ಹೊಸನಗರ :ವಯುಕ್ತಿಕವಾಗಿ ಮಕ್ಕಳಿಗೆ ಪಠ್ಯ ಪುಸ್ತಕ,ಇನ್ನಿತರ ಸಾಮಗ್ರಿಗಳ ಕೊಡುಗೆ..!!

ಹೊಸನಗರ :ಸದಾ ಒಂದಿಲ್ಲೊಂದು ಸಮಾಜಮುಖಿ,ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕವಾಗಿ ಇಂದಿನ ಯುವಕರಿಗೆ ಮಾದರಿಯಾಗಿ, ಉತ್ಸಾಹಿ ಮನಸುಗಳಿಗೆ ಪ್ರೇರಣಾದಾಯಕವಾಗಿ ನಿಂತು,ರಾಜಕೀಯ ವೈಮಸ್ಸುಗಳನ್ನೆಲ್ಲ ಬದಿಗೊತ್ತಿ,ತಾನು ಪ್ರತಿನಿಧಿಸಿದ ಪಂಚಾಯತ್ ಕ್ಷೇತ್ರದ  ಅಳಿಲು ಸೇವೆಗೆ ಸದಾ ಸಿದ್ದರಾಗಿರುವ.ಅಭಿಲಾಶ್ ಹೊಸಮನೆ ಅವರ ಸೇವಾ ಕಾರ್ಯಕ್ಕೆ ಊರಿನ ಗ್ರಾಮಸ್ಥರು ಪ್ರಶಂಸೆ ನೀಡುತ್ತಿದ್ದಾರೆ.. ಹೌದು ಈಗಿನ ಪ್ರಸ್ತುತ ರಾಜಕೀಯ ದಿನಗಳಲ್ಲಿ ಕ್ಷೇತ್ರದಲ್ಲಿ ತನ್ನ ಕ್ಷೇತ್ರದಲ್ಲಿ ಚುನಾವಣೆ ಕಣದಲ್ಲಿ ಸೋತ ಮಾತ್ರಕ್ಕೆ ಕ್ಷೇತ್ರದಿಂದಲೇ ಕಣ್ಮರೆ ಆಗುವ ತದನಂತರ ಮತ್ತೆ ಮುಂದಿನ ಚುನಾವಣೆ ಸಂದರ್ಭ ಅದೇ ಕಳೆದ ಚುನಾವಣೆಯ ಸೋತ ಸಹನುಭೂತಿ ಗಿಟ್ಟಿಸಿ, ಬರುವ ರಾಜಕಾರಣಿಗಳ ನಡುವೆ ಇಂದು ಅಭಿಲಾಷ್ ಹೊಸಮನೆ ಅವರ ಕ್ಷೇತ್ರದಲ್ಲಿನ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯವಾದದ್ದು.ಹೌದು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಮೇಲಿನ ಸಂಪಳ್ಳಿ ಕ್ಷೇತ್ರದಲ್ಲಿ ಪರಾಭವಗೊಂಡರೂ ಸಹ ಕ್ಷೇತ್ರದಿಂದ ವಿಮುಖಲಾಗದೆ. ಜನರ ಆಶೋತ್ತರಗಳನ್ನ ಆಲಿಸುತ್ತಿದ್ದಾರೆ.

ಇಂದು ಮೇಲಿನ ಸಂಪಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಎಲ್ಲಾ ಮಕ್ಕಳಿಗೆ ವಯಕ್ತಿಕವಾಗಿ ಪಠ್ಯ ಪುಸ್ತಕ, ಪೆನ್ನು, ಪರಿಕರ , ಮಳೆಗಾಲಕ್ಕೆ ಛತ್ರಿ ಯನ್ನು ಮಕ್ಕಳಿಗೆ ನೀಡಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಗ್ರಾಮೀಣ ಮಕ್ಕಳ ಶಿಕ್ಷಣ ಗುಣಮಟ್ಟದ ಶಿಕ್ಷಣಕ್ಕೆ ಉತ್ತೇಜನದ ಅವಶ್ಯಕತೆ ಇದೆ . ಹಾಗೂ ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತವಾದ ಶೈಕ್ಷಣಿಕ ವ್ಯವಸ್ಥೆಗೆ ಸರ್ಕಾರ ಎಲ್ಲ ರೀತಿಯಲ್ಲಿ  ಅವಕಾಶ ಕಲ್ಪಿಸಿದೆ ಪೋಷಕ ವೃಂದ ಈ ಯೋಜನೆಗಳ ಸದುಪಯೋಗ ಪಡೆಯಬೇಕಿದೆ....

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಸುರೇಂದ್ರ ಸರ್, SDMC ಅಧ್ಯಕ್ಷ ಪ್ರವೀಣ್ ಗೌಡ್ರು,ಕುಮಾರ್ ಗೌಡ್ರು, ಹರ್ಷ ಮೂಡಗಲ್ಲು ಪುಟ್ಟಪ್ಪ ಇದ್ದರು....

Post a Comment

Previous Post Next Post