ಹೊಸನಗರ :ತಹಸೀಲ್ದಾರ್ ಆದೇಶ ಜಾರಿಯಾಗುವಂತೆ ಮತ್ತೊಮ್ಮೆ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂತ ಯುವ ರೈತ!!

ಹೊಸನಗರ : ಕಳೆದೊಂದು ವಾರದಿಂದ ತಾಲೂಕು ಕಚೇರಿ ಮುಂಭಾಗ ಸರಕಾರಿ ಅಕ್ರಮ ಕೆರೆ ಒತ್ತುವರಿ ವಿರುದ್ಧ ಹಾಗೂ ಕೃಷಿ ಜಮೀನಿಗೆ ತೆರಳುವ ದಾರಿ ಬಂದ್ ಮಾಡಿರುವ ಕುರಿತು ಸತತ ಹೋರಾಟ ನೆಡೆಸುತ್ತಿದ್ದ ಹೊಸನಗರ ತಾಲೂಕು ಹಲುಸಲೇ ಮಳವಳ್ಳಿ ಯುವ ರೈತ ದಿನೇಶ್ ಕೆರೆ ಕೈ ಅವರ ಸತ್ಯಾಗ್ರಹಕ್ಕೆ ಕೊಂಚ ಸಕರಾತ್ಮಕ ಮನ್ನಣೆ ನೀಡಿ ಖುದ್ದು ಹೊಸನಗರ ತಹಸೀಲ್ದಾರ್  
ರಾಜೀವ್ ಅವರು ರೈತ ದಿನೇಶ್ ಅವರನ್ನು ಭೇಟಿ ಮಾಡಿ ಸರ್ಕಾರಿ ಆದೇಶ ಕಾಯ್ದೆ ಅನ್ವಯ,ಒತ್ತುವರಿ 
ತೆರವು ಕಾರ್ಯಾಚರಣೆಗೆ ಆದೇಶ ನೀಡಿರುತ್ತಾರೆ.
 ಇದೆ ತಿಂಗಳ 26 ರಂದು ಒತ್ತುವರಿ ಸಂಬಂಧಪಟ್ಟ ಸ್ಥಳವನ್ನ ತೆರವು ಗೊಳಿಸಲು ಆದೇಶ ನೀಡಿ, ಹಿಂಬರಹದಲ್ಲಿ ಲಿಖಿತಾ ಆದೇಶ ಪ್ರತಿಯನ್ನ ದಿನೇಶ್ ಕೆರೆ ಕೈ ಅವರಿಗೆ ಹಸ್ತಾಂತರ ಮಾಡಿ ಸತ್ಯಾಗ್ರಹ ಕೊನೆ ಗೊಳಿಸುವಂತೆ ಮನವಿ ಮಾಡಿ  ಹೋರಾಟವನ್ನ ನಿಲ್ಲಿಸಲು ಹೇಳಿದ್ದರು....

ಇಷ್ಟೆಲ್ಲ ಭರವಸೆ ಹಾಗೂ ಲಿಖಿತ ಆದೇಶ ನೀಡಿದಾಗಲು ಸಹ ಯಾವುದೇ ತೆರವು ಕಾರ್ಯಾಚರಣೆ ನೆಡೆಯದೆ ಇರುವುದಕ್ಕೆ ಮತ್ತೊಮ್ಮೆ ದಿನೇಶ್ ಕೆರೆ ಕೈ ಹೋರಾಟಕ್ಕೆ ಇಳಿದ್ದಿದ್ದಾರೆ. ಹಾಗೂ ತಾಲೂಕು ಆಡಳಿತದ ವಿರುದ್ಧ ವಾಗ್ದಾಳಿ ನೆಡಿಸಿ, ಈ ಆದೇಶ ಜಾರಿಗೆಯಾಗದೆ ಇದ್ದುದು, ಇದಕ್ಕೆ ತಹಸೀಲ್ದಾರ್ ನಿರ್ಲಕ್ಷವೆ ಕಾರಣ ಎಂದು ದೂರಿದ್ದಾರೆ...ಈ ಘಟನೆ ಹಿಂದೆ ಕಾಣದ ಕೈಗಳ ಕೈವಾಡದ ಬಗ್ಗೆಯೂ ಸಹ ಕಿಡಿಕಾರಿದ್ದಾರೆ!!..ಹಾಗೂ ಈ ಆದೇಶ ಕಾರ್ಯಗತವಾಗಲು ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಕ್ಕೆ ಆಗ್ರಹ ಮಾಡಿದ್ದಾರೆ..

ಸರ್ಕಾರಿ ಆದೇಶ ಏನಿದೆ ಅದನ್ನ ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ತೋರುತ್ತಿರುವ ಮೀನಾ-ಮೇಷಕ್ಕೆ ರೈತರು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ... ಹೀಗಾದರೆ ಜನ ಸಾಮಾನ್ಯರ ಗತಿ ಏನು???ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ...


ಪ್ರತಿಭಟನೆ ಹಿನ್ನೆಲೆ :

ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಿರತ ಯುವ ರೈತ ದಿನೇಶ್ ಕೆರೆ ಕೈಅವರನ್ನ ತಹಸೀಲ್ದಾರ್ ಅವರು ಖುದ್ದು  ಭೇಟಿ ಮಾಡಿ, ಸರಕಾರಿ ಆದೇಶ ಅನ್ವಯ, ಕಾಯ್ದೆ ಅನುಸಾರವಾಗಿ ಕ್ರಮ ಕೈಗೊಳ್ಳತ್ತೇವೆ ಎಂದರು..ಹಾಗೂ ಸದರಿ ಹೊಸನಗರ ತಾಲೂಕು ಹಲುಸಲೇ ಮಳವಳ್ಳಿ ಗ್ರಾಮದ ಸರ್ವೇ ನಮ್ 25 ರಲ್ಲಿ ಸರ್ಕಾರಿ ಕೆರೆಯನ್ನ ಒತ್ತುವರಿ ತೆರವು ಆದೇಶ ನೀಡಿದಾಗಲು, ಆದೇಶ ಪಾಲನೆಯಾಗದೆ ಇದ್ದಿದ್ದು ಹಾಗೂ ತಮ್ಮ ಜಮೀನಿಗೆ ಹೋಗುವ ದಾರಿಯನ್ನು ಬಂದ್ ಮಾಡಿದ ಆರೋಪ ನಮ್ಮ ಗಮನಕ್ಕೆ ಬಂದಿದ್ದು,ಇದಕ್ಕೆ ಸಂಭಂದ ಪಟ್ಟಂತೆ ತಹಸೀಲ್ದಾರ್ ರಾಜೀವ್ ಅವರು ದಿನೇಶ್ ಕೆರೆ ಕೈ ಅವರ ಮನವಿ ಪತ್ರಕ್ಕೆ ಹಿಂಬರಹದಲ್ಲಿ ಸಂಕ್ಷಿಪ್ತರೂಪದಲ್ಲಿ ಪ್ರತಿಕ್ರಿಯೆ ನೀಡಿ ಹೋರಾಟ ಕೈ ಬಿಡುವಂತೆ ಮನವೊಲಿಸಿ, ಇದೆ ಆಗಸ್ಟ್ 26 ಕ್ಕೆ ಸೂಕ್ತ ದಾಖಲಾತಿಯೊಂದಿದೆ ತೆರವು ಕಾರ್ಯಾಚರಣೆ ಮಾಡಲಾಗವುದು ಎಂಬ ಆದೇಶ ಹೊರಡಿಸಿದ್ದರು...



Post a Comment

Previous Post Next Post