನ್ನವರಾತ್ರಿಯ ನಿಮಿತ್ತವಾಗಿ ಒಂಬತ್ತು ದಿನಗಳ ಕಾಲ ಜಗಜ್ಜನನಿ ದುರ್ಗೆಯನ್ನು 9 ಅವತಾರಗಳಲ್ಲಿ ಬಹು ವಿಜೃಂಭಣೆಯಿಂದ ಪೂಜಿಸಿ ಆರಾಧಿಸಲು ಅಧ್ಯಕ್ಷರು ಹಾಗೂ ಸದಸ್ಯರು, ಸೇವಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ, ಮಾರುತಿಪುರ ಇವರುಗಳ ಸಹಕಾರಗಳೊಂದಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಮಹತ್ತರವಾದ ವೈಶಿಷ್ಟ್ಯಪೂರ್ಣ ದೇವತಾ ಆರಾಧನೆಯಲ್ಲಿ ತಾವುಗಳು ತನು-ಮನ-ಧನ ಸಹಕಾರಗಳೊಂದಿಗೆ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಲು ತಮ್ಮಲ್ಲಿ ವಿನಯಪೂರ್ವಕವಾಗಿ ಕೋರುತ್ತೇವೆ.

ದಿನಾಂಕ 22-09-2025,ಸೋಮವಾರ ಬೆಳಿಗ್ಗೆ ಶ್ರೀ ಶಕ್ತಿಮಾ ತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯೊಂದಿಗೆ ನವರಾತ್ರಿ ಪೂಜೆಗೆ ಪ್ರಾರಂಭಿಸಲಾಗುವುದು...!!

 ನವರಾತ್ರಿ 9 ದಿನವೂ ಸಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು ವಿಶೇಷ ಕಾರ್ಯಕ್ರಮಗಳು ಈ ಕೆಳಗಿನಂತೆ ಇವೆ..!!






Post a Comment

Previous Post Next Post