ತೀರ್ಥಹಳ್ಳಿ: ಪ್ರತಿದಿನ ನೆಡೆಯುತ್ತಿದ್ದ ಪ್ರಸಿದ್ಧ ತುಂಗಾರತಿ ನಿಲ್ಲಲು ಕಾರಣವೇನು,?? ಯಾರಿಂದ ಯಾಕೆ

ತೀರ್ಥಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾ ಆರತಿ ಮಾಡಿದ್ದ ಹಾಗೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಕುರುವಳ್ಳಿಯ ಕಾಶಿ ದೀಕ್ಷಿತ್ ಇವರ ನೇತೃತ್ವದಲ್ಲಿ ತುಂಗಾ ಆರತಿಯನ್ನು ಮಾಡಲಾಯಿತು. ಇದಕ್ಕೆ ತೀರ್ಥಹಳ್ಳಿಯ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಯಿತು. 

ನಂತರ ತೀರ್ಥಹಳ್ಳಿಯ ತಹಸೀಲ್ದಾರ್ ಡಾ. ಶ್ರೀಪಾದ್ ಇವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿದಿನ ಸಂಜೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಅರ್ಚಕರು ಒಂದೊಂದು ತಿಂಗಳು ತುಂಗೆಗೆ ಆರತಿ ನೆಡೆಸಲಿ ಎಂದು ಮೌಖಿಕವಾಗಿ ಆದೇಶದ ರೂಪದಲ್ಲಿ ತಿಳಿಸಿದ್ದರು.

ಆದರೆ ತಾಲೂಕು ಆಡಳಿತ ಮೊದಮೊದಲಿಗೆ ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ನಂತರ ಇದರ ಬಗ್ಗೆ ಗಮನ ವಹಿಸದ  ಕಾರಣ ಸತತವಾಗಿ 6 -8 ತಿಂಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆಡೆದುಕೊಂಡು ಬಂದಿದ್ದ ತುಂಗಾ ಆರತಿ ಕಾರ್ಯಕ್ರಮಕ್ಕೆ ಸತತ 3 ತಿಂಗಳಿನಿಂದ ಬ್ರೇಕ್ ಬಿದ್ದಿದೆ. ಕಾಶಿ ದೀಕ್ಷಿತ್ ಅವರು ಈ ತುಂಗಾ ಆರತಿಯನ್ನು ತುಂಬಾ ಅಚ್ಚುಕಟ್ಟಾಗಿ ನೆಡೆಸಿಕೊಡುತ್ತಿದ್ದರು. ಆದರೆ ನಂತರದಲ್ಲಿ ತುಂಗಾ ಆರತಿ ಮಾಡಲು ತಮ್ಮ ಸಮಯ ಬಂದಾಗ ಕೆಲವೊಂದು ಅರ್ಚಕರು ಇದರ ಬಗ್ಗೆ ಆಸಕ್ತಿ ವಹಿಸಲಿಲ್ಲವೋ ಅಥವಾ ಇದಕ್ಕೆ ತಾಲೂಕು ಆಡಳಿತ ಗಮನ ವಹಿಸದೇ  ನಿರ್ಲಕ್ಷ್ಯ ವಹಿಸಿತೋ ಗೊತ್ತಿಲ್ಲ ಒಟ್ಟಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆಡೆಯುತ್ತಿದ್ದ ತೀರ್ಥಹಳ್ಳಿಯ  ತುಂಗಾ ಆರತಿ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ. 

ಅದೇನೇ ಆಗಲಿ ಯಾರಿಂದ ಆದರೂ ಕಾರ್ಯಕ್ರಮ ನಿಂತಿರಲಿ ಈಗ ಬರುವ ಯುಗಾದಿ ಹಬ್ಬದಿಂದ ಮತ್ತೊಮ್ಮೆ ತೀರ್ಥಹಳ್ಳಿಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಮುಂದುವರಿಯಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 ವರದಿ : ಅಕ್ಷಯ್ ಕುಮಾರ್

Post a Comment

Previous Post Next Post