ಶಿವಮೊಗ್ಗ : ಸಾಗರದಲ್ಲಿ ದಿಢೀರ್ ರಾಜಕೀಯ ಕ್ಷಿಪ್ರ ಬೆಳವಣಿಗೆ! ಕಾಗೋಡು ತಿಮ್ಮಪ್ಪ ಬೇಸರ!!!

ಸಾಗರ : ರಾಜ್ಯ ಬಿಜೆಪಿ ಶಕ್ತಿ ಕೇಂದ್ರ, ಭದ್ರಕೋಟೆ ಭವಿಷ್ಯ ಕೋಟೆ ಎಂದೇ ಬಿಂಬಿಸುವ ಶಿವಮೊಗ್ಗ ಜಿಲ್ಲೆ ವಿಧಾನ ಸಭಾ ಚುನಾವಣೆ ರಂಗು ಪಡೆದಿದ್ದು, ಸಾಗರ - ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೆ ರಾಜಕೀಯ ಕ್ಷಿಪ್ರಾ ಬೆಳವಣಿಗೆ ಸಾಕ್ಷಿಯಾಗಿದ್ದುಡಾ.ರಾಜನಂದಿನಿ ಸಾಗರದಲ್ಲಿ ಕಾಂಗ್ರೆಸ್‌ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್‌ ಟಿಕೆಟ್‌ ಕಾಗೋಡು ತಿಮ್ಮಪ್ಪರ ಅಳಿಯ ಮಾಜಿ ಶಾಸಕ, ಕೆಪಿಸಿಸಿ ವಕ್ತಾರಾದ ಬೇಳೂರು ಗೋಪಾಲಕೃಷ್ಣ ಪಾಲಾಗಿತ್ತು!.

ಇದಾದ ಬಳಿಕ, ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ KPCC ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಇಂದು ಪಕ್ಷಪಲ್ಲಟ ಮಾಡಿದ್ದು ಕ್ಷೇತ್ರದ ಹಾಲಿ MLA ಆದ ಹಾಲಪ್ಪ ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರು ಆದ ನಳೀನ್ ಕುಮಾರ್ ಕಟೀಲ್, ಸಿ ಟಿ ರವಿ,ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.ರಾಜ ನಂದಿನಿ ಜೊತೆಗೆ ಮಾಜಿ ಜಿಲ್ಲಾಪಂಚಾಯತ್ ಸದಸ್ಯರು ಆದ ರತ್ನಾಕರ ಹೋನಗೋಡ್ ಸಹ ಬಿಜೆಪಿ ಸೇರ್ಪಡೆ ಯಾಗಿದ್ದು ಯಾವುದೇ ಮುನ್ಸೂಚನೆ ನೀಡದೆ,ಚರ್ಚೆ ಮಾಡದೇ ದಿಢೀರ್ ನಿರ್ಧಾರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಸ್ವತಃ ಕಾಗೋಡು ತಿಮ್ಮಪ್ಪ ಅವರು ಸಹ ದಿಗ್ಬ್ರಮೆ ಒಳಗಾಗಿದ್ದು ಪುತ್ರಿಯ ನೆಡೆಗೆ ಬೇಸರ ಹೊರ ಹಾಕಿದ್ದಾರೆ..

ಕಾಗೋಡು ತಿಮ್ಮಪ್ಪರ ಪುತ್ರಿ ಬಿಜೆಪಿ ಗೆ ಸೇರಿದರೆ ಮತ್ತಷ್ಟು ಶಕ್ತಿ ಬರುವ ಸಾಧ್ಯತೆಯಲ್ಲಿ ರಾಜಕೀಯ ಬೆಳವಣಿಗೆ ನಡೆದಿದೆ ಎನ್ನಲಾಗಿದೆ‌ ಕಾಂಗ್ರೆಸ್ ನಲ್ಲಿ ಕಾಗೋಡು ತಿಮ್ಮಪ್ಪ ಕಡೆಗಣಿಸಿದಕ್ಕೆ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ.ಕ್ಷೇತ್ರದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಮುಳುವಾಗಲಿದೆಯಾ ಎಂಬ ಅನುಮಾನಕ್ಕೆ ಈ ಎಲ್ಲಾ ಬೆಳವಣಿಗೆ ಕಾರಣವಾಗಿದ್ದು ಚುನಾವಣೆ ಸಮಯದಲ್ಲಿ ಇದು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ  ನುಂಗಲಾರದ ತುತ್ತಾಗಿದ್ದು ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ..

ಮಗಳ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರೀಯಿಸಿರುವ ಕಾಗೋಡು ತಿಮ್ಮಪ್ಪ

ಇದು ದುರದೃಷ್ಟಕರ ನಿರ್ಧಾರ. ನಾನು ಜೀವನದುದ್ದಕ್ಕೂ ತತ್ವಕ್ಕೆ ಬದ್ಧನಾಗಿ ರಾಜಕಾರಣ ಮಾಡಿದವನು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಈ ಕುರಿತು ಮಗಳು ನನ್ನ ಜೊತೆ ಚರ್ಚೆಯೇ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ...

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನವರ ಸಂದರ್ಶನ ವಿಡಿಯೋ ರಿಪೋರ್ಟ್..



ವರದಿ : ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post