ಚಿಕ್ಕಮಗಳೂರು : ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕನ್ನಡದ ಪ್ರಖ್ಯಾತ ಬರಹಗಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪತ್ನಿ ಬರಹಗಾರ್ತಿ ರಾಜೇಶ್ವರಿ ತೇಜಸ್ವಿ ನಿಧನ!!!

ಚಿಕ್ಕ ಮಗಳೂರು :  ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕನ್ನಡದ ಪ್ರಖ್ಯಾತ ಬರಹಗಾರ, ಛಾಯಾಗ್ರಾಹಕರು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿಯವರು (84) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತೇಜಸ್ವಿಯವರ ನಿಧನದ ಬಳಿಕ ರಾಜೇಶ್ವರಿಯವರು ಚಿಕ್ಕಮಗಳೂರು ಮೂಡಿಗೆರೆಯಲ್ಲೇ ನೆಲೆಸಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಮಗಳ ಮನೆಗೆ ಬಂದಿದ್ದರು.ಇಬ್ಬರು ಪುತ್ರಿಯರು ಸಾಫ್ಟ್ ವೇರ್ ಎಂಜಿನೀಯರ್ ಆಗಿ ಬೆಂಗಳೂರು ನಲ್ಲಿ ನೆಲೆಸಿದ್ದಾರೆ.

ರಾಜೇಶ್ವರಿ ತೇಜಸ್ವಿ- 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ  ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು.

ಶಿಕ್ಷಣ :ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ. ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಪ್ರವೇಶ ಪಡೆದರು.

ಮೈಸೂರಿನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯ ಪ್ರೇಮವಾಗಿ . ಕುವೆಂಪು ಅವರ ಆಶಯದಂತೆ ತೇಜಸ್ವಿ ಹಾಗೂ ರಾಜೇಶ್ವರಿ ಅವರ ವಿವಾಹ ಮಂತ್ರಮಾಂಗಲ್ಯ ಪ್ರಕಾರ 1966ರಲ್ಲಿ ಆಯಿತು.

ಕೃತಿಗಳು :‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ.ಈಗ ಅದು ಬೆರಗಿನ ಐದನೇ ಮುದ್ರಣ ಕಂಡಿದೆ.. ‘ನಮ್ಮ ಮನೆಗೂ ಬಂದರು ಗಾಂಧೀಜಿ’ಇವರ ಎರಡನೆಯ ಪುಸ್ತಕ.

ರಾಜೇವಶ್ವರಿ ತೇಜಸ್ವಿ  ಅವರ ನಿಧನಕ್ಕೆ  ಅಪಾರ ಕನ್ನಡ ಸಾಹಿತ್ಯ ಪ್ರೇಮಿಗಳು, ಚಿಕ್ಕ ಮಗಳೂರು, ಶಿವಮೊಗ್ಗ ಜನತೆ, ಹಾಗೂ ಸಾಹಿತ್ಯ ಲೋಕದ  ಗಣ್ಯರು  ಸಂತಾಪವನ್ನ ಸೂಚಿಸಿದ್ದಾರೆ.....

ಬೆಂಗಳೂರಿನ ಪುತ್ರಿಯ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೂಡಿಗೆರೆಯಲ್ಲಿ ಅಂತಿಮ ಸಂಸ್ಕಾರದ ಯಾವುದೇ ವಿಧಿವಿಧಾನ ಇರುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Post a Comment

Previous Post Next Post