ಶಿವಮೊಗ್ಗ :ಲಕ್ಷ ಲಕ್ಷ ಕಾರಿಗೂ ಮೀರಿದ ಸೈಕಲಿನ ಅನುಭವ : ಸೂರಜ್ ನಾಯರ್


ಲಕ್ಷ ಲಕ್ಷ ಕಾರಿಗೂ ಮೀರಿದ ಸೈಕಲಿನ ಅನುಭವ

ಹೌದು ನನ್ನ ಬಾಲ್ಯದ ಅನೇಕ ದಿನಗಳನ್ನ ನನ್ನ ಅಜ್ಜಿಯ ಮನೆಯಾದ ಶಿವಮೊಗ್ಗ ತಾಲ್ಲೂಕು ಆಯನೂರಿನಲ್ಲಿ ಕಳೆದದ್ದು....ರಜೆ ಬಂತೆಂದರೆ ಅಜ್ಜಿಯ ಮನೆಗೆ ಹೋಗುವ ಸಂತೋಷ ಹೇಳತೀರದು ಅಲ್ಲಿ ನಮಗೆ ಸ್ವಂತವಾದ ಸೈಕಲ್ ಇರಲಿಲ್ಲದ ಕಾರಣ ಬಾಡಿಗೆ ಸೈಕಲ್ ತೆಗೆದುಕೊಳ್ಳಬೇಕಾದ ಪ್ರಸಂಗ ಎದುರಾಗುತ್ತಿತ್ತು....

ಹಣ ಹೊಂದಿಸಬೇಕಾದರೆ ಹರಸಾಹಸ ಪಡಬೇಕಾಗಿತ್ತು

ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಏನು ಮಾಡಿದರೂ ಚೆಂದ ಅದರಂತೆ ನಮ್ಮ ಸ್ನೇಹಿತರು ಹಾಗೂ ನಮ್ಮ ಅಣ್ಣ ತಮ್ಮಂದಿರ ಜೊತೆಗೆ ಇಡೀ ಗ್ರಾಮವನ್ನು ಸುತ್ತುತ್ತಿದ್ದೆವು ಅಲ್ಲಿ ಸಿಗುತ್ತಿದ್ದ ಮದ್ಯಪಾನದ ಬಾಟಲಿಗಳನ್ನು ತೆಗೆದುಕೊಂಡು ಗುಜರಿ ಅಂಗಡಿ ಅವನಿಗೆ ಕೊಡುತ್ತಿದ್ದೆವು ಅವನು ಹತ್ತು ಇಪ್ಪತ್ತು ₹ ಕೊಟ್ಟು ಕಳುಹಿಸುತ್ತಿದ್ದ ಇದನ್ನು ತೆಗೆದುಕೊಂಡು ಹೋಗಿ ಬಾಡಿಗೆ ಸೈಕಲ್ ಅವನಿಗೆ ಕೊಡುತ್ತಿದ್ದೆವು ಅವನು 1-2ಗಂಟೆ ಸೈಕಲ್ ಬಾಡಿಗೆಗೆ ನೀಡುತ್ತಿದ್ದು ಅದರಲ್ಲಿ ಇಡೀ ಗ್ರಾಮವನ್ನು ಸುತ್ತು ಹರಿಯುತ್ತಿದ್ದವು.....ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಈ ಪರಿಸ್ಥಿತಿ ಇಲ್ಲ....

ಯಾರನ್ನೋ ಮೆಚ್ಚಿಸಲು ಹೋಗಿ ಪೆಟ್ಟಾದ ಮುಖ

ಚಿಕ್ಕ ವಯಸ್ಸಿನಲ್ಲಿಯೇ ಸೈಕಲ್ ಕಳೆದಿದ್ದಾನೆ ಎಂದರೆ ತಂದೆ ತಾಯಿಗೆ ಅಜ್ಜ ಅಜ್ಜಿಯಂದಿರಿಗೆ ಇನ್ನಿಲ್ಲದ ಸಂತೋಷ....

ನಮ್ಮ ಮನೆಗೆ ಸಂಬಂಧಿಕರು ಬಂದಿದ್ದರು ಅವರನ್ನು ಮೆಚ್ಚಿಸಲು ನಾನು ಹಾಗೂ ನನ್ನ ಅಣ್ಣ ಇಬ್ಬರೂ ಸೈಕಲ್ ನಲ್ಲಿ ಸ್ಟಂಟ್ ಮಾಡುತ್ತಾ ಹೋಗುತ್ತಿದ್ದೆವು ಸೈಕಲ್ ಅವನು ಓಡಿಸುತ್ತಿದ್ದನು ಹಿಂಬದಿಯಲ್ಲಿ ನಾನು ಕುಳಿತುಕೊಂಡಿದ್ದೆ ಅವನು ಅವರ ಸಂಬಂಧಿಕರನ್ನು ಮೆಚ್ಚಿಸಲು ವೀಲಿಂಗ್ ಮೊರೆಹೋದನು ಹಿಂಬದಿಯಲ್ಲಿ ಕುಳಿತಿದ್ದ ನಾನು ಥಟ್ಟನೆ ರಸ್ತೆಗೆ ಬಿದ್ದು ಮುಖಕ್ಕೆ ಗಾಢವಾದ ಪೆಟ್ಟಾಯ್ತು ಈ ಗಾಯವನ್ನು ಮುಚ್ಚಿಡಲು ಹರಸಾಹಸ ಪಡಲೇಬೇಕು ಆಯ್ತು ತದನಂತರ ಮನೆಗೆ ಗೊತ್ತಾಗಿ ಆಸ್ಪತ್ರೆಗೆ ಸೇರಿಸಿದ ಪ್ರಸಂಗವೂ ನಡೆಯಿತು....

ಬಾಲ್ಯದ ಸ್ನೇಹಿತ ಸೈಕಲ್ ಗುರು

ಇತ್ತೀಚಿನ ಯುವ ಜನಾಂಗ ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಗ್ಗೆ ಮಾತನಾಡುತ್ತಾರೆ ನಮ್ಮ ಕಾಲದಲ್ಲಿ ಸೈಕಲ್ಲೇ ನಮಗೆ ಐಷಾರಾಮಿ ವಾಹನ ನಮ್ಮ ಬಾಲ್ಯದ ಸ್ನೇಹಿತ ಎಂದರೆ ಸೈಕಲ್ ಎನ್ನುತ್ತಿದ್ದೆವು ....

ಅಟ್ಲಾಸ್ ಸೈಕಲ್ ಬಿಟ್ಟು ಬೇರೆ ಸೈಕಲ್ ಕಂಡರೆ ನಮಗೆ ಅದು ದೊಡ್ಡ ಐಷಾರಾಮಿ ಸೈಕಲ್ ಹಾಗೆ ಕಾಣುತ್ತಿತ್ತು 

ನಮ್ಮಲ್ಲಿದ್ದ ಸೈಕಲ್ಲನ್ನ ಹೆಚ್ಚು ಆಸಕ್ತಿಯಿಂದ ಪ್ರೀತಿಸುತ್ತಿದ್ದೆವು.....


ಬಾವಿಯಲ್ಲಿ ಸೈಕಲ್ ರೇಸ್

ಹೌದು ಎಲ್ಲರೂ ಬಾವಿಯಲ್ಲಿ ಮೋಟಾರ್ ಸೈಕಲ್ ಜಾತ್ರೆಗಳಲ್ಲಿ ಕೇಳಿರುತ್ತೇವೆ ಸಾಮಾನ್ಯವಾಗಿ ನೋಡಿರುತ್ತೇವೆ

ಆದರೆ ನಮ್ಮ ಗೆಳೆಯರ ತಂಡ ಬಾವಿಯಲ್ಲಿ ಸೈಕಲ್ ಹೊಡೆಯುತ್ತಿದ್ದದು ವಿಶೇಷವಾಗಿತ್ತು 

ಸಾಗರದ ರೈಲ್ವೆ ಫ್ಲಾಟ್ ಫಾರ್ಮ್ ಮುಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ 1ಸಣ್ಣ ಬಾವಿಯ ರೀತಿಯಲ್ಲಿಯೇ ಗುಂಡಿ ಹೊಡೆದಿದ್ದೆವು ಅದರೊಳಗೆ ನಾವು ಸೈಕಲ್ ರೈಡ್ ಮಾಡುತ್ತಿದ್ದೆವು ಕೆಲವೊಬ್ಬರು ಬೀಳುತ್ತಿದ್ದರು....

ಕೆಲವೊಬ್ಬರು 3-4ರೌಂಡ್ ಹೊಡೆಯುವಷ್ಟರಲ್ಲಿ ತಲೆತಿರುಗಿ ವಾಪಸ್ ಬರುತ್ತಿದ್ದರು ಆದರೆ ಇಂದು ಇದೆಲ್ಲಾ ನೆನಪು ಮಾತ್ರ....


ಲೇಖನ :-ಸೂರಜ್ ಆರ್ ನಾಯರ್ 

Post a Comment

Previous Post Next Post