ಸಾಗರ:ಜಿಗಳೇಮನೆ ಸರ್ವೇ ನಂಬರ್ 36 ರ, ಜಾಗವನ್ನು ಯಾರಿಗೂ ಅತಿಕ್ರಮಿಸಲು ಬಿಡಬೇಡಿ ಶಾಸಕ :ಹರಾತಾಳು ಹಾಲಪ್ಪ

ಸಾಗರ : ಸಾಗರ ತಾಲೂಕು ತ್ಯಾಗರ್ತಿ ಸಮೀಪ ಜಿಗಳೇಮನೆಯ ಯುವಕ ರೈತ ಸಂಘದ ಕಾರ್ಯಚಟುವಟಿಕೆಗೆ ಸುಮಾರು ಮೂವತ್ತು ವರ್ಷಗಳಿಂದ ಕಾಯ್ದಿರಿಸಿಕೊಂಡು ಬಂದಿರುವ ಸ.ನಂ. 36ರ ಜಾಗವನ್ನು ಯಾರಿಗೂ ಅತಿಕ್ರಮಿಸಲು ಬಿಡಬೇಡಿ, ಯಾರಾದರೂ ಅತಿಕ್ರಮಿಸಲು ಯತ್ನಿಸಿ ಅನಾವಶ್ಯಕ ತೊಂದರೆ ನೀಡಿದರೆ ನನ್ನ ಗಮನಕ್ಕೆ ತನ್ನಿ, ಸಂಘದ ವತಿಯಿಂದ ನಡೆಯುವ ಸಾಮೂಹಿಕ ಕಾರ್ಯಚಟುವಟಿಕೆಗಳಿಗೆ ಈ ಜಾಗ ಬಳಕೆಯಾಗಲಿ, ಮಂಜೂರಾತಿ ಸಂಬಂಧಿತ ದಾಖಲಾತಿಗಳನ್ನು ಹಾಜರುಪಡಿಸಿದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಅಲ್ಲಿಯವರೆಗೂ ಯಾರ ಕಬಳಿಕೆಗೂ ಅವಕಾಶ ನೀಡದೆ, ಈಗಿರುವಂತೆಯೇ ಬಳಕೆಯಾಗಲಿ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರತಾಳು ಹಾಲಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ದಿನಾಂಕ 17.09.2021 ರಂದು ಉಳ್ಳೂರು ಸಮೀಪದ ಜಿಗಳೇಮನೆ ಊರಿನಲ್ಲಿ ಬಿಜೆಪಿ ಪಕ್ಷದ ಬೂತ್ ಕಮಿಟಿ ಪದಾಧಿಕಾರಿಗಳ ನೇಮಕದ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಈ ರೀತಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಜಿಗಳೇಮನೆ ಶಿರಗುಪ್ಪೆ ಬೂತ್ ಸಂಖ್ಯೆ 100ಕ್ಕೆ ಅಧ್ಯಕ್ಷರಾಗಿ ಗ್ರಾಮದ ಶ್ರೀ ಶ್ಯಾಮಣ್ಣ ಇವರನ್ನು, ಜೊತೆಗೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯ ಕ್ರಮದಲ್ಲಿ ಜಿಗಳೇಮನೆ ಶಿರಗುಪ್ಪೆ ಭಾಗದಲ್ಲಿ ಹಾಗೂ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ಅವಧಿಯಲ್ಲಿ ಕೈಗೊಂಡ ವಿವಿಧ ಜನಪರ  ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ನಂತರ ಸಾರ್ವಜನಿಕರು ಮತ್ತು ಗ್ರಾಮಸ್ಥರಿಂದ ಬಂದಂತಹ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಶಾಸಕರು, ಹಂತಹಂತವಾಗಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ಯಾಮಣ್ಣ ಇವರು ವಹಿಸಿದ್ದರು. ಉಳ್ಳೂರು ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ, ಉಪಾಧ್ಯಕ್ಷರು ಹಾಜರಿದ್ದರು

ವಿಡಿಯೋ ರಿಪೋರ್ಟ್




Post a Comment

Previous Post Next Post