ಸಾಗರ : ಅದ್ದೂರಿ ಮೆರವಣಿಗೆಯೊಂದಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ- ಹರತಾಳು ಹಾಲಪ್ಪ

ಸಾಗರ :ಹೊಳೆಕೊಪ್ಪದಲ್ಲಿರುವ ಧನಂಜಯ ಸ್ವಾಮಿ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಶಾಸಕ ಹರತಾಳು ಹಾಲಪ್ಪನವರು ನಂತರ ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭರ್ಜರಿ ಮೆರವಣಿಗೆಯ ಮೂಲಕ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.ಗಣಪತಿ ದೇವಸ್ಥಾನ ದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದವರೊಂದಿಗೆ ಶಾಸಕ ಹರತಾಳು ಹಾಲಪ್ಪ ನವರಿಗೆ ಜೈಕಾರ ಹಾಕುವ ಮೂಲಕ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡರು.ಗೆಲುವು ನಮ್ಮದೇ ಎನ್ನುವ ಘೋಷಣೆ ಮೆರವಣಿಗೆಯಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿತ್ತು.

ಬಿಜೆಪಿ ಅಭ್ಯರ್ಥಿಯನ್ನ ಕೇವಲ ಶಾಸಕರನ್ನಾಗಿ ಗೆಲ್ಲಿಸುವುದಿಲ್ಲ ಮುಂದಿನ ಮಂತ್ರಿಯನ್ನ ಗೆಲ್ಲಿಸುತ್ತಿದ್ದೀರಿ ಎಂದು ಲೋಕ ಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು..

ಅವರು ಹಾಲಪ್ಪನವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಹಾಲಪ್ಪನವರು ಕಟ್ಟಕಡೆಯ ಮನುಷ್ಯನಿಗೆ ಸರ್ಕಾರದ ಕಾರ್ಯಕ್ರಮ ತಲುಪಿಸಿದವರು. ರೈತನ ಮೇಲೆ ಹಲ್ಲೆ ಆದಾಗ ರಾತ್ರಿ ಧರಣಿ ನಡೆಸಿದ್ದವರು ಹಾಲಪ್ಪನವರು ಎಂದರು.ಕಾಗೋಡು ಕರೆ ಮಾಡಿದ ಮೇಲೆ ಧರಣಿ ವಾಪಾಸ್ ಪಡೆದರು. ನಾವು ಕಟ್ಟುವ ಹುತ್ತಕ್ಕೆ ಬೇರೆಯವರು ಬಂದು ವಾಸ ಮಾಡಲು ನಾವು ಬಿಡೊಲ್ಲ. ಕೊರೋನ ಸಂದರ್ಭದಲ್ಲಿ ಟೂರಿಸ್ಟ್ ಟೆಂಟ್ ಹಾಕಿದವರು ಇಂದು ಚುನಾವಣೆ ಅಭ್ಯರ್ಥಿಯಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಕಾಗೋಡು ತಿಮ್ಮಪ್ಪನವರಿಂದ ಅನೇಕ ಪಾಠ ಕಲಿತಿದ್ದೇನೆ.ಶೋಷಿತ, ಪೀಡಿತರ ಧ್ವನಿಯಾಗಿದ್ದ ಕಾಗೋಡು ಪುತ್ರಿ ಡಾ.ರಾಜನಂದಿನಿ ಬಿಜೆಪಿಗೆ ಸೇರ್ಪಡೆ ಯಾಗಿದ್ದು ಬದಲಾವಣೆಯ ದಿಕ್ಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು..

Post a Comment

Previous Post Next Post