ಹೊಸನಗರ :ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಸರಿ ಮಧ್ಯಾಹ್ನ ಟಿಪ್ಪರ್ ಲಾರಿ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಭೀಕರ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ....ಮುಂಬಾರು ಸಮೀಪದ ಸಾವಂತೂರು ನಿವಾಸಿ ಅಣ್ಣಪ್ಪ (43) ಮೃತಪಟ್ಟ ದುರ್ಧೈವಿಯಾಗಿದ್ದಾರೆ...!!
ಕೊಡಚಾದ್ರಿ ಕಾಲೇಜಿನ ಮುಂಭಾಗದಲ್ಲಿ ಅಣ್ಣಪ್ಪ ತಮ್ಮ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಸಾಗುತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಟಿಪ್ಪರ್
ಗುದ್ದಿದ ರಭಸಕ್ಕೆ ಅಣ್ಣಪ್ಪ ಅವರ ತಲೆಗೆ ಗಂಭೀರ ಗಾಯವಾಗಿದ್ದು ತಕ್ಷಣವೇ ಸಮೀಪದ ತಾಲೂಕು ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಮಾಡಿಸಿ ಆಂಬುಲೆನ್ಸ್ ಮುಖಾಂತರ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ... ಅಪಘಾತ ಸಂಪೂರ್ಣ ದೃಶ್ಯ ಹತ್ತಿರದ ಕೊಡಚಾದ್ರಿ ಕಾಲೇಜು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು ಮೈ ಜುಮ್ ಎನಿಸುತ್ತದೆ..!!!!
ಮೃತ ಅಣ್ಣಪ್ಪ ರವರು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಗಳನ್ನು ದ್ವಿತೀಯ ಬಿಎ ತರಗತಿಗೆ ಅಡ್ಮಿಷನ್ ಮಾಡಿಸಲು ಬಂದು ಹಿಂದಿರುಗುತಿದ್ದಾಗ ಈ ದುರ್ಘಟನೆ ನಡೆದಿದ್ದು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
Tags:
ಹೊಸನಗರ
