ಸಾಗರ: ಮಾಜಿ ಲೋಕ ಸಭಾ ಸದಸ್ಯ ಕೆ ಜಿ ಶಿವಪ್ಪನವರ ಪುತ್ರ ಪ್ರಶಾಂತ್ ಸಾಗರ ಬಿಜೆಪಿ ತೆಕ್ಕೆಗೆ!! ಗರಿ ಗೆದರಿದ ಸಾಗರ ರಾಜಕೀಯ ಬೆಳವಣಿಗೆ!!

ಸಾಗರ : ಕಳೆದೊಂದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿಯೂ   ಗುರುತಿಸಿ ಕೊಂಡಿದ್ದ ಶಿವಮೊಗ್ಗ ಮಾಜಿ ಲೋಕಸಭಾ ಸದಸ್ಯರಾದ ಕೆ. ಜಿ ಶಿವಪ್ಪ ಅವರ ಪುತ್ರ ಹಾಗೂ ರಾಜ್ಯ ಸರ್ಕಾರದ ಇಂಧನ ಸಚಿವರ ಸುನಿಲ್ ಕುಮಾರ್ ಅವರ ಕುಟುಂಬ ಸಂಬಧಿಕರಾದ ಪ್ರಶಾಂತ್ ಸಾಗರ ಅವರು ರಾಜ್ಯ ಚುನಾವಣೆಯ ಹೊತ್ತಿನಲ್ಲೇ ಭಾರತೀಯ ಜನತಾ ಪಾರ್ಟಿ ಕಡೆಗೆ ಮುಖ ಮಾಡಿರುವುದು ಸಾಗರ ರಾಜಕೀಯ ವಲಯದಲ್ಲಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ....!!

ಈಗಾಗಲೇ ಪ್ರಶಾಂತ ಶಿವಪ್ಪ ಅವರು ಶಿವಮೊಗ್ಗ ಹಾಗೂ ಸಾಗರ ವಿವಿಧ ಭಾಗದಲ್ಲಿ ನವಚೇತನ ವೇದಿಕೆ ಟ್ರಸ್ಟ್ ಸಾಗರ  ಹೆಸರಲ್ಲಿ ನವ ನವೀನ ಕಾರ್ಯಕ್ರಮಗಳ ಮುಖಾಂತರ ಜನರ ಮೆಚ್ಚುಗೆ ಗಳಿಸಿದ್ದಾರೆ..

ಪ್ರಶಾಂತ್ ಸಾಗರದಲ್ಲಿ ಈ ಮೊದಲೇ ಸಾಕಷ್ಟು ಹಿಂದೂಪರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುವ ಸೂಚನೆಯನ್ನ ತಮ್ಮ ಅಭಿಮಾನಿ ವೃಂದಕ್ಕೆ ರವಾನೆ ಮಾಡಿದ್ದರು ಆದರೆ ಇಂದು ಅಧಿಕೃತವಾಗಿ ಮಾಧ್ಯಮ ಮುಂದೆ ಪಕ್ಷಕ್ಕೆ ಗುಡ್ ಬೈ ಹೇಳಿ ಕಾರ್ಯಕರ್ತರ ಅನುಮಾನಗಳಿಗೆ ತಿಲಾಂಜಲಿ ಎಳೆದಿದ್ದಾರೆ!!!

ಪಕ್ಷ ಸೇರ್ಪಡೆ ಬಗ್ಗೆ ಅಧಿಕೃತಗೊಳಿಸಿ,ಸುದ್ಧಿಗಾರೊಂದಿಗೆ ಮಾತನಾಡಿದ ಪ್ರಶಾಂತ್ ಅವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿನ ಅವ್ಯವಸ್ಥೆಗಳು ಹಾಗೂ ಹಿಂದೂಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳು ಸಾಕಷ್ಟು ಬೇಸರ ತರಿಸಿದ್ದು,ಹಾಗೂ ಕೇಂದ್ರದಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಅವರ ಆಡಳಿತ ಹಾಗೂ ನಾಯಕತ್ವಕ್ಕೆ ಮನಸೋತು ಭಾರತೀಯ ಜನತಾ ಪಾರ್ಟಿ ಬರುವುದಾಗಿ ಹೇಳಿಕೆ ನೀಡಿದರು.ಈಗಾಗಲೇ ದೈಹಿಕವಾಗಿ ಮಾನಸಿಕ ಸಿದ್ದನಾಗಿದ್ದು,ರಾಜ್ಯ ಬಿಜೆಪಿ ನಾಯಕರ ಶಿವಮೊಗ್ಗ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದೇನೆ ಎಂದರು..

ಕಳೆದ 10 ವರ್ಷಗಳಿಂದ ನಮ್ಮ ನವ ಚೇತನ ವೇದಿಕೆಯಿಂದ ಸಾಕಷ್ಟು ಜನಪರ ಕಾಳಜಿಯುಳ್ಳ ಕಾರ್ಯಕ್ರಮ ಮಾಡಿಕೊಳ್ಳುತ್ತಾ ಸಾಮಾಜಿಕವಾಗಿ ರಾಜಕೀಯ ತೊಡಗಿಸಿಕೊಂಡಿದ್ದೇವೆ,ಪ್ರಮುಖವಾಗಿ ಯುವಕರಿಗೆ ಉದ್ಯೋಗ ಕೊಡಿಸುವ,ಸರ್ಕಾರಿ ಶಾಲೆಗಳ ಶುಚಿತ್ವ ಮೂಲ ಭೂತ ಸೌಕರ್ಯ ಬಗ್ಗೆ ಕೈ ಜೋಡಿಸಿದ್ದೇವೆ, ಸಾರ್ವಜನಿಕ ಸಹ ನಮ್ಮ ಕಾರ್ಯವನ್ನು ಮೆಚ್ಚಿ ಗುರುತಿಸಿ ಆಶೀರ್ವಾದ ಮಾಡಿದ್ದಾರೆ.ರಾಜಕೀಯ ನಮಗೆ ಏನು ಹೊಸದಲ್ಲ ಹುಟ್ಟಿದಾಗಿಂದ ರಾಜಕೀಯ ನೋಡಿಯೇ ಬೆಳೆದವರು,ತಂದೆಯವರು ರಾಜಕೀಯದಲ್ಲಿ ಹಾಗೂ ತಾತ ಅವರು ಸ್ವತಂತ್ರ ಹೋರಾಟಗಾರರಾಗಿ ತಮ್ಮನ್ನ ತಾವು ತೊಡಗಿಸಿ ರಾಜಕೀಯವಾಗಿ ನಮಗೆ ಪ್ರೇರಣೆಯಾಗಿದ್ದರು..!ಹಾಗಾಗಿ ಜನ ನಮ್ಮನ್ನ ರಾಜಕಾರಣಿಯಾಗಿ ನೋಡೋದು ತಪ್ಪೇನಿಲ್ಲ.ಹೇಳುತ್ತಾ ಈಗಿನ ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಹಾಗೂ ಹಿಂದುತ್ವ ವಿಚಾರದಲ್ಲಿ ವಿರುದ್ಧವಾಗಿ ಆಗುತ್ತಿರುವ ಬೆಳವಣಿಗೆ ಹಾಗೂ ಕೇವಲ ಒಂದು ರೀತಿಯ ವೋಟ್ ಬ್ಯಾಂಕ್ ಗಾಗಿ ಹಿಂದುತ್ವವನ್ನ ದಿಕ್ಕರಿಸುವ ಕಾಂಗ್ರೆಸ್ ವ್ಯವಸ್ಥೆ  ತೀವ್ರ ಬೇಸರ ತರಿಸಿದ್ದು ,ಇದನ್ನ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ  ಈ ನಿಟ್ಟಿನಲ್ಲಿ ಹಿಂದೂಗಳ ಭಾವನೆಗಳ ಎತ್ತಿ ಹಿಡಿಯುತ್ತಿರುವ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಬಿಜೆಪಿ ಜೊತೆಗೆ ಹೋಗುತ್ತೇನೆ ಎಂದರು. ನಮ್ಮ ಕುಟುಂಬ ಸಂಬಧಿಕರಾದ ಕುಮಾರ ಬಂಗಾರಪ್ಪ ಹಾಲಪ್ಪ ರಾಜ್ಯ ಸರ್ಕಾರದ ಇಂಧನ ಸಚಿವ ಸುನಿಲ್ ಕುಮಾರ್ ಸಹ ಈಗಾಗಲೇ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಚಿರಪರಿಚಿತ ರಾಗಿದ್ದಾರೆ, ಹಾಗಾಗಿ ನಾವು ಸಹ ಅವರೊಟ್ಟಿಗೆ ಕೆಲಸ ಮಾಡಲು ನಿರ್ಧಾರ ಮಾಡಿದ್ದೇನೆ ಎಂದರು..

ಪಕ್ಷ ಸೇರ್ಪಡೆ ಬಗ್ಗೆ ಈಗಾಗಲೇ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದು ನಮ್ಮನ್ನ ಸ್ವಾಗತ ಮಾಡಿದ್ದಾರೆ. ಹಾಗೂ ಶಾಸಕರಾದ ಹಾಲಪ್ಪನವರು , ಬಿಜೆಪಿ ಜಿಲ್ಲಾಧ್ಯಕ್ಷರು ಆದ ಟಿ ಡಿ ಮೇಘರಾಜ್ ಜೊತೆಗೂ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದರು...

ವರದಿ : ಅಜಿತ್ ಗೌಡ ಬಡೇನಕೊಪ್ಪ 








Post a Comment

Previous Post Next Post