ದೇಶದ ಸಣ್ಣ ಹಾಗೂ ಮಧ್ಯಮವರ್ಗದ ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ದೇಶದ ಸಣ್ಣ ಹಾಗೂ ಮಧ್ಯಮ ರೈತರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದ್ದು,ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಈಗಾಗಲೇ ನೀಡುವ ಆರ್ಥಿಕ ಅನುದಾನ ದುಪ್ಪಟ್ಟು ಮಾಡುವ ಚಿಂತನೆ ಮಾಡಿದೆ.

ರೈತ ಮೊಗದಲ್ಲಿ ಸಂತಸ : ಹೌದು ಈಗಾಗಲೇ ರೈತರು ಯೋಜನೆ ಅಡಿಯಲ್ಲಿ ನೋಂದಣಿಯಾಗಿರುವ ರೈತರಿಗೆ ಸಿಗುವ ಕೇಂದ್ರದ ಪಾಲು ವಾರ್ಷಿಕ 6000 ಸಾವಿರ 12000 ರೂಪಾಯಿಗೆ ಏರಿಕೆಯಾಗುವುದು.ರಾಜ್ಯ ಸರ್ಕಾರದ ಪಾಲುವಾರ್ಷಿಕ  ಪ್ರತ್ಯೇಕ ಹೊರತುಪಡಿಸಿ, ಮೂರು ತಿಂಗಳಿಗೆ 2000 ಬದಲಿಗೆ 4000 ಅನುದಾನ ಸಿಗುವುದು.


ಸೆಪ್ಟೆಂಬರ್ 30ರ ಒಳಗೆ  ನೋಂದಣಿ ಮಾಡಿಸಿ:ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ಕಿಸಾನ್ ಸಮ್ಮಾನ್ ಯೋಜನಾ ಲಾಭ ಪಡೆಯಲು ಇದೆ ತಿಂಗಳ 30ರ ಒಳಗೆ ನೋಂದಣಿ ಮಾಡಿಸಿ, ಅರ್ಜಿ ಸ್ವಿಕೃತವಾದರೆ ಅಕ್ಟೋಬರ್, ನವೆಂಬರ್ ನಲ್ಲಿ ಕಂತಿನ ಹಣ ರೈತರ ಖಾತೆಗೆ ಜಮೆಯಾಗುವುದು..

ಯಾರೆಲ್ಲ ಅರ್ಜಿ ಹಾಕಲು ಅರ್ಹರು :ದೇಶ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಈ ಯೋಜನೆಗೆ ಅರ್ಹರು. 2 ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿದ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಲು ಅರ್ಹರು.ಪ್ರಸ್ತುತ ಯೋಜನೆ ಅಡಿಯಲ್ಲಿ 11.5 ಕೋಟಿ ಅಧಿಕ ರೈತರು ಯೋಜನೆಯಲ್ಲಿ ನೋಂದಣಿಯಾಗಿದ್ದು ಸುಮಾರು 6000 ಕೋಟಿ ಅಧಿಕ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಆಗಿದೆ.

ಬೇಕಾಗುವ ದಾಖಲಾತಿಗಳ ವಿವರ :

1) ಆದಾಯ ದಾಖಲಾತಿ ಹಾಗೂ ಕೃಷಿ ಭೂಮಿ ವಿವರ ಪ್ರಮಾಣ ಪತ್ರ.

2)ಅರ್ಜಿದಾರರ ಆದಾರ್ ಕಾರ್ಡ್ ಕಡ್ಡಾಯವಾಗಿ ಬೇಕು.

3)ರೈತರು ಯಾವದಾದ್ರು ರಾಷ್ಟ್ರೀಕೃತ ಬ್ಯಾಂಕ್ ಖಾತೆ  ಪಾಸ್ ಬುಕ್.

4)ರೈತರ ಮೊಬೈಲ್ ಸಂಖ್ಯೆಯನ್ನ ಬ್ಯಾಂಕ್ ಖಾತೆ ಸಂಖ್ಯೆಗೆ ಹಾಗೂ ಆಧಾರ್ ಕಾರ್ಡ್ ಗೆ ಸಂಪರ್ಕ ಮಾಡಿರಬೇಕು.

5)ಕುಟುಂಬದ ರೇಷನ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಸೈಜ್ ಫೋಟೊಗಳು ಅರ್ಜಿ ಸಲ್ಲಿಸಲು ಅವಶ್ಯ ದಾಖಲೆಗಳು.

ಅರ್ಜಿ ಸಲ್ಲಿಸಲು "ಪಿಎಂ ಕಿಸಾನ್ ಸಮ್ಮಾನ್ "ಅದಿಕೃತ ವೆಬ್ಸೈಟ್ ಜಾಲ ತಾಣದಲ್ಲಿ ಮೇಲ್ಕಂಡ ದಾಖಲಾತಿ ನೀಡಿ ನೊಂದಣಿ ಮಾಡಬಹುದು.

Post a Comment

Previous Post Next Post