ತೀರ್ಥಹಳ್ಳಿ :ಅಡಿಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ -ಗೃಹ ಮಂತ್ರಿಗಳು ಆರಗ ಜ್ಞಾನೇಂದ್ರ ಹೇಳಿದ್ದೆ ಬೇರೆ - ವೈರಲ್ ಆದ ವಿಡಿಯೋನೇ ಬೇರೆ!!!


ತೀರ್ಥಹಳ್ಳಿ : ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ. ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವುದು ಒಳ್ಳೆಯದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಡಿ. 28 ರಂದು ವಿಧಾನ ಸಭೆಯಲ್ಲಿ ಹೇಳಿದ ವಿಡಿಯೋ ಭಾರಿ ವೈರಲ್ ಆಗಿದೆ.

ಮಲೆನಾಡಿನ ಮಗನಾಗಿರುವ ಗೃಹಸಚಿವ ಆರಗ ಜ್ಞಾನೇಂದ್ರ ತಾನು ಒಬ್ಬ ಕೃಷಿಕನಾಗಿ ಅಡಕೆ ಬೆಳೆಗರಾರ ಪರವಾಗಿ ನಿಲ್ಲಬೇಕಿದ್ದ ಆರಗ ಜ್ಞಾನೇಂದ್ರ ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಹೇಳಿದರೆ ರೈತರ ಕಥೆ ಏನಾಗಬೇಕು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅಷ್ಟೇ ಅಲ್ಲದೆ ವಿಡಿಯೋ ಕೂಡ ಹರಿದಾಡಿದೆ.

ವೈರಲ್ ಆಗಿದ್ದೇನು ? ವಿಡಿಯೋ ಇಲ್ಲಿದೆ 


ದೇಶದಲ್ಲಿ ಅಡಕೆಗೆ ಭಾರಿ ಬೆಲೆ ಬಂದಿದ್ದು ಈಗ ದೊಡ್ಡ ಸಮಸ್ಯೆಯಾಗಿದೆ. ಎಲ್ಲರೂ ಸಾಲಸೋಲ ಮಾಡಿಯಾದರೂ ಅಡಕೆ ಕೃಷಿಗೆ ಮುಂದಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನು 5-10 ವರ್ಷದಲ್ಲಿ ಅಡಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಎಂದು ಹೇಳಿದ್ದರು.


ಗೃಹಸಚಿವರು ಹೇಳಿದ ವಿಡಿಯೋ ಅಸಲಿ ನಿಜಾಂಶವೇನು ?

ಆಂಧ್ರಪ್ರದೇಶದಲ್ಲಿ 2 ಲಕ್ಷ ಹೆಕ್ಟೇರ್ ನಲ್ಲಿ ಅಡಕೆ ಹಾಕಲಾಗಿದೆ. ಬಯಲು ಸೀಮೆಯಲ್ಲಿ ಅಡಕೆ ಕೃಷಿ ವ್ಯಾಪಿಸಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯವನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿಯೂ ಅಡಕೆ ಹಾಕಲಾಗುತ್ತಿದೆ. ವರ್ಷದಲ್ಲಿ 1 ಕೋಟಿ ಅಡಕೆ ಸಸಿ ನರ್ಸರಿಗಳಲ್ಲಿ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನು 5-10 ವರ್ಷದಲ್ಲಿ ಅಡಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಹಾಗೂ ಕೇಂದ್ರ ಸರ್ಕಾರ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.




Post a Comment

Previous Post Next Post