ಹೊಸನಗರ : ಶಿವಮೊಗ್ಗದಲ್ಲಿ ನಿನ್ನೆ ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ ಮಾರುತಿಪುರ ಶಾಲೆಯ ವಿದ್ಯಾರ್ಥಿ ಪ್ರೀತಮ್ ಎನ್. ತಟ್ಟೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ (ರಾಜ್ಯ ಮಟ್ಟಕ್ಕೆ ) ಆಯ್ಕೆಯಾಗಿದ್ದಾರೆ. ಹಾಗೂ ಬಾಲಕಿಯರ ಕಬ್ಬಡಿ ತಂಡ ಸಹ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.ಪ್ರೀತಮ್ ಮಾರುತಿಪುರ ಪಂಚಾಯತ್ ಬಡೇನಕೊಪ್ಪ ಊರಿನ ರಂಜಿತ್ ಹಾಗೂ ಚೈತ್ರ ದಂಪತಿಗಳ ಪುತ್ರನಾಗಿದ್ದು ಊರಿನ ಗ್ರಾಮಸ್ಥರು ಸ್ನೇಹಿತರು ಸಂಬಂದಿಕರು ವಿದ್ಯಾರ್ಥಿಗಳ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ!!ಅಮೃತ ಎಸ್, ವನಜಾಕ್ಷಿ,ದೇವಿಕ,ಆಶ್ವಿತ,ಭೂಮಿಕ ಕಬ್ಬಡಿ ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು...
ಗ್ರಾಮೀಣ ಭಾಗದ ಶಾಲೆ ಹಾಗೂ ಸೂಕ್ತ ದೈಹಿಕ ಶಿಕ್ಷಕರಿಲ್ಲದಿದ್ದರೂ ಸಹ ಶಾಲಾ ಮಕ್ಕಳ ಸಾಧನೆ ಗಮನಾರ್ಹವಾಗಿದ್ದು!!ಹಾಗೂ ಈ ಸಾಧನೆಗೆ ಬೆನ್ನೆಲುಬಾಗಿದ್ದು ಮಾರ್ಗದರ್ಶಕರಾಗಿದ್ದು ಇದೆ ಶಾಲೆಯ ಹಳೆ ವಿದ್ಯಾರ್ಥಿಗಳು. ಶರತ್, ಯತೀರಾಜ್, ಕೊಲ್ಲೂರಪ್ಪ, ರಾಘು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘವೇಂದ್ರ ಮತ್ತು ಸದಸ್ಯರ ಬಳಗ.....
ಅಭಿನಂದನೆಗಳು
ಮಲ್ನಾಡ್ ಲೈವ್ ತಂಡ ಸಹ ಅಭಿನಂದನೆಗಳನ್ನ ಸಲ್ಲಿಸುತ್ತ!
ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ಪ್ರಕಾಶ್, ಮತ್ತು ಸಹ ಶಿಕ್ಷಕರುಗಳಾದ ಚಂದ್ರಶೇಖರ, ಪರಮೇಶ್ವರಪ್ಪ, ಅನಿತಾ, ಅತಿಥಿ ಶಿಕ್ಷಕಿಯರಾದ ಕುಮಾರಿ ವಿದ್ಯಾ ಎಚ್. ಎನ್. ಕುಮಾರಿ ಭೂಮಿಕಾ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ...!
ವರದಿ :ಅಜಿತ್ ಗೌಡ ಬಡೇನಕೊಪ್ಪ