ಸಾಗರ :ಅರ್ಥಪೂರ್ಣ ಅಂಬೇಡ್ಕರ್ ಜಯಂತಿಯ ಆಚರಣೆ....

ಸಾಗರ :ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ,ಕಾನೂನು,ಸಚಿವರು,ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ದೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನವನ್ನ 

ಸಾಗರದ ಶ್ರೀನಗರದಲ್ಲಿ ಅಂಬೇಡ್ಕರ್ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ  ದೀಪ ಬೆಳಗಿಸಿ ಜಯಂತಿ ಆಚರಣೆ ಮಾಡಲಾಯಿತು.ಶ್ರೀನಗರದ ನಿವಾಸಿಗಳು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು...

ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ ಕಿರು ಪರಿಚಯ ✍️✍️........

1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನಿಸಿದ್ದರು. ಅಂದು ಅಸ್ಪೃಶ್ಯತೆ ಬಲವಾಗಿ ಬೇರೂರಿದ್ದ ಕಾಲ.ಬಾಲ್ಯದಲ್ಲಿ ಅಂಬೇಡ್ಕರ್ ಅವರು ಬಹಳ ಕಷ್ಟದ ದಿನಗಳನ್ನು ಕಂಡಿದ್ದರು. ಆದರೆ, ತಮ್ಮ ಹಠ, ಛಲದ ಮೂಲಕ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅದ್ಭುತ ನಾಯಕರಲ್ಲಿ ಒಬ್ಬರಾಗಿ ರೂಪುಗೊಂಡರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್ . ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು ಅಂಬೇಡ್ಕರ್. ಶೋಷಿತರು, ಕಾರ್ಮಿಕರು, ಮಹಿಳೆಯರ ಉನ್ನತಿಗೆ ಹೋರಾಡಿದ, ಅಸಹಾಯಕರ ಧ್ವನಿಯಾದ, ಸಮಾನತೆಯ ಕನಸು ಕಂಡ, ಎಲ್ಲರ ಬದುಕಿಗೆ ಸ್ಫೂರ್ತಿಯಾದ ಈ ಮಹಾನ್ ನಾಯಕರ ಕೊಡುಗೆಯನ್ನು ಸ್ಮರಿಸಲು ಏಪ್ರಿಲ್ 14ರಂದು ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತದೆ.

"ಇತಿಹಾಸವನ್ನ ಮರೆತವರು ಇತಿಹಾಸವನ್ನ ಸೃಷ್ಟಿಸಲಾರರು "

"ಶಿಕ್ಷಣ ಹುಲಿಯ ಹಾಲಿನಂತೆ ಅದನ್ನ ಕುಡಿದವರು ಘರ್ಜಿಸಲೇಬೇಕು..".ಪ್ರಸಿದ್ದ ಘೋಷವಾಕ್ಯಗಳು ಡಾ.ಬಿ.ಆರ್.ಅಂಬೇಡ್ಕರ್.


 ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ, ದಯಾನಂದ್ ನಾಯಕ್, ಚಂದ್ರಶೇಖರ್, ನೀಲ ಮೇಘ ಶಾಮ, ಸೂರಜ್ ನಾಯರ್,

ರಾಜು ,ಚಂದನ್, ಸೌರವ್ ಇನ್ನಿತರರು ಉಪಸ್ಥಿತರಿದ್ದರು


 

Post a Comment

Previous Post Next Post