ಹೊಸನಗರ : ರಾಷ್ಟ್ರ ಮಟ್ಟದ ಹೊನಲು ಬೆಳಕಿನ " ಹೊಸನಗರ ಬ್ರದರ್ಸ್ " ಕ್ರಿಕೆಟ್ ಪಂದ್ಯಾವಳಿಗೆ ತಹಶೀಲ್ದಾರ್ ಅವರಿಂದ ಉದ್ಘಾಟನೆ!!

ಹೊಸನಗರ:ಹೊಸನಗರದ ನೆಹರು ಮೈದಾನದಲ್ಲಿ ಜನವರಿ 16.17 18ರಂದು ಹೊಸನಗರ ತಾಲ್ಲೂಕು ಸತತ 3ನೇ ಬಾರಿಗೆ ರಾಷ್ಟ್ರ ಮಟ್ಟದ ಹೊನಲು ಬೆಳಕಿನ " ಹೊಸನಗರ ಬ್ರದರ್ಸ್ " ರವರಿಂದ ಕ್ರಿಕೆಟ್ ಪಂದ್ಯಾ ವಳಿಯನ್ನು ಆಯೋಜಿಸಲಾಗಿದ್ದು ಇಂದು ಹೊಸನಗರ ತಾಲೂಕು ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಉದ್ಘಾಟನೆ ಮಾಡಿದ್ದೂ ಬ್ಯಾಟ್ ಬೀಸಿ ಗಮನ ಸೆಳೆದರು ಈ ಸಂದರ್ಭದಲ್ಲಿ ಬ್ರದರ್ಸ್ ಕ್ರೀಡಾಕೂಟದ ಅಧ್ಯಕ್ಷರಾದ ಸಂತೋಷ್ ಕೊಟ್ಯಾನ್‌ರವರು ಹಾಗೂ ಆಯೋಜಕರು ಮತ್ತಿರರು ಸಾಥ್ ನೀಡಿದರು..!!.ನಾವು ಸತತ ಮೂರು ವರ್ಷಗಳಿಂದ ಹೊಸನಗರ ಬ್ರದರ್ ಎಂಬ ಹೆಸರಿನಲ್ಲಿ ಕ್ರೀಡಾಕೂಟ ವನ್ನು ಆಯೋಜಿಸಲಾಗುತ್ತಿದ್ದು.2ವರ್ಷ ಅತೀ ಉತ್ತಮ ಯಶಸ್ಸು ಕಂಡಿದ್ದು, 3ನೆ ವರ್ಷವೂ ಅದ್ದೂರಿಯಾಗಿ ಆಯೋಜನೆ ಮಾಡಲಾಗುತ್ತಿದೆ ಎಂದೂ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದರು...!

ಪಂದ್ಯಾವಳಿಯ ವಿಶೇಷತೆ ಎಂದರೇ ರಾಷ್ಟ್ರೀ ಯ ಮತ್ತು ರಾಜ್ಯ ಹಾಗೂ ಮಲೆನಾಡು ಪ್ರತಿಷ್ಠಿತ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈ ಪಂದ್ಯಾವಳಿಯ ನೇರ ಪ್ರಸಾರವನ್ನು S7 ಸ್ಪೋರ್ಟ್ ಯೌಟ್ಯೂಬ್ ಚಾನೆಲ್ ನಲ್ಲಿ ಮಾಡಲಾಗುವುದು ಎಂದರು. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲ್ಲೂಕಿನ ಕ್ರೀಡಾಭಿಮಾನಿಗಳು ಹಾಗೂ ಹೊಸನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಕ್ರೀಡಾಪಟುಗಳನ್ನು ಉತ್ಸಾಹದೊಂದಿಗೆ ಕ್ರಿಕೆಟ್ ಆಟಗಾರರಿಗೆ ಆಟವಾಡಲು ಉತ್ತೇಜಿಸಬೇ ಕೆಂದು ಈ ಮೂಲಕ ಕೇಳಿಕೊಂಡರು...

ಉದ್ಘಾಟನೆ ಸಂದರ್ಭದಲ್ಲಿ ಸಂತೋಷ್ ಕೊಟ್ಯಾನ್. ಮಹೇಶ್ ಬಾಣಿಗ, ರೋಹಿತ್ ಗೌಡ ಚಿಕ್ಕಮಣತಿ ಇಸ್ಮಾಯಿಲ್, ಪ್ರವೀಣ್ ಜಿ.ಎಸ್. ಪ್ರವೀಣ್ ಹೆಚ್.ವಿ. ವಿಕ್ರಮ್, ಗಣೇಶ್, ರಾಘ ವೇಂದ್ರ, ಅನೂಪ್, ತೌಫಿಕ್, ವಿನಯ್‌ ಕುಮಾರ್, ಸುರೇಂದ್ರ ಕೊಟ್ಯಾನ್, ಕಟ್ಟೆ ಸುರೇಶ, ಮುಜೀಬ್, ಸುನೀಲ್ ಪಟೇಡಿ, ಕಾರ್ತಿಕ್, ವೆಂಕಟೇಶ್ ವಿಜು. ರೋಹಿತ್ ಗೌಡ, ಹೆಚ್.ಎಸ್. ರಾಘ ವೇಂದ್ರ, ಅವಿನಾಶ್, ಮಾಂತೇಶ್, ಸಂದೀಪ್ ಶರತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.








Post a Comment

Previous Post Next Post