ತೀರ್ಥಹಳ್ಳಿ : ರಾಷ್ಟ್ರೀಯ ಖೋ -ಖೋ ಕ್ರೀಡಾಪಟು ಹೆಗ್ಗಳಿಕೆಯ ಕರ್ನಾಟಕ ಕ್ರೀಡಾ ರತ್ನ ವಿನಯ್ ಗೌಡ ಅಕಾಲಿಕ ಮರಣ!!


ತೀರ್ಥಹಳ್ಳಿ :ತೀರ್ಥಹಳ್ಳಿ ಸೀಬಿನಕೆರೆ ನಿವಾಸಿಯಾಗಿದ್ದ ರೈತ ಹುಾವಪ್ಪ  ಗೌಡ ಮಗ, ಗಾಮೀಣ ಮಟ್ಟದ ಉದಯೋನ್ಮುಖ ಕ್ರೀಡಾಪಟು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತ ವಿನಯ್ ಗೌಡ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ...ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ವಿಪರೀತ ಜ್ವರಕ್ಕೆ ತುತ್ತಾಗಿದ್ದ ವಿನಯ್,ಜ್ವರ ಉಲ್ಬಣವಾಗಿದ್ದರಿಂದ ತೀರ್ಥಹಳ್ಳಿಯಿಂದ ಉಡುಪಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಜ್ವರ ಮೆದುಳಿಗೆ ತಾಗಿ, ಚಿಕಿತ್ಸೆಗೆ ಸ್ಪಂದನೆ ನೀಡದೆ, ವಿನಯ್ ಇಂದು ಇಹಲೋಕ ತ್ಯಜಿಸಿದ್ದಾರೆ.ಖೋ -ಖೋ ಕ್ರೀಡಾಪಟುವಾಗಿ,ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದರು.ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿದ್ದರು, ಹಾಗೂ ರಾಜ್ಯ ಹಾಗೂ ರಾಷ್ಟ್ರಿಯ ತಂಡದಲ್ಲಿ ಭಾಗವಹಿಸಿ ತೀರ್ಥಹಳ್ಳಿ ಕೀರ್ತಿಯನ್ನ ಹೆಚ್ಚಿಸಿದ್ದರು...

ತೀರ್ಥಹಳ್ಳಿಯ ಪ್ರತಿಷ್ಠಿತ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾಗಿ ರಾಜ್ಯಮಟ್ಟದಲ್ಲಿ ತೀರ್ಥಹಳ್ಳಿಯ  ಹೆಸರನ್ನು ಕ್ರೀಡೆಯಲ್ಲಿ ಗುರುತಿಸಿ ಕೊಳ್ಳುವಂತೆ ಕೊಡುಗೆ ನೀಡಿದ್ದರು...

ವಿನಯ ಕಳೆದ 2ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು 8 ತಿಂಗಳ ಮುಂದಾದ ಮಗುವನ್ನು ಬಿಟ್ಟು ಅಗಲಿದ್ದಾರೆ.ತೀರ್ಥಹಳ್ಳಿಯಲ್ಲಿ ಅಪಾರ ಬಂದು ಮಿತ್ರರನ್ನ ಹೊಂದಿದ್ದ ವಿನಯ್ ಗೌಡ ಅವರ ಸಾವಿನ ಸುದ್ದಿ ಇಡೀ ಊರಲ್ಲಿ ನೀರವ ಮೌನವಾಗಿದೆ....

ಮೃತದೇಹವನ್ನು ಸೀಬಿನಕೆರೆಯ ಹುಾವಪ್ಪ ಗೌಡರ  ಮನೆಯಲ್ಲಿ ಇಡಲಾಗಿದೆ .ಮೃತರ ಆತ್ಮಕ್ಕೆ ಶಾಂತಿ ಕೋರಿ ನೂರಾರು ಜನರು ಕಂಬನಿಯನ್ನು, ಸಂತಾಪವನ್ನು  ವ್ಯಕ್ತಪಡಿಸಿದ್ದಾರೆ..

Post a Comment

Previous Post Next Post