ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಡ ಮಕ್ಕಳಿಗೆ ಬೇಕಿದೆ ನೆರವು..
ರಿಪ್ಪನ್‌ಪೇಟೆ ಪಟ್ಟಣದ ಗಾಂಧಿನಗರದ ನಿವಾಸಿ ರಾಮು ರವರ ಮೂರು ವರ್ಷದ ಮಗ ದರ್ಶನ್(ದಚ್ಚು) ಹಾಗೂ ಶೇಖರ್ ರವರ 11 ವರ್ಷದ ಮಗ ವಿನೋದ್ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತಿದ್ದು ಸಹೃದಯರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಈ ಮುದ್ದು ಮಕ್ಕಳಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಖಾಯಿಲೆಯಿದ್ದು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ತೋರಿಸಿ ತಕ್ಕಮಟ್ಟಿಗೆ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದಾರೆ ಆದರೆ ಈಗ ಮಕ್ಕಲೀಗೆ ಕೂಡಲೇ ಆಪರೇಷನ್ ಅಗತ್ಯವಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಆದರೆ ಬಡ ಕುಟುಂಬಕ್ಕೆ ಅಷ್ಟು ಆರ್ಥಿಕ ಶಕ್ತಿ ಇಲ್ಲದೇ ಇರುವುದರಿಂದ ದೇವರ ಮೇಲೆ ಭಾರ ಹಾಕಿ ಕೈ ಚೆಲ್ಲಿ ಕುಳಿತು ಬಿಟ್ಟಿದ್ದರು.
ಇತ್ತೀಚೆಗೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ರವರಿಗೆ ವಾರ್ಡ್ ವಾರು ಸಾರ್ವಜನಿಕರ ಮೀಟಿಂಗ್ ಮಾಡುವಾಗ ಈ ವಿಷಯ ತಿಳಿದಿದೆ ಕೂಡಲೇ ಪೋಷಕರನ್ನು ತರಾಟೆಗೆ ತೆಗೆದುಕೊಂಡು ಕೈ ಚೆಲ್ಲಿ ಕೂರದೇ ಚಿಕಿತ್ಸೆ ಮುಂದುವರೆಸಿ ನನ್ನ ಕೈಲಾದ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮಕ್ಕಳ ಹೃದಯ ಸಂಬಂಧಿ ಖಾಯಿಲೆಯ ಬಗ್ಗೆ ಪಿಎಸ್‌ಐ ಪ್ರವೀಣ್ ರವರು ಇಂದು ನನ್ನ ಗಮನಕ್ಕೆ ತಂದರು.ಬಾಲಕನನ್ನು ಬೆಂಗಳೂರಿಗೆ ಕರೆದೊಯ್ದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು , ಈಗಾಗಲೇ ಶಿವಮೊಗ್ಗದ ನಾರಾಯಣ ಹೃದಯಾಲದಲ್ಲಿ ಪರೀಕ್ಷೆ ನಡೆಸಿ ರಿಪೋರ್ಟ್ ಪಡೆಯಲಾಗಿದ್ದು ಸಹೃದಯಿ ಸಾರ್ವಜನಿಕರಲ್ಲಿ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮನವಿ ಮಾಡುತ್ತೇನೆ.. ದಯವಿಟ್ಟು ಸಹಕರಿಸಿ..
ಬಡವರು ತಮ್ಮ ಮುಗ್ಧ ಮಕ್ಕಳ ಬಗ್ಗೆ ದೊಡ್ಡ ದೊಡ್ಡ ಆಸೆಯನ್ನು ಇಟ್ಟುಕೊಳ್ಳುವುದು ಸಹಜ ಆದರೆ ಕೆಲವೊಮ್ಮೆ ಬಡವರ ಮಕ್ಕಳಿಗೆ ಕ್ರೂರಿ ವಿಧಿಯು ಹಣೆಬರಹವೇ ಬೇರೆ ಬರೆದಿರುತ್ತಾನೆ ಎನ್ನಲು ಈ ಬಾಲಕನೆ ಜ್ವಲಂತ ಸಾಕ್ಷಿ. ಬದುಕು ಕಟ್ಟಿಕೊಂಡು ಬದುಕಿನಲ್ಲಿ ಏನಾದರೂ ಸಾಧನೆ ಮಾಡ್ಬೇಕು, ಛಲ ದೊಂದಿಗೆ ಪ್ರಪಂಚದ ಬೆಳಕು ಕಂಡ ಈ ಪುಟ್ಟ ಬಾಲಕನಿಗೆ ಭವಿಷ್ಯ ಕಟ್ಟಿಕೊಡುವುದರ ಜೊತೆಗೆ ಜೀವನವನ್ನು ಕೂಡ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದೆಡೆ ನೋವು ,ಇನ್ನೊಂದೆಡೆ ಹತಾಶೆ ಹಾಗೂ ಈ ಬಾಲಕನ ಈ ಕಾಯಿಲೆಗೆ ಕುಟುಂಬವೇ ಮರುಗಿದೆ.
ಸಾಂತ್ವನದ ಧ್ವನಿಗಳು ಕುಟುಂಬಕ್ಕೆ ಎಲ್ಲವನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ತುಂಬಬೇಕಾಗಿದೆ.
ರಫ಼ಿ ರಿಪ್ಪನ್‌ಪೇಟೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9845845844