ಹೊಸನಗರ :ಮೂಲೆಗದ್ದೆಯ ಸದಾನಂದ ಶಿವಯೋಗ ಅಶ್ರಮದಲ್ಲಿ ಜರುಗಿದ ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮ...!

ಹೊಸಗರ :12ನೇ ಶತಮಾನದಲ್ಲಿ,ಸಮಾಜದಲ್ಲಿ ನೆಡೆಯುತ್ತಿದ್ದ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಸೆಟೆದು ನಿಂತು, ಕಾಯಕವೇ ಕೈಲಾಸ, ಇಷ್ಟ ಲಿಂಗದ ಸ್ಮರಣೆಯೇ ದೇವನೊಲಿಸುವ ಪರಿ. ದಯವೇ ನಿಜವಾದ ಧರ್ಮವೆಂದು ಜಗತ್ತಿದೆ ತಮ್ಮ ವಚನಗಳ ಮುಖಾಂತರ ಭಕ್ತಿ ಮಾರ್ಗವನ್ನ ಜನ ಸಾಮಾನ್ಯರಿಗೆ ಜನರ ಆಡು ಮಾತಲ್ಲೇ ಪರಿಚಯ ಮಾಡಿ ಸಮಾನತೆ, ಕಾಯಕ, ದಾಸೋಹ ಪರಿಕಲ್ಪನೆ ನೀಡಿ,  " ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ " ಎಂದು ಸಾರಿದವರು ವಿಶ್ವಗುರು ಬಸವಣ್ಣ...

ಬಸವಣ್ಣ ನವರು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡಿದ ಮೊದಲಿಗರು,ಕೂಡಲಸಂಗಮದೇವ ಎಂಬ ಅಂಕಿತದೊಂದಿಗೆ ಅವರ ಮಾತುಗಳೇ ವಚನಗಳಾದವು..

ಲಿಂಗ ಅಸಮಾನತೆ,ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು, ಕೆಲವು ಮೌಢ್ಯ ವೈದಿಕ ಆಚರಣೆಗಳನ್ನ ತಿರಸ್ಕರಿಸಿ, ಪ್ರತಿಯೊಬ್ಬ ವ್ಯಕ್ತಿಗೂ ಲಿಂಗ ಧೀಕ್ಷೆ ನೀಡಿ, "ದೇವನೊಬ್ಬನೇ ನಾಮ ಹಲವು"ಪ್ರಸ್ತುತ ಪಡಿಸಿ,ಅನುಭವ ಮಂಟಪದಂತಹ ಹೊಸ ಸಾರ್ವಜನಿಕ ಸಂಸ್ಥೆಗಳನ್ನು ಪರಿಚಯಿಸಿದರು ("ಆಧ್ಯಾತ್ಮಿಕ ಅನುಭವದ ಸಭಾಂಗಣ"), ಇದು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಚರ್ಚಿಸಲು ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯಲ್ಲಿ ಸರ್ವರಿಗೂ ಸ್ವಾಗತ ನೀಡಿ ಪುರುಷ ಮಹಿಳೆ ಎನ್ನದೆ ಮುಕ್ತ ಅವಕಾಶ ನೀಡಿ. ಸಮಾನತೆ ಸಂದೇಶ ಸಾರಿದರು.

ಬಸವಣ್ಣನವರ 889 ನೇ ಜನ್ಮದಿನದ ಅಂಗವಾಗಿ ಇಂದು ಹೊಸನಗರ ತಾಲೂಕು ಮೂಲೆಗದ್ದೆಯ ಸದಾನಂದ ಶಿವಯೋಗ ಆಶ್ರಮದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಶಿಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆನಂದಪುರಂ ಮುರುಘ ಮಠದ ಪೂಜ್ಯ ಡಾ|ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು,ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳೊಂದಿಗೆ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕ ಮುಖಂಡರಾದ, ಕಲಗೋಡು ರತ್ನಾಕರ್, ಬಿ ಜಿ ಚಂದ್ರಮೌಳಿ, ದೇವಾನಂದ್,ಜಯಶೀಲಪ್ಪ ಗೌಡ,ಪಿಎಸ್ಐ ರಾಜೇಂದ್ರ ನಾಯ್ಕ್ ಹಲವಾರು ಮಂದಿ ಉಪಸ್ಥಿತರಿದ್ದರು.


Post a Comment

Previous Post Next Post