ಮಾರುತಿಪುರ :ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಜಲ ಜೀವನ ಮಿಷನ್ ಯೋಜನಾ ಅಡಿಯಲ್ಲಿ ಕೋಟಿ ಕೋಟಿ ಹಣ ಸುರಿದು ಗುಡ್ಡಗಾಡು ಪ್ರದೇಶಕ್ಕೂ ಕುಡಿಯುವ ನೀರಿನ ಪೂರೈಕೆ ಮಾಡುವುದು ಮಲೆನಾಡಿಗೆ ದುಸ್ತರವಾದಂತೆ ಕಂಡು ಬರುವಂತೆ ಕಾಣುತ್ತಿದೆ,
ಹೌದು, ಯಾಕೆಂದರೆ ಬಹುತೇಕ ಮಲೆನಾಡಿನ ದಿನ ನಿತ್ಯದ ಓಡಾಟದ ಸಂಪರ್ಕಕ್ಕೆ ಮಣ್ಣಿನ ರಸ್ತೆಗಳೇ ಸಹಕಾರಿ, ಮಳೆಗಾಲದಲ್ಲಂತು ಇಂತಹ ಮಣ್ಣಿನ ರಸ್ತೆಯಲ್ಲಿ ಓಡಾಟ ಮಾಡುವುದೇ ಪ್ರಯಾಸದ ಪ್ರಯಾಣ,ಇಂತಹ ಪರಿಸ್ಥಿತಿ ಕಣ್ಣಾರೆ ಮನಗಂಡರೂ,ಸಹ ಈ ಜಲ ಜೀವ ಮಿಷನ್ ಯೋಜನಾ ಕಾಮಗಾರಿ ಮಾಡುವವರು ಸರಿಯಾಗಿ ಮಳೆಗಾಲದಲ್ಲೆ! ರಸ್ತೆಯ ಇಕ್ಕೆಲಗಳನ್ನ ಅಗೆದು ಕೆಸರು ರಾಡಿ ಮಾಡಿದ್ದು ನಿತ್ಯದ ಓಡಾಟಕ್ಕೆ ಸಂಕಟ ಪಡುವಂತೆ ಆಗಿದೆ!!
ಹೌದು ವಿಜಾಪುರ -ಮಂಕೋಡು ಪ್ರೇಮ ಕುಮಾರ್ (ಸ್ವಾಮಿ ಗೌಡ) ಮನೆಗೆ ಕಲ್ಪಿಸುವ ರಸ್ತೆ ಕೆಸರುಮಯವಾಗಿದ್ದು,ನಿತ್ಯದ ಓಡಾಟ ಕಷ್ಟಕರವಾಗಿದೆ!!ಮಳೆಗಾಲ ಪೂರ್ವದಲ್ಲೇ ಕಾಮಗಾರಿ ಪೂರ್ಣಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿತ್ತು!!
ಸಂಬಂಧ ಪಟ್ಟ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿ ವರ್ಗ ಸೂಕ್ತ ರೀತಿಯಲ್ಲಿ ಕಾಮಗಾರಿ ನೆಡೆಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ....!!
ಜಲ ಜೀವನ ಮಿಷನ್ ಕುಡಿಯುವ ನೀರು ಯೋಜನೆ ರಸ್ತೆಬದಿಯಲ್ಲಿನ ಹಾಗೂ ನಗರ ಪ್ರದೇಶ ಆಯಾಕಟ್ಟಿನ ಪ್ರದೇಶದಲ್ಲಿ, ಅತೀ ಹೆಚ್ಚಿನ ಅನುಕೂಲವಾಗಿದ್ದು..!! ಹೊಸನಗರ ಹಾಗೂ ತೀರ್ಥ ಹಳ್ಳಿ ಭಾಗದಲ್ಲಿ ಬಹುತೇಕ ಮನೆಗಳು ಕಾಡಿನ ಒಳಗೆ ಗುಡ್ಡಗಾಡಿನೊಳಗೆ ಇರುವಂಥ ಮನೆಗಳು, ಇಂತಹ ಜನ ನಿಬಿಡ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಸಂಪರ್ಕ ಕಲ್ಪಿಸಿಕೊಡುವುದು ಚಾಲೆಂಜಿಂಗ್ ಕೆಲಸ!! ಮಲೆನಾಡಿಗೆ ಅದರಲ್ಲೂ ಗುಡ್ಡಗಾಡು ಪ್ರದೇಶಕ್ಕೆ ಈ ಯೋಜನೆ ಅಷ್ಟೊಂದು ಸೂಕ್ತವಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ!!
ವ್ಯಾಪಕ ಹಣವನ್ನ ಈ ಕುಡಿಯುವ ನೀರಿಗೆ ಸಂಪರ್ಕಕ್ಕೆ ವ್ಯಯ ಅನವಶ್ಯಕ ವೆಚ್ಚ ಎಂಬುದು ಕೆಲವರ ವಾದ,!!ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮರ್ಪಕ ಯೋಜನೆ ಮಾಡುವುದು ಒಳಿತು....
ವರದಿ :ಅಜಿತ್ ಗೌಡ ಬಡೇನಕೊಪ್ಪ