ಹೊಸನಗರ :ಮಾರುತಿಪುರ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಶರನ್ನವರಾತ್ರಿಯ ವೈಭವದ ಪೂಜಾ ಅನುಷ್ಠಾನ!!

ಮಾರುತಿಪುರ

ದಿನಾಂಕ : 15-10-2023, ಭಾನುವಾರ ದಿಂದ 24-10-2023 ರವರೆಗೆ ಲೋಕಕಲ್ಯಾಣಾರ್ಥವಾಗಿ ಹಾಗೂ ಸರ್ವಜನರ ಶ್ರೇಯಸ್ಸಿಗಾಗಿ ಶ್ರೀ ಮನಿ।ಪ್ರ। ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸದಾನಂದ ಶಿವಯೋಗಾಶ್ರಮ, ಮೂಲೆಗದ್ದೆ ಮಠ, ಹೊಸನಗರ ತಾ|| ಇವರ ಕೃಪಾಶೀರ್ವಾದಗಳೊಂದಿಗೆ ಹೊಸನಗರ ತಾಲೂಕು ಮಾರುತಿಪುರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈ ಕರ್ಯ ಜರುಗಲಿದೆ..

ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶಕ 1945ನೇ ಶೋಭಕೃತು ನಾಮ ಸಂ||ರದ ಆಶ್ವಿಜ ಶುದ್ಧ ಪ್ರತಿಪದ ದಿನಾಂಕ 15-10-2023, ಭಾನುವಾರದಿಂದ 24-10-2023 ಮಂಗಳವಾರದವರೆಗೆ ದಸರಾ ಶರನ್ನವರಾತ್ರಿ ಆರಾಧನೆ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ಸಹ ಮಾರುತಿಪುರ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಶರನ್ನವರಾತ್ರಿಯ ನಿಮಿತ್ತವಾಗಿ ಒಂಬತ್ತು ದಿನಗಳ ಕಾಲ ಜಗಜ್ಜನನಿ ದುರ್ಗೆಯನ್ನು 9 ಅವತಾರಗಳಲ್ಲಿ ಬಹು ವಿಜೃಂಭಣೆಯಿಂದ ಪೂಜಿಸಿ ಆರಾಧಿಸಲು ಅಧ್ಯಕ್ಷರು ಹಾಗೂ ಸದಸ್ಯರು, ಸೇವಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ, ಮಾರುತಿಪುರ ಇವರುಗಳ ಸಹಕಾರಗಳೊಂದಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಮಹತ್ತರವಾದ ವೈಶಿಷ್ಟ್ಯಪೂರ್ಣ ದೇವತಾ ಆರಾಧನೆಯಲ್ಲಿ ತಾವುಗಳು ತನು-ಮನ-ಧನ ಸಹಕಾರಗಳೊಂದಿಗೆ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಲು ತಮ್ಮಲ್ಲಿ ವಿನಯಪೂರ್ವಕವಾಗಿ ಕೋರುತ್ತೇವೆ.

ದಿನಾಂಕ 24-10-2023, ಮಂಗಳವಾರ ಬೆಳಿಗ್ಗೆ ಶ್ರೀ ಶಕ್ತಿಮಾತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯೊಂದಿಗೆ ವಿಜಯೋತ್ಸವದ ಸಂಕೇತವಾಗಿ ಬನ್ನಿ ಪೂಜೆ, ಬನ್ನಿ ಮುಡಿಯುವುದು ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳೊಂದಿಗೆ ವಿಜಯದಶಮಿಹಬ್ಬವನ್ನು ಆಚರಿಸಲಾಗುವುದು.

Post a Comment

Previous Post Next Post