ಶಿವಮೊಗ್ಗ :ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಗ್ರಾಮ‌ಸ್ಥರು.

ಶಿವಮೊಗ್ಗ :ಶಿವಮೊಗ್ಗ ತಾಲ್ಲೂಕಿನ ತೂಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಡನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಂದು ಹೊಸ ರೂಪ ದೊರೆತಿದೆ.

 ಹೌದು ಜಿಲ್ಲೆಯ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಗ್ರಾಮ‌ಸ್ಥರು.

 ಜಿಲ್ಲಾ ಪಂಚಾಯತ್  ಉಪ ಕಾರ್ಯದರ್ಶಿ ಟಿ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ  ಚೊಡನಾಳ ಗ್ರಾಮಸ್ಥರು  ಹಾಗೂ  ತೂಪ್ಪೂರು ಗ್ರಾಮ ಪಂಚಾಯಿತಿ   ಸಹಕಾರದೊಂದಿಗೆ ಈ ಮಾದರಿ ಕಾರ್ಯ ನಡೆದಿದೆ.

ಶಾಲಾ ಆವರಣದ ಸುತ್ತ ಮುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಸ್ಪಚ್ಚಗೊಳಿಸಿದರು, ಗೋಡೆಗಳಿಗೆ ಸುಣ್ಣಬಣ್ಣ ಮಾಡಲಾಯಿತು, ಆವರಣದಲ್ಲಿ ಗಿಡಗಳನ್ನು ನೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ದತ್ತು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಶಾಲೆಯ ಹಳೇ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

Previous Post Next Post