ಹೊಸನಗರ :ಮತ್ತೆ ಮೂಲೆ ಗುಂಪಾಯಿತೆ ಹೊಸನಗರ?? ಏನಿದು ಅಂತೀರಾ ಈ ವರದಿ ನೋಡಿ..


ಹೊಸನಗರ :ಮೊದಲೇ ಮೂಲೆಗುಂಪಾಗಿರುವ ಹೊಸನಗರ ಪಟ್ಟಣಕ್ಕೆ ಒಳ ಬಾರದೆಯೇ ಹೊರಗಿನಿಂದಲೇ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ..!!

 ಯೋಜನೆಯ ದೂರದೃಷ್ಟಿ ಕೊರತೆಯ ನಡುವೆ ಹೊಸನಗರ ಪಟ್ಟಣವನ್ನು ಮತ್ತು ತಾಲೂಕಿನ ಅಭಿವೃದ್ಧಿಯನ್ನು ಮೂಲೆ ಗುಂಪಾಗಿಸುತ್ತಿದೆ.

ಸಾರ್ವಜನಿಕರ ಹೊಸನಗರಿಕರ ಬೇಡಿಕೆ ಏನೆಂದರೆ ಹೊಸನಗರ ಪಟ್ಟಣದ ಹೃದಯಭಾಗವದ ಬಸ್ಟ್ಯಾಂಡ ದಾರಿ (ಈಗಿರುವ ದಾರಿಯ ) ಮುಕಾಂತರ ರಾಷ್ಟ್ರೀಯ ಹೆದ್ದಾರಿ ಹಾದು ಹೋದರೆ ನಮ್ಮ ಊರಿನ ಅಭಿವೃದ್ಧಿಯೊಂದಿಗೆ ಕರಾವಳಿ ಮತ್ತು ಮಲೆನಾಡನ್ನು ಸೇರಿಸುವ ಕೇಂದ್ರವಾಗಿ ಹೊಸನಗರವು ಹೊರಹೋಮ್ಮವುದು ಇದಕ್ಕೆ ಬೈಪಾಸ್ ನ ಅಗತ್ತ್ಯವಿಲ್ಲ.

ಕೆಲವು ಪ್ರವಾಸಿತಾಣಗಳಿಗೆ ಹೊಸನಗರವು ಕೇಂದ್ರದಲ್ಲಿದ್ದು ಇಲ್ಲಿನ ವ್ಯಾಪಾರ, ಜನ ಜೀವನ ಅಭಿವೃದ್ಧಿಯಾಗುವುದು.

ಇದರ ಹೊರತಾಗಿ ಹೊಸನಗರ ಪಟ್ಟಣಕ್ಕೆ ಬಾರದೆಯೇ ದೂರದಿಂದಲೇ ಪರ್ಯಾಯ ದಾರಿ ಮಾಡುವುದರಿಂದ ಹೊಸನಗರ ಪಟ್ಟಣವೂ ಏನು ಅಭಿವೃದ್ಧಿ ಕಾಣದೆ ವ್ಯಾಪಾರ ಕುಂಟಿತ ಗೊಂಡು ಆತಂತ್ರ ಸ್ಥಿತಿಯತಾಗುವುದು.

ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಕ್ಷೇತ್ರವಾಗುವ ಹೊಸನಗರವನ್ನು ದೂರದೃಷ್ಟಿಯ ಯೋಜನೆಯಿಂದ ಅಭಿವೃದ್ಧಿಯ ದೃಷ್ಟಿಯಲ್ಲಿ ಸದರಿ ಯೋಜನೆಯ ಪರ್ಯಾಯ ಮಾರ್ಗ ವ್ಯವಸ್ಥೆ ಯನ್ನು ಕೈ ಬಿಟ್ಟು ಹೊಸನಗರ ಪಟ್ಟಣದ ಹೃದಯ ಭಾಗಕ್ಕೆ ಸೇರಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವಂತೆ ಯೋಜನೆ ಕೈಗೊಳ್ಳಬೇಕಾಗಿ ವಿನಂತ

ಮೇಲ್ಕಂಡ ವಿಷಯದಂತೆ ಇಂದು ಹೊಸನಗರದ ನಾಗರಿಕರು ಮಾನ್ಯ ಗೃಹಮಂತ್ರಿ ಅರಗ ಜ್ಞಾನೆಂದ್ರ ರವರನ್ನು ಮತ್ತು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ರವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿಯು ಹೊಸನಗರ ಪಟ್ಟಣಕ್ಕೆ ಬಾರದೆ ಹೊರಗಿನಿಂದ ಹೋಗುವುದರಿಂದ ಆಗುವಂತಹ ಅನಾನುಕೂಲತೆಗಳ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಪರ್ಯಾಯ ಮಾರ್ಗದ ಯೋಜನೆಯನ್ನು ಕೈಬಿಟ್ಟು ಹೊಸನಗರ ಹೃದಯಭಾಗವನ್ನು ಸೇರಿಕೊಂಡಂತೆ ರಸ್ತೆ ಹಾದು ಹೋಗಲಿ ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ,ಕ್ಷೇತ್ರದ ಇಬ್ಬರು ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಸುರೇಶ ಸ್ವಾಮಿರಾವ್, ಎನ್ ಆರ್ ದೇವಾನಂದ್, ಸುರೇಶ್, ತಹಸೀಲ್ದಾರ್ ರಾಜೀವ್ ಮತ್ತಿತರರು ಹಾಜರಿದ್ದರು..


Post a Comment

Previous Post Next Post