ಸಾಗರ : ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಗೋಳಾಟ,ಶಿಕ್ಷಣ ಇಲಾಖೆಯ ಜಾಣ ಮೌನ!!!

ಶಾಲೆಯಲ್ಲಿ 31 ಜನ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು...!!!

ವಿದ್ಯಾರ್ಥಿಗಳ ಗೋಳು ಕೇಳುವವರರು...???

ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಲವು ರೀತಿಯಾದಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಾಕಷ್ಟು ಹಣವನ್ನು ನೀಡುತ್ತಿದೆ.

ಶಾಲೆಯಲ್ಲಿ 31 ಜನ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು...

ಸಾಗರ :ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನ ಬೈಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 31 ಜನ ವಿದ್ಯಾರ್ಥಿಗಳಿದ್ದಾರೆ. 1 ರಿ0ದ 5 ನೆ ತರಗತಿವರೆಗೆ ತರಗತಿಗಳು ಕೂಡ ಇದೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಲು ಕಾಯಂ ಶಿಕ್ಷಕರು ಮಾತ್ರ ಒಬ್ಬರೇ ಇದ್ದಾರೆ.

ಐದು ತರಗತಿಯ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡಲು ಇವರಿಗೂ ಸಾಕಷ್ಟು ತೊಂದರೆಯಾಗುತ್ತಿದೆ ಹಾಗೂ ವಿದ್ಯಾರ್ಥಿಗಳಿಗೂ ಕೂಡ ಭೌತಿಕ ಮಟ್ಟ ದಿನೇದಿನೇ ಕುಸಿಯುತ್ತಿದೆ.ಎಂದು ಗ್ರಾಮಸ್ಥರು ಇದೀಗ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಗ್ರಾಮ ಪಂಚಾಯತ್ ಸದಸ್ಯ ಆನಂದ್ ಹರಟೆ ಮಾತನಾಡಿ ನಮ್ಮೂರಿನ ಸರ್ಕಾರಿ ಶಾಲೆಯ 5 ಗ್ರಾಮ ಪಂಚಾಯಿತಿ ವತಿಯಿಂದ ತಕ್ಕಸಾಕಷ್ಟು ಅನುದಾನವನ್ನು ನೀಡಿದ್ದೇವೆ. ಆದರೆ ದುರಾದೃಷ್ಟವಶಾತ್ ಮಕ್ಕಳಿಗೆ ಪಾಠ ಮಾಡಲು ಸರಿಯಾಗಿ ಶಿಕ್ಷಕರಿಲ್ಲ ಈ ವಿಚಾರವಾಗಿ ಕಳೆದೆರಡು ವರ್ಷದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ ಆರ್ ಬಿಂಬಾ ಅವರಿಗೆ ಸಾಕಷ್ಟು ಮನವಿ ನೀಡಿದ್ದೇವೆ ಹಾಗೂ ಕಚೇರಿ ಮುಂದೆ ಧರಣಿ ಕೂಡ ಮಾಡಿದ್ದೇವೆ 15 ದಿನದೊಳಗೆ ಬೇಡಿಕೆ ಈಡೇರಿಸುತ್ತೇವೆ ಎಂಬ ಆಶ್ವಾಸನೆ ನೀಡಿದರು ಆದರೆ ಆಶ್ವಾಸನೆ ಇದುವರೆಗೂ ಈಡೇರಲಿಲ್ಲ.

ನಮ್ಮೂರಿನ ಸುತ್ತಮುತ್ತದ ಕೆಲವು ಶಾಲೆಗಳಲ್ಲಿ 15 ಜನಶಾಲೆಗಳಿಗೆ ಎರಡರಿಂದ ಮೂರು ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ನಮ್ಮೂರಿನ ಶಾಲೆಗೆ ಏಕೆ ಈ ರೀತಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಾರದ ಗಡುವು ನೀಡಿದ ಗ್ರಾಮಸ್ಥರು ಐಗಿನಬೈಲು ಶಾಲೆಗೆ ಇನ್ನೊಬ್ಬರು ಶಿಕ್ಷಕರನ್ನು ಒಂದು ವಾರದೊಳಗೆ ನಿಯೋಜನೆ ಮಾಡದಿದ್ದರೆ ಇಡೀ ಊರಿನ ಜನ ಹಾಗೂ ವಿದ್ಯಾರ್ಥಿಗಳ ಪೋಷಕರು ಬೃಹತ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದಾರೆ.


ವರದಿ :ಪವನ್ ಕುಮಾರ್ ಕಠಾರೆ 


Post a Comment

Previous Post Next Post