ಹೊಸನಗರ :ತಾಲೂಕಿನ ತಾಲೂಕು ಕಚೇರಿ ಮುಂದೆ ಯುವ ಕೃಷಿಕನ ಧರಣಿ!! ಕೈ ಕಟ್ಟಿ ಭ್ರಷ್ಟರ ಬೆನ್ನಿಗೆ ನಿಂತಿತೆ ತಾಲೂಕು ಆಡಳಿತ!!???


ಹೊಸನಗರ ತಾಲೂಕಿನ ತಾಲೂಕು ಕಚೇರಿ ಮುಂದೆ ಯುವ ಕೃಷಿಕನ ಧರಣಿ ಕೈ ಕಟ್ಟಿ ಭ್ರಷ್ಟರ  ಬೆನ್ನಿಗೆ ನಿಂತಿತೆ ತಾಲೂಕು ಆಡಳಿತ..????

ಹೊಸನಗರ : ತಮ್ಮ ಜಮೀನಿಗೆ ಹೋಗಲು ರಸ್ತೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಯುವ ಕೃಷಿಕ ಹೊಸನಗರ ತಾಲೂಕು ಮಳವಳ್ಳಿ ವಾಸಿ ದಿನೇಶ್ ಕೆ. ಯು.ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನೆಡೆಸುತ್ತಿದ್ದಾರೆ.

ಹೌದು ದಿನೇಶ್ ತಮ್ಮ ಜಮೀನಿಗೆ ತೆರಳಲು ಇರುವ ಸರ್ಕಾರಿ ಜಾಗವನ್ನು, ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಗ್ರಾಮದ ಮತ್ತೊರ್ವ ವ್ಯಕ್ತಿ ಬೇಲಿ ಹಾಕಿ ರಸ್ತೆಯನ್ನು ಬಂದ್ ಮಾಡಿದ್ದಾರೆ.ಕೃಷಿ ಕೆಲಸಕ್ಕೆ ಜಮೀನಿಗೆ ಹೋಗಲು ತೀವ್ರ ತೊಂದರೆಯಾಗುತ್ತಿದ್ದು.ಇದರಿಂದ ಕೃಷಿಕ ಗಿರೀಶ್ ಬೇಸತ್ತು 2019 ರಲ್ಲಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ  ಈ ಸಂಬಂಧ ದೂರು ಸಹ ನೀಡಿದ್ದಾರೆ. ಕೃಷಿ ಜಮೀನಿಗೆ ತೆರಳುವ ಜಮೀನಿಗೆ ಗ್ರಾಮದ ಇನ್ನೊಬ್ಬ ವ್ಯಕ್ತಿ ರೇವಣಪ್ಪ ಗೌಡ ಹಾಗೂ ಅವರ ಕುಟುಂಬದವರು ಸರಕಾರಿ ಜಾಗದಲ್ಲಿ ಬೇಲಿ ನಿರ್ಮಾಣ ಮಾಡಿ ದಿನೇಶ್ ರವರ ಜಮೀನಿಗೆ ಹೋಗಲು ತೊಂದರೆಯಾಗಿದೆ ಈ ಸಂಬಂಧ ಕಂದಾಯ ಇಲಾಖೆಯ ಅಧಿಕಾರಿಗಳು ಬೇಲಿ ತೆರವು ಮಾಡಲು 2019 ರಲ್ಲಿ ಹೇಳಿದ್ದರೂ ಕೂಡ,ಈವರೆಗೂ ಅದನ್ನ ತೆರವುಗೊಳಿಸಿಲ್ಲ  ಈ ಸಂಬಂಧ ತಹಶೀಲ್ದಾರ್ ರವರು ಮೀನ ಮೇಷ ಎಣಿಸುತ್ತಿರುವುದನ್ನ ನೋಡಿದರೆ ತಾಲೂಕು ಆಡಳಿತದ ಮೇಲೆ ಸಂಶಯ ಮೂಡುವುದು ಸಹಜವಾಗಿದೆ. ಎನ್ನುತ್ತಿದ್ದಾರೆ ಧರಣಿ ನಿರತ ಗಿರೀಶ್...

ಅಲ್ಲದೇ ಇದೇ ಗ್ರಾಮದ ಸರಕಾರಿ ಜಾಗದಲ್ಲಿರುವ ಸರ್ಕಾರಿ ಕೆರೆಯನ್ನು ಇದೇ ಆರೋಪಿಗಳು ಒತ್ತುವರಿ ಮಾಡಿದ್ದಾರೆ ಇದನ್ನು ಸಹ ತೆರವುಗೊಳಿಸಲು ಅಧಿಕಾರಿಗಳು ಆದೇಶ ಮಾಡಿದ ಬಳಿಕವೂ ಯಾವುದೇ ತೆರವು ಕಾರ್ಯಾಚರಣೆ ನೆಡೆದಿಲ್ಲ.

ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದೇ ವಾಪಾಸಾಗಿದ್ದಾರೆ. ಅಧಿಕಾರಿವರ್ಗದವರು ಸೂಕ್ತ ಕ್ರಮ ಕೈಗೊಳ್ಳಲು ಮೀನಾ-ಮೇಷ ಎಣಿಸುತ್ತಿರುವುದರ ಹಿಂದೆ ಅನ್ಯ ಕಾರಣವಿದ್ದಂತೆ ಕಂಡು ಬರುತ್ತಿದೆ.!!! ಪದೇ ಪದೇ ಮನವಿ ಮಾಡಿದರೂ ಉಪಯೋಗ ಆಗದ ಹಿನ್ನೆಲೆಯಲ್ಲಿ ತಾವು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ನನಗೆ ನ್ಯಾಯ ದೊರಕುವವರೆಗೂ ಸ್ಥಳದಲ್ಲಿಯೇ ಕೂತು ಪ್ರತಿಭಟನೆ ಮುಂದುವರೆಸುತ್ತೇನೆ ಎಂದರು...

Post a Comment

Previous Post Next Post