ಹೊಸನಗರ :ಬಿದನೂರು ಹಾಗೂ ಕೆಳದಿ ಶಿವಪ್ಪ ನಾಯಕರ ಇತಿಹಾಸ ಕುರಿತ ಸುಧೀಂದ್ರ ಭಂಡಾರ್ಕರ್ ಅವರ ಚೊಚ್ಚಲ ಕೃತಿ ಬಿಡುಗಡೆ!!

ಹೊಸನಗರ : ಪ್ರತಿವರ್ಷದಂತೆ  ಮಕರ ಸಂಕ್ರಮಣ ಪ್ರಯುಕ್ತ ಸರ್ವಜನಾಂಗ ಸಮ್ಮಿಲನ ಕಾರ್ಯಕ್ರಮ ತಾಲೂಕಿನ ಮೂಲೆಗದ್ದೆ ಸದಾನಂದ ಶಿವಯೋಗಶ್ರಮದಲ್ಲಿ  ಅತ್ಯಂತ ಸರಳವಾಗಿ ಜರುಗಿದ್ದು.ಹಾಗೂ ಕಾರ್ಯಕ್ರಮವನ್ನ  ಆನಂದಪುರ  ಶ್ರೀ ಮುರುಘಮಠದ ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು,  ಉದ್ಘಾಟನೆ ಮಾಡಿದರು.

ಕಾರ್ಯಕ್ರಮದ ನಂತರ ವಿಶೇಷವಾಗಿ ಹೊಸನಗರ ತಾಲೂಕಿನ ಪ್ರಸಿದ್ಧ ಛಾಯಾಚಿತ್ರಕಾರ, ಲೇಖಕರು ಆದ ಸುಧೀಂದ್ರ ಭಂಡಾರ್ಕರ್ ಅವರ ಚೊಚ್ಚಲ ಕೃತಿಯಾದ ಸಶೇಷ ಬಿಡುಗಡೆಗೊಳಿಸಿದ ಶ್ರೀಗಳು ಬಿದನೂರು ಕುರಿತ ಐತಿಹಾಸಿಕ ಕೃತಿಯಾಗಿದ್ದು,ಮರೆಮಾಚಿದ ಸಾಕಷ್ಟು ವಿಷಯಗಳನ್ನ,ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು...

 ಕೆಳದಿ ಸಾಮ್ರಾಜ್ಯ  ಹಾಗೂ ಬಿದನೂರು ನಾಡಿನ ಅತ್ಯಂತ ಶ್ರೀಮಂತ ಸಾಮ್ರಾಜ್ಯವಾಗಿದ್ದು,ಶಿವಪ್ಪ ನಾಯಕರ ಕೊಡುಗೆ ಅಪಾರವಾದುದು.

ಬಿದನೂರಿನ್ನ 265 ವರ್ಷಗಳು ಆಳಿದ , ವಿಸ್ತಾರವಾದ  ಸಾಮ್ರಾಜ್ಯದ ಮಹತ್ತರ ಅಧ್ಯಾಯ .ಆದರೆ ಕರ್ನಾಟಕದ ಇತಿಹಾಸದಲ್ಲಿ ಇದನ್ನು ಗಣನೆಗೇ ತೆಗೆದುಕೊಂಡಿಲ್ಲ .ಬಿದನೂರು ಕ್ರಾಂತಿ , ಸತಿಸಹಗಮನ , ಶೈವ ಯುವಕರನ್ನು ಆರಿಸಿ ಆರಿಸಿ ಕೊಂದಿರುವುದು ಮುಂತಾದವು ಸುದ್ದಿಯೇ ಆಗಲಿಲ್ಲ .ಇಂತಹ ಹತ್ತು ಹಲವು ವಿಚಾರಗಳು ಎಲ್ಲೂ ಉಲ್ಲೇಖಗೊಳ್ಳದ ಘಟನೆಗಳು,ವಿಚಾರಗಳು ಈ ಕಾದಂಬರಿಯಲ್ಲಿ ಇವೆ .ಇದು ಕೆಳದಿ ಇತಿಹಾಸದ ಒಂದು ಅಣುವಿನಷ್ಟು ಮಾತ್ರ .ಆದರೆ ಪುರಾಣ, ಆಚರಣೆಗಳು , ಚೌಡಿ , ನೋಣಿ ,ಕೃಷಿ ಪದ್ದತಿಗಳಂತಹ ಹಲವು ವಿಚಾರಗಳ ವಿವರ ಬೇರೆಯೇ ರೀತಿಯ ಬರವಣಿಗೆಯಲ್ಲಿ ಇದೆ .ಇದೇ...." ಸಶೇಷ " ಐತಿಹಾಸಿಕ ಕಾದಂಬರಿ .ಎನ್ನುತ್ತಾರೆ ಲೇಖಕರು. ✍️✍️✍️


ಕಾರ್ಯಕ್ರಮದಲ್ಲಿ ಶ್ರೀ ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಲೇಖಕರಾದ ಸುಧೀಂದ್ರ ಬಂಡಾರವನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಡೆ ಮಠದ ಶ್ರೀಗಳು, ಉಪಸ್ಥಿತರಿದ್ದರು


Post a Comment

Previous Post Next Post