ಹೊಸನಗರ :ಮತ್ತೆ ಮಾರ್ಧನಿಸಿದ ಹೋರಾಟ ಕಿಚ್ಚು,

ಹೊಸನಗರ ವಿಧಾನಸಭೆ ಕ್ಷೇತ್ರ ಪುನರ್ ಸ್ಥಾಪಿಸುವ ಹೋರಾಟಕ್ಕೆ ಕಹಳೆ ಮೊಳಗಿದ್ದು,ನಾಳೆ ಹೊಸನಗರದ ಹಳೆ ಕೋರ್ಟ್ ಸರ್ಕಲ್ ನಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ.

ಹೊಸನಗರ ವಿಧಾನಸಭಾ ಕ್ಷೇತ್ರ ಕಳೆದುಕೊಂಡು ಹಲವು ವರುಷಗಳೇ ಕಳೆದು ಹೋಗಿದೆ. ಹೊಸನಗರ ಕ್ಷೇತ್ರ ರಾಜ್ಯದ ಅತಿ ದೊಡ್ಡ ಕ್ಷೇತ್ರವಾಗಿದೆ. 175 ಕಿ.ಮೀ. ಉದ್ದವಿರುವ ಈ ಕ್ಷೇತ್ರ ಈಗ ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿ ಹೋಗಿದ್ದರಿಂದ ಹೊಸನಗರ ತಾಲೂಕು ಅನಾಥವಾಗಿ ಪರಿಣಮಿಸಿದೆ.

2001 ರ ಕುಲದೀಪ್ ಸಿಂಗ್ ಕಮಿಟಿ ವರದಿ ಪ್ರಕಾರ ಜನಸಂಖ್ಯಾ ಆಧಾರದ ಮೇಲೆ ಹೊಸನಗರವನ್ನ ವಿಧಾನಸಭಾ ಪಟ್ಟಿಯಿಂದ ಕೈ ಬಿಡಲಾಯಿತು. 

ಆದರೆ ಕೆಲವು ತಿಂಗಳುಗಳಿಂದ ಮತ್ತೆ ಹೊಸನಗರ ವಿಧಾನಸಭಾ ಕ್ಷೇತ್ರ ಹಿಂಪಡೆಯುವ ಹೋರಾಟದ ಕಿಚ್ಚು ಹತ್ತಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಷ್ಟೇ ಅಲ್ಲದೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬೃಹತ್ ಹೋರಾಟವು ನೆಡೆದಿತ್ತು.

ಈಗ ಕೊರೊನಾ ಆರ್ಭಟ ಕಡಿಮೆಯಾಗುತ್ತಿದ್ದಂತೆ ಮತ್ತೆ ಹೊಸನಗರ ವಿಧಾನಸಭಾ ಕ್ಷೇತ್ರದ ಹೋರಾಟಕ್ಕೆ ಪುಷ್ಟಿ ದೊರೆತಂತಾಗಿದ್ದು ನಾಳೆ ಹೊಸನಗರದ ಕೋರ್ಟ್ ವೃತ್ತದ ಬಳಿ ರಸ್ತೆ ತಡೆ ಹಮ್ಮಿಕೊಂಡಿದ್ದು ಪಕ್ಷ ಜಾತಿ ಎನ್ನದೇ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. 

ಈ ಹೋರಾಟಕ್ಕೆ ತಾಲೂಕಿನ ಹಿರಿಯ ಮಾಜಿ ಶಾಸಕರಾದ ಬಿ ಸ್ವಾಮಿ ರಾವ್, ಮಾಜಿ ಶಾಸಕರಾದ ಜಿ ಡಿ ನಾರಾಯಣಪ್ಪ , ಕಲಗೊಡು ರತ್ನಾಕರ್, ಸುರೇಶ್  ಸ್ವಾಮಿರಾವ್, ವೀರೇಶ್ ಆಲವಳ್ಳಿ,ಬಿ ಜಿ ಚಂದ್ರಮೌಳಿ, ಹಾಗೂ ಎಲ್ಲ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ಎಲ್ಲರೂ ಈ ಪ್ರತಿಭಟನೆಗೆ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ರಾಜ್ಯ ಕ್ಕೆ ಬೆಳಕು ನೀರು ಕೊಟ್ಟ ಊರು ಇಂದು ತನ್ನ ಅಸ್ತಿತ್ವ ಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದು ವದಗಿದೆ ಎನ್ನುವುದೆ ಒಂದು ದುರುದೃಷ್ಟ ಸಂಕೇತ

Post a Comment

Previous Post Next Post