ಹೊಸನಗರ: ಸತತ 3ನೇ ಬಾರಿ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ.ಜೆ.ಜಿ ಮಂಜುನಾಥ್

ಹೊಸನಗರ :ವಿಶ್ವದ ಅತ್ಯುನ್ನತ ಜ್ಞಾನಿಗಳ ಪಟ್ಟಿಯಲ್ಲಿಡಾ. ಜೆ. ಜಿ. ಮಂಜುನಾಥಶಿವಮೊಗ್ಗ : ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್‌ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ.ಜಿ ಮಂಜುನಾಥರವರು ಮತ್ತೊಮ್ಮೆ ಸ್ಥಾನಪಡೆದಿದ್ದಾರೆ. 

ಮೂಲತಃ ಡಾ ಮಂಜುನಾಥ್ ಕುಗ್ರಾಮ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆಯ ಜಂಬಳ್ಳಿ ಗ್ರಾಮದ ಪುಟ್ಟ ಕೃಷಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರಾಗಿದ್ದು ತಂದೆ ದಿವಂಗತ ಗಂಗಾಧರಪ್ಪ ಗೌಡ ಹಾಗೂ ತಾಯಿ ಶಾರದಮ್ಮ ಅವರ ಪುತ್ರರಾಗಿದ್ದು ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯಮಟ್ಟದ ವರೆಗಿನ  ಸಾಧನೆ ಇಂದಿನ ಯುವ ಸಮುದಾಯಕ್ಕೆ ಶೈಕ್ಷಣಿಕ, ವೈಜ್ಞಾನಿಕವಾಗಿ ಅನುಕರಣೀಯ ಮಾದರಿಯಾಗಿದ್ದು. 

ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ಜಿಲ್ಲೆ ಮಡಿಕೇರಿಯಲ್ಲಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ  ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ. ಮಂಜುನಾಥ್ ಅವರು ಯುಎಸ್ಎಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್‌ವಿಯ‌ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ. ಮಂಜುನಾಥ ಅವರು ಸತತ ಮೂರನೇ ಬಾರಿ ಸ್ಥಾನ ಪಡೆಯುವ ಮೂಲಕ ವಿಜ್ಞಾನ ವಿಷಯದಲ್ಲಿ ಇವರ ವಿಶೇಷ ಕ್ರಿಯಾಶೀಲತೆಗೆ ಹಿಡಿದ ಕೈ ಗನ್ನಡಿಯಾಗಿದೆ..!!!

ಈ ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176ಉಪ ವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿ ಜೀವಮಾನ ಸಾಧಕರುಮತ್ತು 2022ನೇ ಸಾಧಕರು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ.ರಸಾಯನಶಾಸ್ತ್ರ ವಿಭಾಗದ ಮಂಗಳೂರು ವಿ.ವಿಯ ಘಟಕ ಕಾಲೇಜು ಫೀಲ್ಡ್‌ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ.ಮಂಜುನಾಥ ಅವರು “ಅನಲೈಟಿಕಲ್ ಮತ್ತು ಎನರ್ಜಿ" ವಿಷಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ ಇವರು 2022ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 15797ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 168527ನೇ ಸ್ಥಾನವನ್ನು ಪಡೆದಿರುತ್ತಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ).

ಇವರ ಈ ಸಾಧನೆಯೂ ಮಂಗಳೂರು ವಿ.ವಿಗೆ ಮತ್ತು ಫೀಲ್ಡ್‌ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ...




Post a Comment

Previous Post Next Post