ಹೊಸನಗರ :ಕುಮಧ್ವತಿ ತೀರ್ಥದಲ್ಲಿ ಜರುಗಲಿರುವ ಅದ್ದೂರಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ!!!

ಹೊಸನಗರ :ತಾಲೂಕಿನ ಹೆಮ್ಮೆಯ ಪ್ರಸಿದ್ಧ ಪ್ರಾಚೀನ ಇತಿಹಾಸಯುಳ್ಳ ಐದು ನದಿಗಳಾದ ಕುಮದ್ವತಿ ಕುಶಾವತಿ ಹರಿದ್ರಾವತಿ ಶರ್ಮಣಾವತಿ ಶರ್ಮಿಣ್ಯಾವತ  ನದಿಗಳ ಉಗಮ ಸ್ಥಾನ ಬಹು ಪ್ರಾಚೀನ ಐತಿಹಾಸಿಕ ಹಿನ್ನೆಲೆಯುಳ್ಳ ಬಿಲ್ಲೇಶ್ವರ ಬೆಟ್ಟ ಕೊಡೋರು ಸಮೀಪ ಹುಂಚ ಹೊಂಬುಜ ಜೈನ ಮಠದದ ಆಶ್ರಯದಲ್ಲಿ ಸಾರ್ವಜನಿಕ ಸಹಕಾರದಲ್ಲಿ ಎಂದಿನಂತೆ ಈ ವರ್ಷವು ಸಹ ಅದ್ದೂರಿಯಾಗಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ....

ಶಕವರ್ಷ 1944 ಶುಭಕೃತ ಸಂವತ್ಸರದ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಅಂದರೆ ದಿನಾಂಕ 22 ನವೆಂಬರ್ 2022ರಂದು ನಾಲ್ಕನೇ ವರ್ಷದ ಪಂಚ ನದಿಗಳ ಉಗಮಸ್ಥಾನದ ಕಾರ್ತಿಕ ದೀಪೋತ್ಸವವು ಹೊಸನಗರ ತಾಲೂಕಿನ ಹುಂಚದ ಬಿಲ್ಲೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನ ಸ್ವಸ್ತಿಶ್ರೀ ಡಾ. ದೇವೇಂದ್ರ ಭಟ್ಟರಕ ಸ್ವಾಮೀಜಿವರ ಉಪಸ್ಥಿತಿಯಲ್ಲಿ ಇರಲಿದ್ದಾರೆ..

2019 ರಲ್ಲಿ ಸಮಾನ ಮನಸ್ಸಿನ ಮಿತ್ರರೆಲ್ಲರು ಸೇರಿ ಸಂಕಲ್ಪ ಮಾಡಿಕೊಂಡು ಪ್ರಾರಂಭಿಸಿದ ಪಂಚ ನದಿಗಳ ಉಗಮ ಸ್ಥಾನದ ಕಾರ್ತಿಕ ದೀಪೋತ್ಸವ ಕಳೆದ ಮೂರು ವರ್ಷಗಳಿಂದ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ಈ ದೀಪೋತ್ಸವ ಕೇವಲ ಒಂದು ಕಾರ್ಯಕ್ರಮ ಆಗದೆ ಮಲೆನಾಡಿನ ಪರಂಪರೆ, ಸಂಸ್ಕೃತಿ, ಆಚರಣೆ ಮತ್ತು ಸೊಬಗನ್ನು ಮತ್ತೆ ಬೆಳಗಿಸುವ ಮಹತ್ವರ ಪುಣ್ಯ ಆರಾಧನೆಗೆ ಸಜ್ಜಾಗಿದ್ದು. ದಿಪೋತ್ಸವವನ್ನು ಮಲೆನಾಡಿನ ಪರಿಸರ ಮತ್ತು ಪರಂಪರೆಗೆ ಅನುಗುಣವಾಗಿ ಮಾಡುತ್ತಿದ್ದುಸಾರ್ವಜನಿಕರ ಸಹಕಾರ ಮತ್ತು ಬೆಂಬಲದ ಅವಶ್ಯಕತೆ ಇದೆ.ಎನ್ನುತ್ತಾರೆ ಸಂಘಟನಕಾರರು....


ಪಂಚನದಿ ದೀಪೋತ್ಸವ ನಮ್ಮ ನಿಮ್ಮೆಲ್ಲರ ಪರಿಸರ ಹಬ್ಬ ಆಗಿದ್ದು, ಇದನ್ನು ಆಚರಿಸಲು ಎಲ್ಲರೂ ಕೈ ಜೋಡಿಸೋಣ, ಬನ್ನಿ ಎಲ್ಲರೂ ಸೇರಿ ಈ ಪರಿಸರದ ಹಬ್ಬದಲ್ಲಿ ನಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ಭಾಗವಹಿಸೋಣ....


ಮಾಹಿತಿ : ವಿನಾಯಕ ಪ್ರಭು ವಾರಂಬಳ್ಳಿ..


Post a Comment

Previous Post Next Post