ಹೊಸನಗರ : ವಾರಂಬಳ್ಳಿ ಸಮೀಪದ ಐತಿಹಾಸಿಕ ಕಲ್ಯಾಣೇಶ್ವರ ದೇವಾಲಯದ ನೂತನ ಶಿಲಾಮಯ ಹಾಗೂ ಪುನರ್ ಪ್ರತಿಷ್ಠಾಪನೆಗೆ ಕ್ಷಣಗಣನೆ


ಹೊಸನಗರ :ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಮೀಪ ವಾರಂಬಳ್ಳಿ ಯ ಸರಿಸುಮಾರು ಎಂಟು, ಮತ್ತು ಹತ್ತನೇ ಶತಮಾನದ  ಐತಿಹಾಸಿಕ ಸುಪ್ರಸಿದ್ಧ  ಶಿವನ ಆಲಯ ಕಲ್ಯಾಣಿ ಶ್ವರ ದೇವಸ್ಥಾನದ ಸಪರಿವಾರ ಕಲ್ಯಾಣಿ ಶ್ವರನ ಶಿಲಾಮಯ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು. ಫೆಬ್ರವರಿ 2 ರಂದು ಪುನರ್ ಪ್ರತಿಷ್ಠಾಪನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು,ಮರುದಿನ ಬ್ರಹ್ಮಕಲಶೋತ್ಸವ ಹಾಗೂ ಪೂರ್ಣಾಹುತಿಯನ್ನು ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳಿಂದ ನೆರವೇರಲಿದೆ.

ದೇವಾಲಯದ ಐತಿಹಾಸಿಕ ಹಿನ್ನೆಲೆ :

ದೇವಸ್ಥಾನದ ಐತಿಹಾಸಿಕ ಹಿನ್ನೆಲೆ ಕುರಿತು ಇತಿಹಾಸಕಾರರಾದ ಅಂಬ್ರಯ್ಯ ಮಠ ಹೇಳುವಂತೆ::ಹೊಸನಗರದ ಪುಟ್ಟ ಪ್ರಕೃತಿಯ ಮಧ್ಯೆ ಇರುವ  ವಾರಂಬಳ್ಳಿ ಎಂಬುದೊಂದು ಹಳ್ಳಿ.ಇದು ಹೊಸನಗರದಿಂದ ಸರಿಸುಮಾರು ಎಂಟು ಕಿಲೋಮೀಟರ್  ದೂರದಲ್ಲಿದೆ.ಜಯನಗರವನ್ನು ಬಳಸಿಕೊಂಡು ತೀರ್ಥಹಳ್ಳಿಗೆ ಹೋಗುವ ರಾಜ್ಯ ರಸ್ತೆಯಿಂದ ಸುಮಾರು 1km ಕ್ರಮಿಸಿದರೆ ಮಠದಹಕ್ಲು ಎಂಬ ಜಾಗ ಸಿಕ್ಕುತ್ತದೆ.ಪೂರ್ವಕ್ಕೆ ಈರಗೋಡು ಪಶ್ಚಿಮಕ್ಕೆ ರಾಮಚಂದ್ರಪುರ ಮಠ,ದಕ್ಷಿಣಕ್ಕೆ ಕೊಳಗಿ-ಗೊರಗೋಡು ಉತ್ತರಕ್ಕೆ ಬಾವಿಕೇವಿ ಗಡಿಗಳನ್ನು ಹೊಂದಿರುವ ಮಠದ ಹಕ್ಲುವಿನಲ್ಲಿ  ಒಂದು ಚಿಕ್ಕ ದೇವಾಲಯ ಸಿಕ್ಕುತ್ತದೆ.ಜಂಬಿಟ್ಟಿಗೆ ಕಲ್ಲುಗಳಿಂದ ನಿರ್ಮಿತವಾಗಿರುವ ಈ ದೇವಾಲಯವು 4 ಅಡಿ ಉದ್ದ 4 ಅಡಿ ಅಗಲದ ಚಚ್ಚೌಕದಲ್ಲಿದೆ.ಕ್ರಿ.ಶ 8ನೇ ಶತಮಾನದಷ್ಟು ಪ್ರಾಚೀನವಾದ ದಿವ್ಯ ಶಿವಲಿಂಗುವಿರುವ ಈ ದೇವಾಲಯಕ್ಕೆ ಶ್ರೀ ಕಲ್ಯಾಣೇಶ್ವರ ಎಂದು ಸ್ಥಳೀಯರು ಕರೆಯುತ್ತಾರೆ.ಮದುವೆಯಾಗದ ಗಂಡು ಹಾಗೂ ಹೆಣ್ಣು ಮಕ್ಕಳು ತಮಗೆ ಒಳ್ಳೆಯ ಹೆಣ್ಣು/ಗಂಡು ಸಿಕ್ಕುವಂತಾಗಲಿ ಎಂದಿಲ್ಲಿ ಬೇಡಿಕೊಳ್ಳುತ್ತಾರೆ.ತಮ್ಮ ಬೇಡಿಕೆಗೆ ಸಾಕ್ಷಿಯಾಗಿ ಹಲವಾರು ರೀತಿಯಲ್ಲಿ ಹರಕೆಯನ್ನೂ ಹೊತ್ತು ಹೋಗುತ್ತಾರೆ."ಭಕ್ತರ ಮದುವೆಯ ಶುಭ ಕಾರ್ಯದ ಬೇಡಿಕೆಯು ಬಹುಬೇಗನೆ ಪೂರೈಸುವುದರಿಂದ ಈ ದೇವರಿಗೆ ಶ್ರೀ ಕಲ್ಯಾಣೇಶ್ವರ ಎಂದೇ ಪ್ರತೀತಿ ಇದೆ".ಮಕ್ಕಳಿಲ್ಲದವರು ತಮಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತಾರೆ.ತಮ್ಮ ಕುಟುಂಬದಲ್ಲಿ ಆಗಿಹೋದ/ಆಗಲಿರುವ ಸಮಸ್ಯೆಗಳನ್ನು,ಕುಂದುಕೊರತೆಗಳನ್ನು ಬೇರೊಬ್ಬರಿಂದ ತಮಗಾದ ಕಷ್ಟಕ್ಕೆ,ನಷ್ಟಕ್ಕೆ ಪರಿಹಾರವನ್ನು ಕೇಳಿ ಬಂದಿಲ್ಲಿ ಪ್ರಾರ್ಥಿಸುತ್ತಾರೆ.ಕೇವಲ ಪ್ರಾರ್ಥಿಸುವುದು ಮಾತ್ರವಲ್ಲ ಆ ಕುರಿತಂತೆ ಒಂದು ಗಂಟೆಯನ್ನೂ ಕಟ್ಟಿ ಹೋಗುತ್ತಾರೆ.ಭಕ್ತರ ಕೇಳಿಕೆ ಹುಸಿಯಾಗುವುದಿಲ್ಲ.ಆತ್ಮ ಸಾಕ್ಷಿಯಾಗಿ ಕೇಳಿದರೆ ಕೊಡಬಲ್ಲ ದೇವರು ಶ್ರೀ ಕಲ್ಯಾಣೇಶ್ವರ ಎನ್ನುತ್ತಾರೆ ಇಲ್ಲಿಯ ಭಕ್ತಾದಿಗಳು.


ಇಂತ ಹೇಳಿಕೆಗಳು,ಕೇಳಿಕೆಗಳು ಇಂದಿನವಲ್ಲ,ಹಿಂದಿನಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ ಕ್ರಿ.ಶ.8ನೇ ಶತಮಾನದಿಂದ ಈ 21ನೇ ಶತಮಾನದುದ್ದಕ್ಕೂ ಈ ದೇವಾಲಯಕ್ಕೆ ಭಕ್ತಾದಿಗಳು ಹರಕೆ ಹೊತ್ತಿದ್ದಾರೆ,ಪೂಜಿಸುತ್ತ ಬಂದಿದ್ದಾರೆ.
ಬಿದನೂರು ರಾಜಧಾನಿ ಆಗಿದ್ದ ಕಾಲದಲ್ಲಿ ಅಂದರೆ 1500-1763ರ ವರೆಗೂ ಈ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಳದಿ ನಾಯಕರ ಪ್ರಭಾವ ಸಾಕಷ್ಟು ಇತ್ತುಕೆಳದಿ ಸಂಸ್ಥಾನದ ಕಾಲದಲ್ಲಿಯಂತೂ(1618-1763)ವಿಶೇಷ ಪೂಜೆ, ಹೋಮ-ಹವನಗಳು ಉತ್ಸವಗಳು ಇಲ್ಲಿ ನಡೆಯುತ್ತಿದ್ದವು.ಏನೇ ಇರಲಿ ಕಲ್ಯಾಣೇಶ್ವರ ಎಂಬ ಈ ಪ್ರಾಚೀನ ದೇವಾಲಯವು ಹಿಂದಿನಿಂದಲೂ ಪ್ರಸಿದ್ಧವಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ.ಹಾಗೂ ಇತ್ತೀಚಿಗೆ ಅಲ್ಲಿಯೇ ಸಿಕ್ಕ ಅತ್ಯಂತ ಚಿಕ್ಕದು ಆದರೆ ಕಲಾತ್ಮಕತೆಯಿಂದ ಕೂಡಿದ ಶ್ರೀವೀರಭದ್ರನ ಮೂರ್ತಿಯೂ ಇಲ್ಲಿಯೇ ಇದೆ.ಹಲವಾರು ನಾಗರ ಕಲ್ಲುಗಳು,ಲಿಂಗಮುದ್ರೆ ಕಲ್ಲುಗಳು ಇಲ್ಲಿವೆ.

ಪ್ರಕೃತಿ ಮಧ್ಯದಲ್ಲಿರುವ ಈ ದೇವಸ್ಥಾನಕ್ಕೆ
ನೀವು ಕೂಡ ಒಮ್ಮೆ ಭೇಟಿ ನೀಡಿ.

ಸ್ಥಳ: ಹೊಸನಗರ ನಗರ ಜಯನಗರ   ರಾಜ್ಯಹೆದ್ದಾರಿ ತೀರ್ಥಹಳ್ಳಿ ಮಾರ್ಗವಾಗಿ ವಾರಂಬಳ್ಳಿ ಯಲ್ಲಿದೆ

 


Post a Comment

Previous Post Next Post