ಹೊಸನಗರ :ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಿವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ದೇವರಾಜ್

ಹೊಸನಗರ: ತಾಲೂಕಿನ 2022 -23 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನ ಈ ಬಾರಿ ತಾಲೂಕಿನ ನಿವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭಾಜನರಾಗಿದ್ದು ಊರಿನ ಹಾಗೂ ವಿದ್ಯಾರ್ಥಿಗಳ ಮೊಗದಲ್ಲಿ ಖುಷಿ ಇಮ್ಮಡಿಯಾಗಿದೆ.! ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಯುತ ದೇವರಾಜ್ ಎಂ ಎಸ್  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿವಣೆ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,
ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು,ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿ ಸಮ್ಮುಖದಲ್ಲಿ,ನೆಚ್ಚಿನ ಗುರುಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಶಿಕ್ಷಕ ದೇವರಾಜ್ ಅವರ ಹಿನ್ನೆಲೆ :

ಶ್ರೀಯುತ ದೇವರಾಜ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ನೇರಲಿಗೆ ಗ್ರಾಮದಲ್ಲಿ ಜನಿಸಿದರು. ವಿಮಲಾಕ್ಷಮ್ಮಾ ಹಾಗೂ ಶಾಂತವೀರಸ್ವಾಮಿಯ ಕೃಷಿಕ ದಂಪತಿಯ ಪುತ್ರರಾಗಿದ್ದು ಬಾಲ್ಯದಿಂದಲೇ ಶೈಕ್ಷಣಿಕವಾಗಿ ಚುರುಕಾಗಿದ್ದ ದೇವರಾಜ್ ಅವರನ್ನು ಅದೇ ಆಸಕ್ತಿ ಇಂದು ಉತ್ತಮ ಶಿಕ್ಷಕರಾಗುವಂತೆ ರೂಪುಗೊಳ್ಳುವಂತೆ ಮಾಡಿರುವುದು ಅತಿಶಯೋಕ್ತಿಯಲ್ಲ.

ಜನವರಿ 2007 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೊಂಬಟ್ಟು ಕುಂದಾಪುರದಲ್ಲಿ ಆರಂಭಿಸಿ, ನಂತರ ಸುದೀರ್ಘ ಮೂರು ವರ್ಷಗಳ ನಂತರ ತವರು ಜಿಲ್ಲೆ ಶಿವಮೊಗ್ಗಕ್ಕೆ ವರ್ಗಾವಣೆ ಹೊಂದಿ,ಪ್ರಸ್ತುತ ಶಿಕ್ಷಕರಾಗಿ ತಮ್ಮ ಸೃಜನಾತ್ಮಕ, ಪರಿಣಾಮಕಾರಿಯಾದಂತಹ ಭೋದನಾ ಶೈಲಿಯಲ್ಲಿ ಮಕ್ಕಳಲ್ಲಿ ಪೋಷಕರಲ್ಲಿ ಮತ್ತಷ್ಟು ಸರ್ಕಾರಿ ಶಾಲೆ ಹಾಗೂ ಶಿಕ್ಷಣ ಬಗ್ಗೆ ಹೆಚ್ಚಿನ ಒಲವು ಮೂಡಲು ಕಾರಣಿಭೂತರಾಗಿದ್ದಾರೆ...

ಮಲೆನಾಡಿನ ಅನೇಕ ಕಡೆಗೆ ಇಂದು  ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳೆ ಬಾರದೆ ಪೋಷಕರು ಖಾಸಗಿ ಶಾಲಾ ವ್ಯಾಮೋಹಕ್ಕೆ ಬಿದ್ದು, ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಸಂದರ್ಭದಲ್ಲಿಗಳಲ್ಲಿ ಶಿಕ್ಷಕ ದೇವರಾಜ್ ಮಾದರಿ ಶಿಕ್ಷಕರಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ, ಸರ್ಕಾರಿ ಶಾಲೆಯನ್ನ ಮಾದರಿ ಶಾಲೆ ಮಾಡಲು ಹೊರಟಿರುವುದು ಗಮನಾರ್ಹವಾದುದು...

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಂಜುನಾಥ್ ಎಸ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಅನಿಲ್, ಶಿವರಾಮ್, ಜಯಕೀರ್ತಿ, ಗ್ರಾಮಸ್ಥರಾದ ನರಸಿಂಹ ಶಶಿಕಲಾ ಪ್ರಸನ್ನ ನಾಗರಾಜ ಪ್ರವೀಣ ಮತ್ತಿತರರು ಹಾಜರಿದ್ದರು.


ವರದಿ :ಅಜಿತ್ ಗೌಡ ಬಡೇನಕೊಪ್ಪ 

Post a Comment

Previous Post Next Post