ಮಾರುತಿಪುರ : ತೋಟಕ್ಕೆ ಔಷಧಿ ಸಿಂಪಡಿಸುವಾಗ ಕೃಷಿಕ ಅಕಾಲಿಕ ನಿಧನ!!

ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯಿತಿ ಬಡೇನಕೊಪ್ಪ ಊರಿನ ಗಣೇಶ್ ಪೂಜಾರಿ ತೋಟಕ್ಕೆಹಾಗೂ ಬೆಳೆಗೆ ಕ್ರಿಮಿನಾಶಕ ಔಷಧವನ್ನು ಸಿಂಪಡಿಸುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥರಾಗಿದ್ದು.!!

ಪ್ರತಿಕೂಲ ಹವಾಗುಣವ ಏನೋ ಗೊತ್ತಿಲ್ಲ ಕೃಷಿಕ ಗಣೇಶ್ ಪೂಜಾರಿಗೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ತಕ್ಷಣವೇ ಕುಟುಂಬದವರು ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸನಗರ ಆಸ್ಪತ್ರೆಗೆ ಸೇರಿಸಲಾಗಿದ್ದು.ಪರಿಸ್ಥಿತಿ ಉಲ್ಬಣವಾಗಿದ್ದು,ಶಿವಮೊಗ್ಗ ಜಿಲ್ಲಾ ಆಸ್ಪತ್ರೆ ಸೇರಿಸಿದ್ದು ಅಲ್ಲಿ ಯಾವುದೇ ರೀತಿಯ ಪ್ರಯೋಜನವಾಗಿಲ್ಲ!!

ರಕ್ತದ ವಾಂತಿ ಜಾಸ್ತಿಯಾಗಿದ್ದು, ಅವರ ದೇಹದ ಸ್ಥಿತಿ ಹತೋಟಿಗೆ ಬರುವಲ್ಲಿ ವಿಫಲವಾದ ಹಿನ್ನೆಲೆ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ..

ಔಷಧಿ ಹೊಡೆಯುವ ಪ್ರಕ್ರಿಯೆಯಲ್ಲಿ ಪರಿಣಿತರಾಗಿದ್ದ ಹಾಗೂ,ಗಣೇಶ್ ಪೂಜಾರಿಯವರು ಈ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವನ್ನು ವಹಿಸುತ್ತಿದ್ದರು ಆದರೂ ಈ ಬಾರಿ ದುರಾದೃಷ್ಟವಶಾತ್ ಅವರಿಗೆ ಈ ದುರಂತ ಬಂದೊದಗಿದೆ...

ಕುಟುಂಬಕ್ಕೆ ಇದ್ದ ಒಂದೇ ಆಸರೆ ಗಣೇಶ ಪೂಜಾರಿ ಮೃತರು, ಇಬ್ಬರು ಗಂಡು ಮಕ್ಕಳು, ವಯಸ್ಸಾದ ಮಾವ,ಪತ್ನಿಯನ್ನ  ಕುಟುಂಬವನ್ನ ಅಕಾಲಿಕವಾಗಿ ಅಗಲಿದ್ದು ಅತ್ಯಂತ ದುಃಖದ ಸಂಗತಿ ಆಗಿದೆ...!!ಯಾವಾಗಲು ಅತೀ ಹೆಚ್ಚು ಚಟುವಟಿಕೆಯಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ, ಊರಿನವರ ಜೊತೆಗೆ ನಿಷ್ಕಲ್ಮಶವಾಗಿ ತನ್ನನ್ನ ತಾನುತೊಡಗಿಸಿಕೊಂಡಿದ್ದ ಗಣೇಶ ಪೂಜಾರಿ ನಿಧನಕ್ಕೆ ಬಡೇನಕೊಪ್ಪ ಗ್ರಾಮಸ್ಥರು ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ...

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು,ಜನಪ್ರತಿನಿದಿಗಳು ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಸಾಂತ್ವನ ನೀಡಬೇಕು ಎಂಬುದು ಊರಿನ ಗ್ರಾಮಸ್ಥರು ಹಿತೈಷಿಗಳು, ಒತ್ತಾಯ ಮಾಡಿದ್ದಾರೆ.ಕುಟುಂಬ ಅತ್ಯಂತ ಕಡು ಬಡವರಾಗಿದ್ದು ಇಬ್ಬರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಕುಟುಂಬದ ಕೊಂಡಿ ಕಳಚಿದ್ದು ಅತೀ ಗಂಭೀರ ಸಮಸ್ಯೆ ಇದಾಗಿದ್ದು ತಕ್ಷಣವೇ ಸ್ಪಂದನೆ ನೀಡಿ ಎಂಬುದು ಗ್ರಾಮಸ್ಥರ ಆಗ್ರಹ.

ರೈತರಿಗೆ ಸರಿಯಾದ ಮಾಹಿತಿ ನೀಡದೇ,ಔಷಧಿಯನ್ನು ಮಾರಾಟ ಮಾಡುತ್ತಿರುವುದು ಖಂಡನೀಯ!. ಹಾಗಾಗಿ, ಪೊಲೀಸರು  ಈ ಬಗ್ಗೆ  ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಿ ಎಂಬುದು ಸಾರ್ವಜನಿಕ ಬಂಧುಗಳ ಆಗ್ರಹ, ಹಾಗೂ ಇಷ್ಟೊಂದು ವಿಷ- ಪೂರಿತ ಪ್ರಕೃತಿ ವಿರೋಧಿ, ಮಣ್ಣಿನ ಸತ್ವ ಹಾಳು ಮಾಡುವ ಔಷದಿಗಳ ಮಾರಾಟ ಹಾಗೂ ಉತ್ಪಾದನೆಗೆ ಸರ್ಕಾರ ಕಡಿವಾಣ ಹಾಕಲೇಬೇಕು.ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಬೆಳೆದು ತಿನ್ನುವ ಈ ಭೂಮಿ ಸಂಪೂರ್ಣ ವಿಷಮಯ ವಾಗುದರಲ್ಲಿ ಅನುಮಾನವೆ ಇಲ್ಲಾ!!.

ಹೌದು ಈ ಹಿಂದೆ ಕೂಡ ಮೈಸೂರು ಜಿಲ್ಲೆಯಲ್ಲಿಯೂ ಸಹ ಲ್ಯಾನೆಟ್ ಔಷದಿ ಸಿಂಪಡಿಸಿ 70 ಹೆಚ್ಚು ರೈತರು ಆಸ್ವಸ್ಥರಾಗಿದ್ದು ಬೆಳೆಕಿಗೆ ಬಂದಿದ್ದು, ರೈತರಿಗೆ ಜಾಗೃತಿ ಮೂಡಿಸಬೇಕಿದೆ..

ಇಂಥವ ವಿಷಪೂರಿತ ಔಷದಿಗಳು ನಾವು ತಿನ್ನುವ ಆಹಾರ, ಹಣ್ಣು ಗಳಿಗೆ ಸಿಂಪಡಣೆ ಅತ್ಯಂತ ಅಪಾಯಕಾರಿ, ಹಾಗೂ ನಮ್ಮ ಭೂಮಿ ಈಗ ವಿಷವರ್ತೂಲದಲ್ಲಿ ಸಿಲುಕಿದ್ದು, ಅತ್ಯಂತ ದುರಂತವೆ ಸರಿ...





ವರದಿ : ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post