ಸಾಗರ :ಹೆತ್ತ ಮಗಳಿಗೆ ತನ್ನ ಕಿಡ್ನಿ ಕೊಟ್ಟು ಪುನರ್ಜನ್ಮ ನೀಡಿದ ಹೆತ್ತ ತಾಯಿ...


ತಾಯಿ ಕಿಡ್ನಿ ಮಗಳಿಗೆ ಯಶಸ್ವಿ ಜೋಡಣೆ. ಜೀವಪರ ಕಾಳಜಿಗೆ ಮೆಚ್ಚುಗೆ....

ಸಾಗರ : (ತುಮರಿ) ಹೆತ್ತ ತಾಯಿಯೆ ತನ್ನ ಸ್ವಂತ ಮಗಳ ಉಳಿವಿಗಾಗಿ ತನ್ನ ಕಿಡ್ನಿ ನೀಡುವ ಮೂಲಕ ಮಗಳನ್ನು ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ದ್ವೀಪದ ಚನ್ನಗೊಂಡ ಗ್ರಾಮದ ದಾರಿಗದ್ದೆಯ ವಿಜಯಾ ಜೈನ್ ಅವರಿಗೆ ಕಿಡ್ನಿ ವರ್ಗಾವಣೆ ಶುಕ್ರವಾರ ಮಣಿಪಾಲದ ಕಸ್ತೂರಬಾ ಅಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದ್ದು ಸದ್ಯ ವಿಜಯಾ ಜೈನ್ ಆರೋಗ್ಯವಾಗಿದ್ದಾರೆ.

ಹಿನ್ನೆಲೆ:

ಕಿಡ್ನಿ ಬದಲಾವಣೆಗೆ ನೆರವು ಕೋರಿ ವಿಜಯಾ ಜೈನ್ ಅವರು ಮನವಿ ಹಿನ್ನೆಲೆಯಲ್ಲಿ ಫೆಬ್ರುವರಿ "21ರಂದು ಪ್ರಜಾವಾಣಿ ಚಿಕಿತ್ಸೆಗೆ ನೆರವಾಗುವಂತೆ" ವಿಸ್ತೃತ ವರದಿಯನ್ನ ಸಾಗರ ಪ್ರಜಾವಾಣಿ ವರದಿಗಾರರಾದ ಸುಕುಮಾರ್ ಪ್ರಕಟಿಸಿದ್ದರು..

ಈ ಸುದ್ದಿ ತಿಳಿದ  ನಾಡಿನ ಪ್ರಸಿದ್ಧ ದೇವಾಲಯದ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ಸ್ವತಃ ಮನೆಗೆ ಭೇಟಿ ನೀಡಿ ದೈರ್ಯತುಂಬಿ ನೆರವು ನೀಡಿದ್ದರು ಇದರಿಂದ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಹಲವೆಡೆ ಉಧಾರ ಮನಸ್ಸಿನಿಂದ ನೂರಾರು ಮಂದಿ ನೆರವು ನೀಡಿದ್ದರ ಪರಿಣಾಮ ಕೇವಲ ಒಂದು ವಾರದಲ್ಲೆ 16 ಲಕ್ಷಕ್ಕೂ ಅಧಿಕ ಹಣ ನೆರವಿನ ರೂಪದಲ್ಲಿ ಸಂಗ್ರಹವಾಗಿದ್ದರಿಂದ ಕುಟುಂಬಸ್ಥರಿಗೆ ಸಮಾಧಾನ ತಂದಿತ್ತು. ಸದ್ಯ ಶಸ್ತ್ರಚಿಕಿತ್ಸೆ ಮೂಲಕ ಮಗಳು ಆರೋಗ್ಯ ವಾಗಿರುವುದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. 


ಸದ್ಯ ಸುಕುಮಾರ್ ಅವರ ಸಾಮಾಜಿಕ ಕಳಕಳಿಯ ವರದಿಗೆ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕುಟುಂಬಸ್ಥರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮುಂದೆಯೂ ಸಹ ಸಾಮಾಜಿಕ ಕಳಕಳಿಯ ವರದಿಗಳು ಮತ್ತಷ್ಟು ಬರಲಿ ಎಂದು ಆಶಿಸುತ್ತ ಮಲ್ನಾಡ್ ಲೈವ್ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನ ಸಲ್ಲಿಸುತ್ತಿದ್ದೇವೆ....

Post a Comment

Previous Post Next Post