ಹೊಸನಗರ : ಮರಳುಗಾರಿಕೆ ವಸೂಲಾತಿ??ಮಾಜಿ ಶಾಸಕ ಗೋಪಾಲಕೃಷ್ಣ ಹೇಳಿಕೆ ಶುದ್ಧ ಸುಳ್ಳು ಎಂದ ಲಾರಿ ಮಾಲೀಕರ ಸಂಘ

ಹೊಸನಗರ :ಹೊಸನಗರ ತಾಲೂಕಿನಲ್ಲಿ ನಡೆದ ಲಾರಿ ಮಾಲೀಕರ ಸಂಘದ ಸಭೆಯ ನಂತರ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಣತಿ ಅಭಿಲಾಶ್ ಮರಳುಗಣಿಗಾರಿಕೆ ಗಾಗಿ ಹಾಲಪ್ಪ ನವರಿಗೆ ಹಣ ರವಾನೆಯಾಗುತ್ತದೆ ಎಂಬ ಬೇಳೂರು ಗೋಪಾಲಕೃಷ್ಣ ಅವರ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಸದ್ಯಕ್ಕೆ ದೂರವಾದ ಮಾತು. ರಾಜಕೀಯ ದುರುದ್ದೇಶದಿಂದ ಕೂಡಿದ ಇಂಥ ಹೇಳಿಕೆಗಳಿಂದ ಯಾವುದೇ ಪ್ರಯೋಜನ ಇಲ್ಲ. ಪ್ರಸ್ತುತ ಹೊಸನಗರ ಕ್ಷೇತ್ರದ ಅರಿವು ಸಹ ಮಾಜಿ ಶಾಸಕರಿಗೆ ಇದೆ ಇಂತಹ ಸಂದರ್ಭದಲ್ಲಿ ನಾವು ನಯಾಪೈಸೆಯನ್ನೂ ಶಾಸಕರಿಗೆ ಕೊಟ್ಟಿಲ್ಲಾ. ಕೊಡೋದು ಇಲ್ಲ ಗೋಪಾಲಕೃಷ್ಣ ಅವ್ರು ಕರೆದ ಯಾವ  ದೇವಸ್ಥಾನಕ್ಕೆ ಬರುವುದಕ್ಕೂ ನಾವು ರೆಡಿ ಇದ್ದೇವೆ..

3 ವರ್ಷದಿಂದ ಈ ಕೊರೋನ ಮಹಾಮಾರಿ ಬೆನ್ನಿಗೆ ಬಿದ್ದ ಬೇತಾಳ ಎಂಬಂತೆ ರೋಗದಿಂದ ವ್ಯವಹಾರ ವಹಿವಾಟು ಇಲ್ಲದೆ ವಾರದ ಸಂಘ ಸಂಸ್ಥೆ, ಇನ್ಸೂರೆನ್ಸ್ ಪೈನಾನ್ಸ್ ಲೋನ್ ಕಟ್ಟಲಾಗದ ಲಾರಿ ಮಾಲೀಕರು ಕಾರ್ಮಿಕ ವರ್ಗದ ಕಷ್ಟ ಅರಿಯದೇ ಮಾಜಿ ಶಾಸಕರು ಗೋಪಾಲಕೃಷ್ಣ ಬೇಳೂರು ಅವರು ತಮ್ಮ ರಾಜಕೀಯ ದುರುದ್ದೇಶದಿಂದ ಶಾಸಕರು ಹಾಗೂ ಸಂಬಂಧಪಟ್ಟವರ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ರಾಜಕೀಯಕ್ಕೆ ಮರಳು ಸಾಗಣೆ ಮಾಡುವ ನಮ್ಮ ಹೆಸರು ಬಳಸಿಕೊಂಡು ನಮ್ಮ ಹೊಟ್ಟೆ ಮೇಲೆ ಹೊಡಿಯುವ ಕೆಲಸ ಮಾಡುವುದು ತಕ್ಷಣ ನಿಲಿಸಬೇಕು... ಮೊನ್ನೆ ಮೊನ್ನೆ 50/60 ಬಸ್ ಮಾಲೀಕರೇ ಕೊರೋನ ದಿಂದ ನಷ್ಟ ಅನುಭವಿಸಿ ಈ ಲೋಕ ತ್ಯಜಿಸಿದಂತೆ ನಮ್ಮ ಕಾರ್ಮಿಕ ಮಾಲೀಕ ವರ್ಗ ಆತ್ಮಹತ್ಯೆ ಗೆ ಶರಣದರೆ ನೇರವಾಗಿ ಗೋಪಾಲಕೃಷ್ಣ ಅವರೇ ಕಾರಣ ಆದಂತೆ....

ಲಾರಿ ಉದ್ಯಮ ನಂಬಿಕೊಂಡು ಎಲ್ಲಾ ಪಕ್ಷದ ಕಾರ್ಯಕರ್ತರ ಜೊತೆಗೆ ಮಾಜಿ ಶಾಸಕರು ಬೇಳೂರು ಗೋಪಾಲಕೃಷ್ಣ ಬೆಂಬಲಿಗರು ಇದ್ದಾರೆ ಎಂಬ ಸತ್ಯ ಅರಿತು ತಮ್ಮ ಬೆಂಬಲಿಗರ ಅನ್ನ ಕಸಿಯುವ ಮನಸ್ಥಿತಿ ಇಂದ ಹೊರಬರಬೇಕು ಎಂದು ಕಿಡಿಕಾರಿದರು.

 ಲಾರಿ ಮಾಲೀಕರಾದ ಮಹಾಬಲ ಮಾತನಾಡಿ ಈಗಾಗಲೇ ಹಳ್ಳಿಗಾಡುಗಳಲ್ಲಿ ಮರಳಿನ ಅಭಾವ ಸೃಷ್ಟಿಯಾಗಿದ್ದು, ಸಕಾಲಕ್ಕೆ ಮರಳು ಸಿಗುತ್ತಿಲ್ಲ.ಸರ್ಕಾರಿ ಕಟ್ಟಡ ಕಾಮಗಾರಿಗಳಿಗೆ, ಆಶ್ರಯ ಯೋಜನೆ  ಮನೆಗಳಿಗೆ ಮರಳಿನ ಬೇಡಿಕೆ ಇದ್ದು ಸರ್ಕಾರ ಇಂತಹ ಯೋಜನೆಗಳಿಗೆ ಈಗಾಗಲೇ ಅನುಮತಿ ನೀಡಿದ್ದು. ಇದನ್ನು ಪರಿಗಣಿಸಿ ಬಡವರ ಅಶ್ರಯ ಯೋಜನೆ ಮನೆಗಳಿಗೆ ಮರಳಿನ ಬೇಡಿಕೆ ಮನಗಂಡು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವ್ರು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಾಗಣೆಗೆ ಅನುಮತಿ ನೀಡಿದ್ದಾರೆ.  ಇದನ್ನೇ ರಾಜಕೀಯಬಂಡವಾಳವಾಗಿಸಿರಿ ದೊಡ್ಡಪ್ರಮಾಣದಲ್ಲಿ ವಸುಲಾತಿ ಹಾಗೂ ದಂದೆಯಂತೆ ಬಿಂಬಿಸುತ್ತಿರುವ ಮಾಜಿ ಶಾಸಕ  ಗೋಪಾಲಕೃಷ್ಣ ಅವರ ಆರೋಪ ಸರಿಯಲ್ಲ.

.ಈ ಸಂದರ್ಭದಲ್ಲಿ ಲಾರಿ ಮಾಲೀಕರಾದ ಅಶೋಕ ಸಂಪಳ್ಳಿ ಅಣ್ಣಪ್ಪ ಧರ್ಮಪ್ಪ, ಬಾಣಿಗ ರಮೇಶ್ ಮುಂತಾದ 50ಕ್ಕೂ ಹೆಚ್ಚು  ಲಾರಿ ಮಾಲೀಕರು ಇದ್ದರು 


Post a Comment

Previous Post Next Post