ಹೊಸನಗರ :ಬಂಕ್ ಮಾಲೀಕನಿಗೆ 25 ಲಕ್ಷಕ್ಕೂ ಅಧಿಕ ಹಣ ದೋಖ ಮಾಡಿದ ಬಂಕ್ ಸಿಬ್ಬಂದಿ!!!

ಹೊಸನಗರ :ಕೆಲಸ ಕೊಟ್ಟ ಯಜಮಾನನಿಗೆ, ಕೈ ಕೊಟ್ಟು ನಂಬಿಕೆ ದ್ರೋಹ ಮಾಡಿ ಸುಳ್ಳು ಲೆಕ್ಕ ನೀಡಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ಲಪಟಾಯಿಸಿ, ಪರಾರಿಯಾದ ಘಟನೆ ತಡವಾಗಿ ಬೆಳಕಿದೆ ಬಂದಿದ್ದು ಹೊಸನಗರ ತಾಲೂಕು ಮಂಜಪ್ಪ ಗೌಡ ಅವರ ಹೊಸನಗರ ಫ್ಯೂಯಲ್ ನಲ್ಲಿ ವರದಿ ಆಗಿದೆ.

ಘಟನೆ ಹಿನ್ನೆಲೆ ::-

ಮಂಜಪ್ಪ ಗೌಡ ಅವರಿ ಮಾಲೀಕತ್ವದ ಹೊಸನಗರ ಫ್ಯೂಯಲ್ ನ ಪೆಟ್ರೋಲ್ ಬಂಕ್ ನಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಹಿರೇಮಣತಿ ಲೋಕೇಶ್ ಎಂಬಾತ ಎಂದು ತಿಳಿದಿದ್ದು. ಲೋಕೇಶ್ ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೂ ಪೆಟ್ರೋಲ್ ಹಾಕಿ ದಿನದ ವ್ಯಾಪಾರದ ಪುಸ್ತಕ ರಿಜಿಸ್ಟರ್ ನಲ್ಲಿ ಲೆಕ್ಕಾ ಬರೆಯುತ್ತಿದ್ದನು. ಬಂಕ್ ಮಾಲೀಕರಿಗೆ ವ್ಯಾಪಾರದಲ್ಲಿ ಎಲ್ಲೋ ಹೆಚ್ಚು ಕಮ್ಮಿ ಆಗಿದೆಯೋ ಏನೋ ಅನ್ನುವ ಅನುಮಾನ ದಟ್ಟವಾದಾಗ ರಿಜಿಸ್ಟರ್ ಲೆಕ್ಕಕ್ಕೂ ವ್ಯಾಪಾರಕ್ಕೂ ಹೋಲಿಕೆ ಇಲ್ಲದೆ ಇರುವಾಗ ಲೋಕೇಶ್ ನ ಕರೆದು ವಿಚಾರಿಸಿದಾಗ ವಂಚಕನ ಅಕ್ರಮ ಬಯಲಿಗೆ ಬಂದಿದೆ....

ಆನ್ಲೈನ್ ವಹಿವಾಟುನಲ್ಲಿಯೂ ದೋಖ ಮಾಡಿದ ಲೋಕೇಶ.!

ಹೌದು ಬಂಕ್ ನ ಗೂಗಲ್ ಪೆ, ಫೋನ್ ಪೆ ನಲ್ಲಿ ಸಂದಾಯವಾಗುವ ಹಣವನ್ನೂ ಸಹ ತನ್ನ ಖಾತೆಗೆ ಜಮಾ ಅಗುವಂತೆ ನೋಡಿಕೊಂಡಿದ್ದನು.ಸುಮಾರು 11 ಲಕ್ಷ ಅಧಿಕ ಹಣವನ್ನ ರಿಜಿಸ್ಟರ್ ಪುಸ್ತಕ ಹಾಗೂ ಸ್ಟಾಕ್ ಗಳಲ್ಲಿ ವ್ಯತ್ಯಾಸ ಮಾಡಿ ಹಾಗೂ 13ಲಕ್ಷ ಕ್ಕೂ ಅಧಿಕ ಹಣವನ್ನ ಆನ್ಲೈನ್ ಮೂಲಕ 25ಲಕ್ಷಕ್ಕೂ ಹೆಚ್ಚಿನ ಹಣವನ್ನು,ಲಪಟಾಯಿಸಿ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ನಾಪತ್ತೆ!!

ಈ ಬಗ್ಗೆ ಬಂಕ್ ಮಾಲೀಕ ಮಂಜಪ್ಪ ಗೌಡ ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು. ಲೋಕೇಶ್ ಜೊತೆಗೆ ದೊಡ್ಡಪ್ಪನ ಮಕ್ಕಳಾದ ಅರುಣ್ ಹಾಗೂ ಅನಿಲ್ ಸಹ  ವಂಚನೆ ಸೇರಿಕೊಂಡಿದ್ದು.ತಿಳಿದುಬಂದಿದೆ.ಲೋಕೇಶ್ ಕುಟುಂಬಸ್ಥರನ್ನ ಕೇಳಿದ ಬಂಕ್ ವ್ಯವಸ್ಥಾಪಕ ಮಂಜಪ್ಪ ಆಗಿದೆ ನಷ್ಟವನ್ನೆಲ್ಲ ಬರಿಸಿ ಕೊಡುವೆವು ಪೊಲೀಸ್ ದೂರು ನೀಡಬೇಡಿ ಎಂದು ಪುಸಲಾಯಿಸಿದ್ದಾರೆ. ಘಟನೆ ನಂತರ ಈಗ ಲೋಕೇಶ್ ಕಣ್ಮರೆಯಾಗಿದ್ದು,ಕೆಲಸಕ್ಕೂ ಬರಲಾಗದೆ ಮುಖವಿಲ್ಲದೆ ದೋಖ ಮಾಡಿದ ಹಣವನ್ನು ಹಿಂದುಗಿಸದೆ, ನಾಪತ್ತೆ ಆಗಿದ್ದಾನೆ.

ಬಂಕ್ ಮಾಲೀಕ ಈ ಬಗ್ಗೆ ವಂಚನೆ ಪ್ರಕರಣವನ್ನ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು.ಆರೋಪಿ ಲೋಕೇಶ್ ಗಾಗಿ ಬಲೆ ಬೀಸಿದ್ದರು ಕಳೆದ 6ತಿಂಗಳಿಂದ ತಲೆ ಮರಿಸಿಕೊಂಡಿದ್ದ ಭೂಪನನ್ನ  ಊರಿನ ಜಾತ್ರೆ ಮಹೋತ್ಸವಕ್ಕೆ ಬಂದಾಗ ಹೊಸನಗರ ಪೊಲೀಸರು  ಬಂಧಿಸಿ 50ಸಾವಿರ ನಗದನ್ನ ವಶಕ್ಕೆ ಪಡೆದಿದ್ದಾರೆ..


Post a Comment

Previous Post Next Post