ಶಿವಮೊಗ್ಗ :ಹರ್ಷನ ಹೆಸರಿನಲ್ಲಿ ತಲೆ ಎತ್ತಲಿದೆ ಚಾರಿಟೇಬಲ್ ಟ್ರಸ್ಟ್!!

ಶಿವಮೊಗ್ಗ :ಇತ್ತೀಚಿಗೆ ಅನ್ಯ ಧರ್ಮದ ಕಿಡಿಗೇಡಿಗಳಿಂದ ಹತ್ಯೆಯಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಹರ್ಷ ಹಿಂದೂ ಸಾವಿನ ಪ್ರಕರಣ ಕುಟುಂಬಸ್ತರಿಗೆ ನುಂಗಲಾರದ ತುತ್ತಾಗಿತ್ತು. ಮಧ್ಯಮವರ್ಗದ ಅಮಾಯಕ ಯವಕನಹತ್ಯೆ ಖಂಡಿಸಿ ಕರ್ನಾಟಕದಾದ್ಯಂತ ಜನರು ತೀವ್ರವಾಗಿ ಖಂಡಿಸಿದ್ದರು. ಅಪಾರ ಪ್ರಮಾಣದಲ್ಲಿ ಸಂಘ ಸಂಸ್ಥೆಗಳು ಸರ್ಕಾರ ಜನರು ಮಿಡಿದು ನೆರವಿನ ಹಸ್ತ ಚಾಚಿದ್ದರು.

ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ ಹರ್ಷ ಅವರ ಅಕ್ಕಾ ಅಶ್ವಿನಿ ಹರ್ಷನ ಹೆಸರಿನಲ್ಲಿ ಬಂದ ಹಣ ಹರ್ಷನ ಹೆಸರಲ್ಲೇ ಉಪಯೋಗವಾಗಬೇಕು.ಹರ್ಷನ ಸಾವಿನ ನೋವಿನಿಂದ ನಮ್ಮ ತಾಯಿ-ತಂದೆ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.ಹರ್ಷ ಯಾವಾಗಲೂ ಧರ್ಮ,ಭಾಷೆ ವಿಚಾರದಲ್ಲಿ ಮಿಡಿಯುವ ಮನಸ್ಸು ಉಳ್ಳವನು ಆದ್ದರಿಂದ ಹರ್ಷನ ಹೆಸರನಲ್ಲೇ ಚಾರಿಟೇಬಲ್ ಟ್ರಸ್ಟ್ ಮಾಡಿದ್ದೇವೆ. ಟ್ರಸ್ಟ್ ಅಧ್ಯಕ್ಷೇಯಾಗಿ ನಾನು,ಸಹೋದರಿ ಉಪಾಧ್ಯಕ್ಷೇಯಾಗಿ ವ್ಯವಸ್ಥಾಪಕ ಟ್ರಸ್ಟಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ಈ ಕಾಂತೇಶ್, ಖಜಾಂಚಿಯಾಗಿ ಸಚಿನ್ ರಾಯ್ಕರ್ ಅವ್ರು ಕಾರ್ಯ ನಿರ್ವಹಿಸುವರು.

ಕೆ ಇ.ಕಾಂತೇಶ್ ಮಾತನಾಡಿ: 

ಟ್ರಸ್ಟ್ ನ ಮೂಲ ಉದ್ದೇಶ ಬಡತನದಲ್ಲೆ ಬೆಳೆದು ಉತ್ತಮ ಸಾಧನೆ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತೇಜನ ಹಾಗೂ ಬಡ ಅನಾರೋಗ್ಯ ಪೀಡಿತರಿಗೆ ನೆರವು, ಹಾಗೂ ವಿಶೇಷವಾಗಿ ಗೋಶಾಲೆಗಳ ನಿರ್ಮಾಣಕ್ಕೆ ನೆರವು. ಮತ್ತು ಹೆಚ್ಚಾಗಿ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದರು.ಈಗಾಗಲೇ ಟ್ರಸ್ಟ ನ ವತಿಯಿಂದ ಪಿ ಎಫ್ ಐ ಸಂಘಟನೆಯ ಪ್ರಚೋದಿತ ಗಲಭೆಯಲ್ಲಿ ಹತರಾಗಿದ್ದ ವಿಶ್ವನಾಥ್ ಶೆಟ್ಟಿ ಅವರ ಕುಟುಂಬಕ್ಕೆ 2 ಲಕ್ಷ ನೆರವಿನ ಜೊತೆಗೆ ಪುತ್ರನ ಯಶಸ್ ಸಂಪೂರ್ಣ ವಿದ್ಯಾಭ್ಯಾಸವನ್ನ ಟ್ರಸ್ಟ್ ನೋಡಿಕೊಳ್ಳಲಿದೆ.ಹಾಗೂ ಕಾಸರಗೋಡಿನಲ್ಲಿ rss ಕಾರ್ಯಕರ್ತ ಜ್ಯೋತಿಶ್ ಕುಟುಂಬಕ್ಕೂ ನೆರವು ನೀಡಿದ್ದು. ಅವರ ಎರಡನೇ ಮಗನ ವಿದ್ಯಾಭ್ಯಾಸ ಜವಾಬ್ದಾರಿಗೆ ಹರ್ಷನ ಕುಟುಂಬ ಒಪ್ಪಿಗೆ ನೀಡಿದೆ ಎಂದರು.

ಟ್ರಸ್ಟ್ ಈಗಷ್ಟೇ ಆರಂಭವಾಗಿದ್ದು,ನಮ್ಮ ಜೊತೆಗೆ ಕೈಜೋಡಿಸುವವರು ಸಹ  ಸಹಾಯಮಾಡಬಹುದು ಎಂದರು..


ಪತ್ರಿಕಾಗೋಷ್ಠಿಯಲ್ಲಿ ಹರ್ಷನ ಅಕ್ಕಾ ಅಶ್ವಿನಿ, ಅವರ ತಾಯಿ,ಪದ್ಮ ನಾಗರಾಜ್ ತಂದೆ ನಾಗರಾಜ್,ಕಾರ್ಯದರ್ಶಿ ಸಚಿನ್ ರಾಯ್ಕರ್,ಪುರುಷೋತ್ತಮ್, ಫಣಿಶ್ ಇದ್ದರು 




Post a Comment

Previous Post Next Post