ಧರ್ಮಸ್ಥಳ ಅನನ್ಯ ಪ್ರಕರಣಕ್ಕೆ ಟ್ವಿಸ್ಟ್ ತಂದ ಮೊದಲ ಪತ್ರಕರ್ತ ರಫಿ ರಿಪ್ಪನ್ ಪೇಟೆ..!

ಧರ್ಮಸ್ಥಳ ಅನನ್ಯ ಪ್ರಕರಣಕ್ಕೆ ಟ್ವಿಸ್ಟ್ ತಂದ ಮೊದಲ ಪತ್ರಕರ್ತ ರಫಿ ರಿಪ್ಪನ್ ಪೇಟೆ..!

ಸುಜಾತ ಭಟ್ ಬಂಡವಾಳ ಬಯಲು ಮಾಡಿದ ರೋಚಕ ಸ್ಟೋರಿ ಇದು.!

ಧರ್ಮಸ್ಥಳ ಪ್ರಕರಣವು ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದಾಗ, ಈ ಪ್ರಕರಣದ ನಿಜ ಚಿತ್ರಣವನ್ನು ಹೊರತೆಗೆದು ಟ್ವಿಸ್ಟ್ ತಂದವರು ಪತ್ರಕರ್ತ ರಫಿ ರಿಪ್ಪನ್ ಪೇಟೆ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ರಾಜ್ಯದ ಜನರ ದಿಕ್ಕು ತಪ್ಪಿಸಿದ್ದ ಸುಜಾತಾ ಭಟ್ ಕುರಿತು ಅಸಲಿ ಮಾಹಿತಿ ಬಹಿರಂಗಪಡಿಸಿದ ಮೊದಲ ಪತ್ರಕರ್ತರೂ ಇವರು.

ಆರಂಭದಲ್ಲಿ "ಸೌಜನ್ಯ" ಪ್ರಕರಣದಿಂದ ಆರಂಭವಾದ ಈ ಕಥೆ, ನಂತರ "ಅನನ್ಯ" ಎಂಬ ಹೆಸರಿನ ಹುಡುಗಿಯ ಕತೆಗೂ ತಲುಪಿತು. ಎ.ಐ. ವಿಡಿಯೋ ಮೂಲಕ ದೇವಸ್ಥಾನದ ವಿರುದ್ಧ ಅಪಪ್ರಚಾರ ನಡೆಯಿತು. ಸಮೀರ್ ಎಂಬ ಯೂಟ್ಯೂಬರ್ ಮಾಡಿದ ವಿಡಿಯೋ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿತ್ತು. ನಂತರ ಭೀಮ ಎಂಬಾತ "ನಾನು ಇಲ್ಲೇ ಕೆಲಸ ಮಾಡಿದ್ದೆ, ಶವಗಳನ್ನು ಹೂತ್ತಿದ್ದೇನೆ" ಎಂದು ಹೇಳಿ ಜನರ ವಿಶ್ವಾಸ ಪಡೆದುಕೊಂಡ. ಅದೇ ವೇಳೆಗೆ ಮತ್ತೊಬ್ಬ ಮಹಿಳೆ "ನಾನು ಸುಜಾತಾ ಭಟ್, ನನ್ನ ಮಗಳು ಅನನ್ಯ ನಾಪತ್ತೆಯಾಗಿದೆ" ಎಂದು ಹೇಳಿ ಕಥೆಗೆ ಹೊಸ ತಿರುವು ನೀಡಿದರು.

ಇಷ್ಟೆಲ್ಲ ಗೊಂದಲ ನಡೆಯುತ್ತಿದ್ದಾಗ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ತೀವ್ರಗೊಳ್ಳುತ್ತಿತ್ತು. ಸರ್ಕಾರದ ಎಸ್‌ಐಟಿ ತನಿಖೆಯೂ ಆರಂಭವಾಯಿತು. ಆದರೆ ಶವ ಪತ್ತೆಯಾಗದೆ ಪ್ರಕರಣ ಸಸ್ಪೆನ್ಸ್‌ನಲ್ಲೇ ಮುಂದುವರಿಯಿತು.

ರಫಿ ರಿಪ್ಪನ್ ಪೇಟೆಯ ಎಂಟ್ರಿ

ಎಸ್ ಐಟಿ ಮೂಲದಿಂದ ಸುಜಾತ ಭಟ್ ಗೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ದೊರೆತ ಸಣ್ಣ ಸುಳಿವಿನ ಆಧಾರದ ಮೇಲೆ ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ,ಯುವ ಪತ್ರಕರ್ತ ರಫಿ ರಿಪ್ಪನ್ ಪೇಟೆ ಕೂಡಲೇ ಕಾರ್ಯಪ್ರವೃತ್ತರಾಗಿ ಸುಜಾತಾ ಭಟ್ ಜಾಡು ಹಿಡಿದು ತನಿಖಾ ವರದಿ ಕೈಗೊಂಡು ಸುಜಾತ ಭಟ್ 2000 ನೇ ಇಸವಿಯಲ್ಲಿ ಸುಜಾತ ಬಾಳಿಗ ಆಗಿ ವಾಸವಿದ್ದ ಮನೆ ಹುಡುಕಿ ಅಲ್ಲಿನ ಅಕ್ಕಪಕ್ಕ ಮನೆಯವರು ಹಾಗೂ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿದರು. ಅಲ್ಲದೆ ಕಮಲವಾಣಿ ಮತ್ತು ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುಜಾತಾ ಭಟ್ ಸಂಬಂಧಿತ ಲೇಖನಗಳನ್ನು ತೆಗೆಯುವ ಮೂಲಕ ಮಹತ್ವದ ಸುಳಿವುಗಳನ್ನು ಪತ್ತೆ ಹಚ್ಚಿದ್ದರು.

ವ್ಯವಸ್ಥಿತ ಅಪಪ್ರಚಾರದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಅನನ್ಯ ಭಟ್ ಪ್ರಕರಣದಲ್ಲಿ ಸುಜಾತಾ ಭಟ್ ಅವರಿಗೆ ಮಗಳೇ ಇಲ್ಲ ಎಂಬ ಸತ್ಯ ಬಹಿರಂಗಪಡಿಸಿದರು. ಈ ಸುದ್ದಿ ಹೊರಬಿದ್ದ ಕೂಡಲೇ ಮೈನ್ ಸ್ಟ್ರೀಮ್ ಮಾದ್ಯಮಗಳಲ್ಲೂ ಅವರ ವೀಡಿಯೋಗಳು ಹರಿದಾಡಿ ಎಲ್ಲೆಡೆ ಸಂಚಲನ ಮೂಡಿಸಿತು ನಂತರ ಧರ್ಮಸ್ಥಳ ಪರವಾಗಿ ಜನತೆ ಪ್ರತಿಭಟನೆಯಲ್ಲಿ ತೊಡಗಿದರು. ದೇವಸ್ಥಾನದ ವಿರುದ್ಧ ಮಾತನಾಡುತ್ತಿದ್ದವರ ಬಾಯಿಗೆ ಬೀಗ ಬಿತ್ತು ಎನ್ನಬಹುದು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಲು ಪ್ರಯತ್ನಿಸಿದ್ದ ಸಮೀರ್ ಮತ್ತು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ರಫಿ ರಿಪ್ಪನ್ ಪೇಟೆ ಇಬ್ಬರೂ ಒಂದೇ ಸಮುದಾಯದವರಾದರೂ, ನಿಷ್ಠೆ – ಸತ್ಯವೇ ಮುಖ್ಯ ಎಂಬ ಭಾವನೆಯಿಂದ ರಫಿ ರಿಪ್ಪನ್ ಪೇಟೆ ನಿಂತರು. ಇದರ ಫಲವಾಗಿ ಪ್ರಕರಣವು ಹೊಸ ದಾರಿಯತ್ತ ತಿರುಗಿತು.

ಇಂದು ಯಾವುದೇ ಟಿವಿ ಮಾಧ್ಯಮಗಳು "ಮೊದಲ ಸುದ್ದಿ ನಮ್ಮದು" ಎಂಬ ಟ್ಯಾಗ್ ಹಾಕಿಕೊಳ್ಳಬಹುದಾದರೂ, ಧರ್ಮಸ್ಥಳ ಪ್ರಕರಣದಲ್ಲಿ ತಮ್ಮದೇ ಸ್ಥಳೀಯ ಮಾದ್ಯಮದಲ್ಲಿ ಸುದ್ದಿ ಬಿತ್ತರಗೊಳಿಸಿ ರಾಜ್ಯಮಟ್ಟದ ಚಾನೆಲ್ ಗಳು ತಮ್ಮತ್ತ ತಿರುಗುವಂತೆ ಮಾಡಿ ದೇವಸ್ಥಾನದ ವಿಚಾರದಲ್ಲಿ ಜನರ ಮನಸ್ಸು ತಿರುವು ಪಡೆಯಲು ಕಾರಣವಾದವರು ರಫಿ ರಿಪ್ಪನ್ ಪೇಟೆ ಎಂಬುದರಲ್ಲಿ ಸಂಶಯವಿಲ್ಲ.

ಸಮುದಾಯದವರ ತಪ್ಪಾದರೂ ಅದನ್ನು ತಪ್ಪೆಂದು ಹೇಳುವ , ಅನ್ಯಾಯದ ವಿರುದ್ದ ಸ್ಥಳಕ್ಕೆ ತೆರಳಿ ನೇರವಾಗಿ ಪ್ರಶ್ನಿಸುವ ಧೈರ್ಯ ಹೊಂದುವ ಮೂಲಕ ಸಮಾಜಮುಖಿ ಪತ್ರಕರ್ತರಾಗಿ ರಫಿ ರಿಪ್ಪನ್ ಪೇಟೆ ತಮ್ಮ ನೇರ ನುಡಿಯಿಂದ ರಾಜ್ಯದಲ್ಲಿಯೇ ಗುರುತಿಸಿಕೊಂಡಿದ್ದಾರೆ. ಇವರ ನಿಷ್ಠೆಯ ಕಾರ್ಯ ಇನ್ನಷ್ಟು ಬಲ ಪಡೆದು ಮುಂದುವರಿಯಲಿ ಎಂಬುದೇ ಸಾರ್ವಜನಿಕರ ಆಶಯ.

 - ಪವನ್ ಕುಮಾರ್ ಕಠಾರೆ
ಪತ್ರಕರ್ತರು , ಸಾಗರ

Post a Comment

Previous Post Next Post