ಹೊಸನಗರ :ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ, ತೀವ್ರ ಅಸಮಾಧಾನ ಹೊರಹಾಕಿದ ಮೂಲೆಗದ್ದೆ ಶ್ರೀಗಳು..

ಹೊಸನಗರ :ಜಾತ್ಯತೀತವಾದಿ, ಸಮಾನತೆಯ ಹರಿಕಾರ,ಭಕ್ತಿ  ಭಂಡಾರಿ,ವಿಶ್ವಗುರು ಬಸವಣ್ಣನವರ ಬಗೆಗಿನ ಇತಿಹಾಸವನ್ನ ಅನವಶ್ಯಕವಾಗಿ,ತಪ್ಪು ಮಾಹಿತಿ ನೀಡಿ ಐತಿಹಾಸಿಕ ಹಿನ್ನೆಲೆಯನ್ನ ತಿರುಚುವ ಕೆಲಸ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಆಗಿದೆ ಎಂದು ಹೊಸನಗರ ತಾಲೂಕು ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ತೀವ್ರ ಅಸಮಾಧಾನ ಹೊರಹಾಕಿದರು.
ಸಮಿತಿ ಮಾಡಿದ ತಪ್ಪನ್ನು ಸರಿಪಡಿಸುವಂತೆ  ಸರ್ಕಾರವನ್ನ ಆಗ್ರಹಿಸಿದ್ದಾರೆ.ಶ್ರೀ ಗಳು ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮಾನವಿ ಮಾಡಿದ್ದೂ, ಈಗಾಗಲೇ,9ನೇ ತರಗತಿಯ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಕುರಿತ ಕೆಲ ಬದಲಾವಣೆಗಳು, ಅನೈತಿಕವಾದುದು ಹಾಗೂ  ಸಲ್ಲದ ವಿಚಾರಗಳ ಪ್ರಕಟಣೆಗಳು ಆದಷ್ಟು ಬೇಗ ಸರಿ ಆಗಬೇಕು, ಹಾಗೂ ಆಗಿರುವ ತಪ್ಪನ್ನು ಸರಿಪಡಿಸಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಿದರು..

ಬಸವಣ್ಣ ನವರು ಇಷ್ಟ ಲಿಂಗದ ಜನಕರಾಗಿದ್ದಾರೆ.ಅಲ್ಲಮಪ್ರಭು ಸೇರಿದಂತೆ ಎಲ್ಲ ವಚನಕಾರರು ಇದನ್ನ ಉಲ್ಲೇಖ ಮಾಡಿದ್ದಾರೆ.."ನಿನ್ನ ನಾ ನರಿಯದ ಮುನ್ನ ನೀನಲ್ಲೆ ಇದ್ದೆ.?ಎನ್ನೋಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ."  ಶ್ರೀಗಳು ಬಸವಣ್ಣನವರ ಕುರಿತು ಸ್ಮರಿಸಿದರು.


ಹಾಗಾದರೆ ಪಠ್ಯದಲ್ಲಿ ಏನಿದೆ???

ಬಸವಣ್ಣನವರ ಬಗ್ಗೆ 9ನೇ ತರಗತಿ ಪಠ್ಯದಲ್ಲಿ ಉಲ್ಲೇಖಿಸಿರುವ 3 ಮಾಹಿತಿಗಳು...


1) ಬಸವಣ್ಣನವರು ಉಪನಯನ ಆದ ನಂತರ ಕೂಡಲ ಸಂಗಮಕ್ಕೆ ನಡೆದರು... 

 ಬಸವಣ್ಣನವರು ಸೋದರಿ ಅಕ್ಕ ನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿದ್ದರು....

2) ಬಸವಣ್ಣನವರು ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ಧಿಕ್ಷೆಯನ್ನ ಪಡೆದರು..

ಬಸವಣ್ಣನವರೇ ಇಷ್ಟಲಿಂಗದ ಜನಕರು. ಈ ಬಗ್ಗೆ ಅಲ್ಲಮಪ್ರಭು ಆದಿಯಾಗಿ ಎಲ್ಲಾ ಶರಣರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ..

3) ಬಸವಣ್ಣನವರು ವೀರಶೈವ ಮತವನ್ನ ಅಭಿವೃದ್ದಿ ಪಡಿಸಿದರು...

ವಾಸ್ತವದಲ್ಲಿ ವೀರಶೈವ - ಶೈವ ಪಂಥ ಶಾಖೆ..

ಈಗ ಅದನ್ನ ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಇತಿಹಾಸ ಹೇಳುತ್ತದೆ..

ಶೈವರಲ್ಲಿ ವರ್ಣಾಶ್ರಮದ ಆಚರಣೆ ಇದೆ, ಲಿಂಗಾಯತರಲ್ಲಿ ವರ್ಣಾಶ್ರಮ ಪದ್ಧತಿ ಇಲ್ಲ..ಹೀಗಾಗಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ದಿ ಪಡಿಸಿದರು ಎಂಬುದು ಹೇಗೆ??



Post a Comment

Previous Post Next Post