ಹೊಸನಗರ :ಐತಿಹಾಸಿಕ ಕಲ್ಯಾಣೇಶ್ವರ ದೇವಾಲಯದ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಕ್ಷಣಗಣನೆ!!!

ಹೊಸನಗರ : ವಾರಂಬಳ್ಳಿಯ ಐತಿಹಾಸಿಕ ಶ್ರೀ ಕಲ್ಯಾಣೇಶ್ವರನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದು ಸುಸಂದರ್ಭದಲ್ಲಿ ವಾರ್ಷಿಕೋತ್ಸವದ  ಕಾರ್ಯಕ್ರಮವನ್ನ ದೇವಸ್ಥಾನ ಸಮಿತಿ ಸರಳ ಸುಂದರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ...ಹಿಂದೂ ಪಂಚಾಗ ಅನ್ವಯ ತಿಥಿ ಮಾಸದ ಪ್ರಕಾರ ಜನವರಿ 22 ಭಾನುವಾರದಂದಒಂದು ವಾರಕ್ಕೆ ವರ್ಧಂತಿ ಕಾರ್ಯಕ್ರಮವಿರುತ್ತೆ

ಧಾರ್ಮಿಕ ವಿಧಿ ವಿಧಾನಗಳು :

ವಾರ್ಷಿಕೋತ್ಸವದ ಶುಭ ಸಮಯದಲ್ಲಿ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ,ಏಕಾದಶ ರುದ್ರಾಭಿಷೇಕ,ಶ್ರೀರುದ್ರ ಹೋಮ, ಶ್ರೀ ದುರ್ಗಾಶಾಂತಿ ಸೇವೆಗಳು ನಡೆಯುತ್ತವೆ.

ದಿವ್ಯ ಸಾನಿಧ್ಯ ಹಾಗೂ ಉಪಸ್ಥಿತಿ :ಕಲ್ಯಾಣೇಶ್ವರ ದೇವರ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ಸರಿಯಾಗಿ 11 ಗಂಟೆಗೆ ಜರುಗಲಿದ್ದು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ  ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯವನ್ನ ವಹಿಸಿ ಆಶೀರ್ವಚನ ನೀಡಲಿದ್ದಾರೆ...

ಕ್ಷೇತ್ರದ ಇತಿಹಾಸ ಬಗ್ಗೆ ಕಿರು ಪರಿಚಯ :

ಕೆಳದಿ ಅರಸ ಕಾಲದ ಸುಮಾರು 300 ಹೆಚ್ಚು ವರ್ಷಗಳ ಪ್ರಾಚೀನವಾದ ಐತಿಹಾಸಿಕ ಹಿನ್ನೆಲೆ ಇರುವ ಈ ಪುಣ್ಯಕ್ಷೇತ್ರದಲ್ಲಿ ದಿವ್ಯ ಶಿವಲಿಂಗು ಶ್ರೀ ಕಲ್ಯಾಣೇಶ್ವರ ಕ್ಷೇತ್ರಕ್ಕೆ ಒಂದು ಮೆರಗು..

ಕಲ್ಯಾಣೇಶ್ವರ ದೇವಾಲಯಕ್ಕೆ ಈ ಹೆಸರು ಕಾರಣ ಹಾಗೂ ಐತಿಹ್ಯ

ಇತಿಹಾಸವೇನೆಂದರೆ,ಮದುವೆಯಾಗದ ಗಂಡು ಹಾಗೂ ಹೆಣ್ಣು ಮಕ್ಕಳು ತಮಗೆ ಒಳ್ಳೆಯ ಹೆಣ್ಣು-ಗಂಡು ಸಿಗುವಂತಾಗಲಿ ಎಂದು ಇಲ್ಲಿ ಬಂದು ಬೇಡಿಕೊಳ್ಳುತ್ತಾರೆ.ಭಕ್ತರ ಮದುವೆಯ ಶುಭ ಕಾರ್ಯದ ಬೇಡಿಕೆಯು ಬಹು ಬೇಗನೆ ಪೂರೈಸುವುದರಿಂದ ಈ ದೇವರಿಗೆ "ಶ್ರೀ ಕಲ್ಯಾಣೇಶ್ವರ" ಎಂಬ ಹೆಸರು ಬಂತು ಎನ್ನುವ ಪ್ರತೀತಿ ಇದೆ.ಮಕ್ಕಳಿಲ್ಲದವರು ತಮಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತಾರೆ.ಕೇವಲ ಪ್ರಾರ್ಥಿಸುವುದು ಮಾತ್ರವಲ್ಲ ಆ ಕುರಿತಂತೆ ಒಂದು ಗಂಟೆಯನ್ನು ಕಟ್ಟಿ ಹೋಗುತ್ತಾರೆ.ಈಗಾಗಲೇ ಸಾಕಷ್ಟು ಹರಕೆ ಗಂಟೆಗಳನ್ನು ಕ್ಷೇತ್ರದಲ್ಲಿ ಕಾಣಬಹುದಾಗಿದೆ.ಜೊತೆಗೆ ಕ್ಷೇತ್ರದಲ್ಲಿಯೇ ವಿವಾಹ ಕಾರ್ಯಗಳು ನೆಡಿತಿರುತ್ತವೆ 

"ಬೇಡಿದ ವರವನ್ನು ಕರುಣಿಸುತ್ತಿದ್ದಾನೆ ಕಲ್ಯಾಣೇಶ್ವರ.ಕೇವಲ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆ,ಹೊರ ರಾಜ್ಯಗಳಿಂದ ಕೂಡ ಭಕ್ತಾದಿಗಳು ಕ್ಷೇತ್ರಕ್ಕೆ ಬರುತ್ತಿದ್ದಾರೆ. ನಂಬಿ ಬಂದವರನ್ನು ಎಂದಿಗೂ ಕೈ ಬಿಡಲಾರ ಶ್ರೀಕಲ್ಯಾಣೇಶ್ವರ'  ಎನ್ನುತ್ತಾರೆ ಸ್ಥಳೀಯ ಭಕ್ತವೃಂದ...




Post a Comment

Previous Post Next Post