ಶಿವಮೊಗ್ಗ : ಮಾನಸ ಇಂಟರ್ನ್ಯಾಷನಲ್ ಸ್ಕೂಲ್ ಗಮನಸೆಳೆದ ಪ್ರಾಯೋಗಿಕ ಮಾದರಿಗಳು.!!!

ಶಿವಮೊಗ್ಗ : ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ನಲುಗಿ ಹೋಗಿದ್ದ ಶೈಕ್ಷಣಿಕ ರಂಗ ಈಗ ಕೊಂಚಮಟ್ಟಿಗೆ ನಿಟ್ಟುಸಿರು ಬಿಡುವಾಂತಗಿದೆ ಹೌದು ಜಿಲ್ಲೆಯ ಶಾಲಾ ಕಾಲೇಜುಗಳು ಈಗ ಎಂದಿನ ಲಯಕ್ಕೆ ಬಂದಿದ್ದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹೌದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕು ಕೋಟೆಗಂಗೂರಿನಲ್ಲಿರುವ ಮಾನಸ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ " ಮಾನಸ ಇಂಟರ್ನ್ಯಾಷನಲ್ ಸ್ಕೂಲ್ " ನಲ್ಲಿ  ವಿಜ್ಞಾನ  ಹಾಗೂ ಕಲಾಮೇಳ 2022 ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು.

ವಿದ್ಯಾನಿಲಯದ ಪ್ರಾಂಶುಪಾಲರಾದ ಪ್ರೊಫೆಸರ್ ಕವಿತಾ ರಾಣಿ ಕಾರ್ಯಕ್ರಮವ ನ್ನು ಉದ್ಘಾಟಿಸಿದರು. ಅನಂತರ ಮಕ್ಕಳ ಪ್ರಾಯೋಗಿಕ ಮಾದರಿಗಳ ಅನಾವರಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.ಇಂದಿನ ತಂತ್ರಜ್ಞಾನ- ವಿಜ್ಞಾನಯುಗದಲ್ಲಿ ಮಕ್ಕಳಿಗೆ ಪ್ರಾಯೋಗಿಕ ಅಭ್ಯಾಸಮೂಲಕ ವಿವರಣೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳ ವಿಭಿನ್ನ ಮಾದರಿ ಪ್ರಯೋಗಗಳು ಹಾಗೂ ಕಲಾತ್ಮಕ ವಿವರಣೆ ವೀಕ್ಷಕರ ಗಮನ ಸೆಳೆದಿತ್ತು. ಪಠ್ಯದಲ್ಲಿನ ವಿಷಯಗಳನ್ನ ಪ್ರಾಯೋಗಿಕವಾಗಿ ನಿರೂಪಣೆ ಮಾಡುವ ಮೂಲಕ ಮಕ್ಕಳು ತಮ್ಮ ಕೌಶಲ್ಯ ಹಾಗೂ ಜಾಣ್ಮೆಯನ್ನ ಪ್ರದರ್ಶನ ಮಾಡಿದುದು. ಶಿಕ್ಷಕರ, ಪೋಷಕರ ಮೆಚ್ಚುಗೆ ಗಳಿಸಿದರು ವಿಶೇಷವಾಗಿ ಇಂದಿನ ಆಧುನಿಕ ಜಗತ್ತಿಗೆ ನವೀಕರಿಸಬಹುದಾದ ಇಂಧನಗಳ ಮಹತ್ವವನ್ನು ಅಚ್ಚುಕಟ್ಟಾಗಿ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ಜನಾರ್ಧನ್, ಹಾಗೂ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು....



 

Post a Comment

Previous Post Next Post