ಶಿವಮೊಗ್ಗ :ಮಾನಸ ಇಂಟರ್ ನ್ಯಾಷನಲ್ ಐ.ಸಿ.ಎಸ್.ಇ. ಸ್ಕೂಲ್ ನಲ್ಲಿ ಡಾll ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ1

ಶಿವಮೊಗ್ಗ : ಮಾನಸ ಇಂಟರ್ ನ್ಯಾಷನಲ್ ಐ.ಸಿ.ಎಸ್.ಇ. ಸ್ಕೂಲ್ ನಲ್ಲಿ ಡಾll ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ


ಡಾll ಬಿ.ಆರ್. ಅಂಬೇಡ್ಕರ್ ರವರು ಮಹಾನ್ ಮಾನವತಾವಾದಿಯಾಗಿದ್ದು, ಶೋಷಿತ ವರ್ಗದವರ ಆಶಾಕಿರಣ ಹಾಗೂ ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ. ಭಾರತದ ಆಧುನಿಕ ಮನು, ಸಂವಿಧಾನ ಶಿಲ್ಪಿ, ದಲಿತರ ಬಂಧು, ರಾಷ್ಟ್ರೀಯವಾದಿ, ಅಪ್ರತಿಮ ಚಿಂತಕ, ಖ್ಯಾತ ಅರ್ಥಶಾಸ್ತ್ರಜ್ಞ, ಕಾನೂನುತಜ್ಞ, ಶ್ರೇಷ್ಠ ಇತಿಹಾಸಕಾರ, ಭಾರತ ರತ್ನ ಪುರಸ್ಕೃತರು ಆಗಿರುವ ಅಂಬೇಡ್ಕರ್ ರವರ ಜೀವನ ಅವರು ಆದರ್ಶಗಳು ನಮಗೆ ಸ್ಫೂರ್ತಿದಾಯಕವಾಗಿದೆ. 

ಏಪ್ರಿಲ್ 14 , ಬುಧವಾರ ನಗರದ ಮಾನಸ ಇಂಟರ್ ನ್ಯಾಷನಲ್ ಐ.ಸಿ.ಎಸ್.ಇ. ಸ್ಕೂಲ್ ಕೋಟೆಗಂಗೂರು. ಶಿವಮೊಗ್ಗದಲ್ಲಿ ಬಾಬಾ ಸಾಹೇಬ್ ಡಾll ಬಿ.ಆರ್. ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಶಿಕ್ಷಕಿ ರಶ್ಮಿ ರವರು ಸ್ವಾಗತವನ್ನು ಕೋರಿದರು. ಅಂಬೇಡ್ಕರ್ ರವರನ್ನು ಕುರಿತು ಶಿಕ್ಷಕರಾದ ಆಂಥೋನಿ ಹಾಗೂ ಶ್ವೇತಾ ರವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ತಾರಾ ರವರು ಮಾತನಾಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶಿಕ್ಷಕಿ ಸಂಜನಾ ರವರು ನೆರವೇರಿಸಿಕೊಟ್ಟರು. ಹಾಗೂ ಶಾಲೆಯ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.





Post a Comment

Previous Post Next Post