ಹೊಸನಗರ : ಕಚ್ಚಿಗೆಬೈಲ್, ಸಂಪಳ್ಳಿ ಗ್ರಾಮಸ್ಥರಿಂದ ಪುನೀತ್ ಪುತ್ಥಳಿ ಅನಾವರಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಿದ್ಧತೆ

ಕರುನಾಡು ಕಂಡ ಅದ್ಭುತ ವ್ಯಕ್ತಿತ್ವ, ರಾಜ್ಯದ ಮೂಲೆ ಮೂಲೆಗಳಲ್ಲೂ ಅಸಂಖ್ಯಾತ ಅಭಿಮಾನಿಗಳ ಮನಸಲ್ಲಿ ಪ್ರೀತಿಯ ರಾಜಕುಮಾರನಾಗಿ, ದಾನ ಧರ್ಮ, ಸಮಾಜಮುಖಿ ಸೇವೆ ಕಲಾಸೇವೆಗಳಲ್ಲಿಯೂ ಅಭೂತಪೂರ್ವ ಚರಿತ್ರೆ ಸೃಷ್ಟಿಸಿ ತಂದೆಯ ಮಾರ್ಗದಲ್ಲಿ ನೆಡೆದು, ನಟನಾಗಿ ಮಾತ್ರವಲ್ಲದೆ ತಮ್ಮ ನೆಡೆ ನುಡಿ ಸದ್ಗುಣವಂತನಾಗಿ,ಕರುನಾಡ ಮನೆಯ ಅಪ್ಪುವಾಗಿ, ಮನೆಯ ಸದಸ್ಯನಂತೆ ಇದ್ದ ಅಪ್ಪು ಅಕಾಲಿಕ ನಿಧನ, ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಹೌದು ನಮ್ಮೆಲರ ಯುವರತ್ನ ಪುನೀತ್ ರಾಜಕುಮಾರ ಎಂದು ಕನ್ನಡಿಗರ ಮನಸಿನಲ್ಲಿ ರಾರಾಜಿಸುವ ರಾಜಕುಮಾರ....

ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುನ್ನತ ಗೌರವ ಕರ್ನಾಟಕ ರತ್ನ ಘೋಷಣೆ ಮಾಡಿದ್ದೂ ಹಾಗೂ ರಾಜ್ಯದ ನಾನಾ ಕಡೆಗೆ ಪುನೀತ್ ಹೆಸರನ್ನ ಗೌರವಾರ್ಥವಾಗಿ ಕರುನಾಡ ಜನತೆ ನಾಮಕರಣ ಮಾಡಿ ಅಭಿಮಾನವನ್ನ ಮೆರೆದಿದ್ದಾರೆ.

ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರ ವರೆಗೂ ಇಷ್ಟವಾಗುತ್ತಿದ್ದ ನಟ ಪುನೀತ್ ರಾಜಕುಮಾರ, ಸಾಕಷ್ಟು ತೆರೆಮರೆಯಲಿ ಯಾರ ಗೋಜಿಗೂ ಹೋಗದೆ, ಪ್ರಚಾರ ಬಯಸಿದೆ ಮಾಡಿದ ಸೇವಾ ಕಾರ್ಯಗಳು ಜನರ ಮನಸಿನಲ್ಲಿ ಇಂದು ಅವರನ್ನ  ಅಜರಾಮರವಾಗಿಸಿದೆ,ಸದಾ ನಗು ನಗುತ್ತಾ, ಕನ್ನಡ ಚಿತ್ರೋದ್ಯಮದಲ್ಲಿ ಹೊಸಬರರನ್ನ ಪರಿಚಯಿಸುವ,ಬಗೆ, ಒಂದಿಲ್ಲೊಂದು ಚಿತ್ರಗಳಲ್ಲಿ ಮಹತ್ವದ ಸಂದೇಶ ಸಾರುವ ಚಿತ್ರಗಳ ಮುಖಾಂತರ ಕನ್ನಡ ಸಿನಿ ರಸಿಕರಿಗೆ, ರಸದೌತಣ ನೀಡುತ್ತಾ ತಮ್ಮ ಕಂಚಿನ ಕಂಠದಲ್ಲಿ ಮೂಡಿದ ಹಾಡಿನ ಸಾಲುಗಳು ಎಂದೆಂದಿಗೂ ಕನ್ನಡಿಗರ ಅಂತರಾಳದಲ್ಲಿ ಅಚ್ಚೋತ್ತಿದೆ.....

 ರಾಜ್ಯದ ಬಹುತೇಕ ಕಡೆಗೆ  ಪುನೀತ್ ಪುತ್ಥಳಿ ಅನಾವರಣವಾಗಿದ್ದು, ಇದಕ್ಕೆ ಹೊಂದಿಕೊಂಡಂತೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಕಚ್ಚಿಗೆಬೈಲು,ಮೇಲಿನ ಸಂಪಳ್ಳಿ ಗ್ರಾಮಸ್ಥರ ಅಭಿಮಾನದ  ಮೂರ್ತಿಯಾಗಿ ಪುನೀತ್ ಪುತ್ತಳಿ ಸಂಪಳ್ಳಿ ವೃತದಲ್ಲಿ ಅನಾವರಣಗೊಳಿಸಲು ಸಕಲ ಸಿದ್ಧತೆ ನೆಡೆದಿದೆ.ದಿನಾಂಕ 30 ಗುರುವಾರದಂದು, ಪುನೀತ್  ಪುತ್ಥಳಿ ಹಾಗೂ ಪುಷ್ಪ ನಮನ ಕಾರ್ಯಕ್ರಮವನ್ನ ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ನೆರೆವೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ...ಪ್ರತಿಮೆ ಅನಾವರಣ ಹಾಗೂ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಲಿದ್ದು, ಉದ್ಘಾಟನೆಯನ್ನ ಮೂಲೆಗದ್ದೆ ಮಠದ ಶ್ರೀ ಮ.ನಿ ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಗಳು ನೆರವೇರಿಸಲಿದ್ದು ಹಾಗೂ ಧ್ವಜಾರೋಹಣವನ್ನ ಸಂಪಳ್ಳಿ ಕ್ಷೇತ್ರದ ಪಂಚಾಯತ್ ಸದಸ್ಯರಾದ ಅವಿನಾಶ್ ಜೆ ಸಕಲಾತಿ ಇವರು ನೆರವೇರಿಸಲಿದ್ದಾರೆ , ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ..


Post a Comment

Previous Post Next Post