ಹೊಸನಗರ :
ಗ್ರಾಮಭಾರತಿ ಟ್ರಸ್ಟ್ ಕಾರಣಗಿರಿ, ಗ್ರಾಮವಿಕಾಸ ಸಮಿತಿ, ಅರೋಗ್ಯ ಭಾರತಿ ಶಿವಮೊಗ್ಗ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 13.10.2024 ನೇ ಭಾನುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆವರೆಗೆ ರಾಷ್ಟ್ರೋತ್ಥಾನ ಸಂಸ್ಕೃತಿ ಭವನ ಕಾರಣಗಿರಿಯಲ್ಲಿ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಈ ಕೆಳಕಂಡ ಅನಾರೋಗ್ಯಕ್ಕೆ ಉಚಿತ ಆಯುರ್ವೇದ ತಪಾಸಣಾ-ಸಲಹೆ ಉಚಿತ ಔಷಧ ವಿತರಣೆ, ತಜ್ಞ ವೈದ್ಯರಿಂದ ಏರ್ಪಡಿಸಲಾಗಿದೆ.
* ಕಿವಿನೋವು, ಮೂಗಿನ ದುರ್ವಾಸನೆ, ಕೂದಲು ಉದುರುವಿಕೆ, ಗಂಟಲು ನೋವು.
* ಮುಖದ ಮೊಡವೆ, ಕಲೆ, ತಲೆಹೊಟ್ಟು, ಬಿಳಿಕೂದಲು, ಕಣ್ಣು ಉರಿ, ಕಣ್ಣುಕುಟ್ಲೆ, ದೃಷ್ಟಿ ದೋಷ
* ಉಸಿರಾಟ ತೊಂದರೆ, ತಲೆಭಾರ, ತಲೆನೋವು, ನೆಗಡಿ, ಹಲ್ಲುನೋವು, ಹಲ್ಲು ಹುಳುಕು.
* ಬಾಯಿ ಹುಣ್ಣು, ಸಣ್ಣಮಕ್ಕಳ ದೃಷ್ಟಿ ದೋಷ, ಕಿವಿಯ ಗುಗ್ಗೆ, ಕಿವಿಯಲ್ಲಿ ಶಬ್ದ, ಅಲೋಪೇಸಿಯಾ.
* ಅರ್ಧ ತಲೆನೋವು, ಮೂಗಿನ ರಕ್ತಸ್ರಾವ, ರಕ್ತದೊತ್ತಡ ಮತ್ತು ಮಧುಮೇಹ.
* ಅಲರ್ಜಿ, ಶೀತದ ತೊಂದರೆ ಮುಂತಾದ ಅನಾರೋಗ್ಯಕ್ಕೆ ಉಚಿತ ಆಯುರ್ವೇದ ತಪಾಸಣೆ ಇರುತ್ತದೆ.
Tags:
ಹೊಸನಗರ