ಹೊಸನಗರ :ಕಾನೂನು ಸುವ್ಯವಸ್ಥೆಗೆ ಪೂರಕವಾಗಬೇಕಿದ್ದ ಸಿ ಸಿ ಕ್ಯಾಮೆರಾಗಳ ದುಸ್ಥಿತಿ ಕೇಳೋರಿಲ್ಲ ಹೇಳೋರಿಲ್ಲ???

ಸಿಸಿ ಕ್ಯಾಮೆರಾ ದುರಸ್ತಿಗೆ ಆಗ್ರಹ

ಹೊಸನಗರ:ತಾಲ್ಲೂಕಿನ  ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೋಷದಿಂದ ಕೊಡಿದ್ದು  ತಿಂಗಳುಗಳು ಕಳೆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿರುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ರಿಪ್ಪನ್ ಪೇಟೆ ನಗರದ ವಿನಾಯಕ ವೃತ್ತದಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮೆರಾ 4 ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ ಹಾಗೂ ರಿಪ್ಪನ್ ಪೇಟೆ ಕೋಮು ಸೂಕ್ಷ್ಮ ಪಟ್ಟಣವಾಗಿದ್ದು ಸಾಕಷ್ಟು ಅಪರಾಧ ಪ್ರಕರಣಗಳು ನೆಡೆಯುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ರಸ್ತೆಯಲ್ಲಿ ಜೋತು ಬಿದ್ದಿರುವ ಸಿಸಿ ಕ್ಯಾಮೆರಾ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.

ಪ್ರಮುಖವಾಗಿ ಇಲ್ಲಿನ ವಿನಾಯಕ ವೃತ್ತ ಆಕ್ರಮ ಮರಳು ಸಾಗಣೆಗೆ. ಅನೈತಿಕ ಚಟುವಟಿಕೆ. ಅಪಘಾತ ಇನ್ನಿತರೆ ಪ್ರಕರಣಗಳ ತಾಣವಾಗಿದ್ದು ಸದ್ಯ ಪೋಲಿಸ್ ಇಲಾಖೆ ಖಾಸಗಿ ಅಂಗಡಿ ಮಾಲೀಕರ ಸಿ.ಸಿ ಕ್ಯಾಮರಾದ ಮೊರೆ ಹೋಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. 


ಗೃಹಸಚಿವ ಆರಗ ಜ್ಞಾನೇಂದ್ರ ಇದೇ ಮಾರ್ಗದಲ್ಲಿ ಬೆಂಗಳೂರು, ಶಿಕಾರಿಪುರ, ಸಾಗರ ಹೀಗೆ ಹಲವಾರು ಪ್ರದೇಶಗಳಿಗೆ ವಿನಾಯಕ ವೃತ್ತದ ಮೂಲಕ ಪ್ರಯಾಣಿಸುತ್ತಾರೆ. ಆದರೆ ಒಮ್ಮೆಯೂ ಈ ಬಗ್ಗೆ ಗಮನ ಹರಿಸಿಲ್ಲ ಇದರಿಂದ ಸಾಕಷ್ಟು ಅಪರಾಧ ಪ್ರಕರಣಗಳು ಮುಚ್ಚಿ ಹೋಗಿವೆ ಎಂಬುದು ಸಾರ್ವಜನಿಕರ ಆಳಲು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

Post a Comment

Previous Post Next Post