ಆರೋಗ್ಯ ಸಲಹೆ :ಮೂರನೇ ಅಲೆ ಮತ್ತಷ್ಟು ವ್ಯಾಪಿಸುವ ಸಂಭವ? ಜನರಿಗೆ ಏನೆಲ್ಲಾ ಮುನ್ನೆಚ್ಚರಿಕೆ ಅವಶ್ಯಕತೆ ಇದೆ ಹಾಗಾದ್ರೆ??

ಕರ್ನಾಟಕದಾದ್ಯಂತ ಕೋವಿಡ್ ಮೂರನೇ ಅಲೆ ವ್ಯಾಪಾಕವಾಗಿ ಪಸರಿಸುತ್ತ ಇದ್ದು,ಇನ್ನಷ್ಟು ಸೋಂಕು ವ್ಯಾಪಿಸುವ ಮುನ್ಸೂಚನೆ ಇದ್ದು,ಮಕ್ಕಳಿಗೆ, ವೃದ್ಧರಿಗೆ ಹೆಚ್ಚಿನ ಪರಿಣಾಮ ಬೀರುವ ಭೀತಿ ಇದೆ.

ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ಸಾಮಾನ್ಯ ವೈರಸ್ ಆಗಿ ಕನ್ವರ್ಟ್ ಆಗಿದ್ದು, ಇದು ಹೆಚ್ಚು ಸಾವು -ನೋವಿಗೆ ಕಾರಣವಾಗಲ್ಲ. ಮೂರನೇ ಅಲೆಯಲ್ಲಿ, ವೈರಸ್   ಇನ್ಫೆಕ್ಷನ್  ವ್ಯಾಪಕವಾಗಿ ಹರಡಿ ಬಳಿಕ ಕಡಿಮೆಯಾಗುತ್ತೆ. ಎಂದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ರೋಗದ ಪ್ರಮುಖ ಗುಣ ಲಕ್ಷಣಗಳು 

ಕೋರೋನ ಬಾದಿತ ರೋಗಿಗಳಲ್ಲಿ ಮೊದಲನೇದಾಗಿ ಕೊವಿಡ್ ವೈರಸ್ ದೇಹ ಹೊಕ್ಕಾ ಎರಡ್ ಮೂರು ದಿನಗಳ ನಂತರ ಲಕ್ಷಣಗಳು ಸಹ ರೋಗಿಯಲ್ಲಿ ಕಾಣ ಸಿಗುತ್ತದೆ.

ವಿಪರೀತ ಜ್ವರ,ಮೈ-ಕೈ ನೋವು, ಗಂಟಲು ನೋವು, ನೆಗಡಿ, ಕೆಮ್ಮು, ಗಂಟಲು ಕೆರತ ಹಾಗೂ ಹಸಿವು ಕಡಿಮೆಯಾಗುವುದು, ಅತಿಯಾದ ಸುಸ್ತು ಕಂಡು ಬರುತ್ತದೆ. ಮಕ್ಕಳಲ್ಲಿ ಜ್ವರ, ವಾಂತಿ, ಊಟ ಸೇರದಿರುವುದು, ಅತಿ ಕೆಮ್ಮಿನಂತಹ ಲಕ್ಷಣ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.

ಮೂರನೇ ಅಲೆಯಲ್ಲಿ ಗಂಟಲು ಇನ್ ಫೆಕ್ಷನ್ ಹಾಗೂ ಕೆಮ್ಮಿನ ಲಕ್ಷಣಗಳು, ಮನೆ ಮಂದಿಗೆಲ್ಲ ಹರಡಲು ಕಾರಣವಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ಇಂತಹ ಸಾಂಕ್ರಾಮಿಕ ರೋಗಕ್ಕೆ , ನಿರ್ದಿಷ್ಟ ಔಷಧಿ ಲಭ್ಯ ಇರದೇ ಇದ್ದುದರಿಂದ, ಗುಣಲಕ್ಷಣಗಳಿಗೆ ತಕ್ಕಂತೆ, ಆಯಾ ಚಿಕಿತ್ಸಾ ಮಾರ್ಗಗಳನ್ನ ಅನುಸರಿಸಿದರಿಂದ,ಹಾಗೂ ಮನೆಮದ್ದೂಗಳಿಂದ ಹಾಗೂ ವೈದ್ಯರು ಸಲಹೆ ನೀಡಿದ, ಮಾತ್ರೆಗಳಿಂದ ಕೋವಿಡ್ ಮೊದಲನೇ ಹಂತದಲ್ಲೇ ಇರುವಾಗಲೇ ಖಾಯಿಲೆಯನ್ನ, ತಡೆಗಟ್ಟಬಹುದು.

ಪ್ರಕೃತಿ ಮೂಲಕವೇ ಹೇಗೆ ವಾಸಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಸಲಹೆ ನೀಡಿದ್ದಾರೆ.ಜ್ವರ 2-3 ದಿನಗಳಲ್ಲಿ ಕಡಿಮೆಯಾದರೂ ಕೆಮ್ಮು ಮಾತ್ರ ಬೇಗನೇ ಕಡಿಮೆಯಾಗಲ್ಲ. ಮೂಗು ಹಾಗೂ ಗಂಟಲಿನಲ್ಲಿ ಹೆಚ್ಚು ಇನ್ ಫೆಕ್ಷನ್ ಕಂಡುಬರುತ್ತದೆ. ಸೋಂಕಿತ ವ್ಯಕ್ತಿಯ ಉಸಿರಾಟ ಹಾಗೂ ಕೆಮ್ಮಿನಿಂದಲೇ ವೈರಸ್ ಕ್ಷಿಪ್ರವಾಗಿ ಹರಡುತ್ತದೆ. ಕೆಮ್ಮಿಗೆ ಅಗತ್ಯ ಔಷಧದ ಜತೆಗೆ ಬೆಚ್ಚಗಿನ ನೀರು, ಸ್ಟೀಮ್, ಕಷಾಯ ಸೇವನೆ ಮಾಡುವುದರಿಂದ ಬೇಗನೇ ಗುಣಮುಖವಾಗಬಹುದು.

ಹಣ್ಣು ಹಂಪಲು, ತರಕಾರಿಯುಕ್ತ ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಅವಶ್ಯ ಇದೆ ಕಾರಣ ವೈರಸ್ ನಮ್ಮ ದೇಹದ ಮುಖ್ಯವಾದ ರೋಗ ನಿರೋದಕ ಶಕ್ತಿ ಕುಂದಿಸಿ,ಆಯಾಸ ಮಾಡಿ ದೇಹವನ್ನ ಹಿಂಡಿ ಹಿಪ್ಪೆ ಮಾಡುವುದು ಆದ್ದರಿಂದ, ಒಮ್ಮೆಕೋವಿಡ್ ದೇಹ ಹೊಕ್ಕಿ, ಗುಣಮುಖರಾದ ಮೇಲೆ ಮತ್ತೊಮ್ಮೆ ಬರಲ್ಲ ಅನ್ನುವ ಭ್ರಮೆಯಿಂದ ನಾವು ಹೊರಗಡೆ ಬರಬೇಕಿದೆ. ಸಾಮಾಜಿಕ ಅಂತರ, ಸದಾ ಕಾಲ ಸ್ವಚ್ಛತೆ, ಮುಖಕ್ಕೆ ಮಾಸ್ಕ್, ಆರೋಗ್ಯಯುತ ಆಹಾರ ಉಪಕ್ರಮಗಳನ್ನ ಅನುಸರಿಸುವ ಮೂಲಕ ಕೋವಿಡ್ ತಡೆಗಟ್ಟು ವಿಕೆಗೆ ಇರುವುದು ಒಂದೇ ಪರಿಹಾರ. ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವ ಮೂಲಕ ಸಾವಿನ ದವಡೆಗೆ ಬರುದನ್ನ ಅಕ್ಷರಸಹ ತಪ್ಪಿಸುತ್ತದೆ, ಲಸಿಕೆಯನ್ನ ಕಡ್ಡಾಯವಾಗಿ ಹತ್ತಿರದ ಆಸ್ಪತ್ರೆಗೆ ಬೇಟಿ ನೀಡಿ 2 ಡೋಸ್ ಪಡೆಯುವುದು ಉತ್ತಮ ಎನ್ನುತ್ತಾರೆ ತಜ್ಞ ವೈದ್ಯರು.

Post a Comment

Previous Post Next Post