ಮಾರುತಿಪುರ : ಜನರ ಅಭೂತಪೂರ್ವ ಸ್ಪಂದನೆ ಬಡ ವಿದ್ಯಾರ್ಥಿ ಆರೋಗ್ಯ ಸುಧಾರಣೆ ಜೊತೆಗೆ ಆರ್ಥಿಕ ಬೆಂಬಲ ನೀಡಿ ಚೆಕ್ ಹಸ್ತಾಂತರ...

ಹೊಸನಗರ : ಜನರ ಅಭೂತಪೂರ್ವ  ಸ್ಪಂದನೆ ಬಡ ವಿದ್ಯಾರ್ಥಿ ಆರೋಗ್ಯ ಸುಧಾರಣೆ ಜೊತೆಗೆ ಆರ್ಥಿಕ ಬೆಂಬಲ..!!ಚೆಕ್ ಹಸ್ತಾಂತರ

"ಹನಿ ಹನಿ ಗೂಡಿದರೆ ಹಳ್ಳ ಎಂಬ ಮಾತು ತಾಲೂಕಿನಲ್ಲಿ ಸಾಕರವಾಗಿದ್ದು " ಅಕ್ಷರಸಹ ಸತ್ಯವಾಗಿದ್ದು ತಿಂಗಳ ಹಿಂದೆ ಹೊಸನಗರ ತಾಲೂಕು ಮಾರುತಿಪುರ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಸೊಪ್ಪಿನಮಲ್ಲಿ ಊರಿನ ಕೌಶಿಕ್ ಅಚಾನಕ್ಕಾಗಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಮೆದುಳಿಗೆ ಸಂಬಂದಿತ ತೀವ್ರ ಗಾಯವಾಗಿ ಜಿಲ್ಲಾ ಆಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಲಾಯ್ತು,ನಂತರ,ವೈದ್ಯರ ಸಲಹೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾತಿ ಮಾಡಿದರೂ ತಂದೆಯ ಆಧಾರವಿಲ್ಲದ, ಒಬ್ಬಂಟಿಯಾದ  ತಾಯಿಯ (ವಿಶಾಲ ) ಅಳಲಿಗೆ,ಆದಾಯವಿಲ್ಲದ ಕುಟುಂಬ ಕಂಗಲಾಗಿ, ಕಣ್ಣೀರಲ್ಲಿ ಕೈ ತೊಳೆಯುವ ಸಂಕಷ್ಟಕ್ಕೆ ಬೆಂಗಾವಲಾಗಿ ನಿಂತಿದ್ದು ಕಾರ್ತಿಕ್ ಗೌಡ,ಮಹೇಶ್ ಬಾನಿಗಾ, ರೋಹಿತ್ ಗೌಡ ತಂಡದ ಸದಸ್ಯರು.ಸಾಮಾಜಿಕ ಕಾಳಜಿಯೊಂದಿಗೆ ಈಗಾಗಲೇ ಸಾಕಷ್ಟು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿರುವ ಯುವಕರ ಒಂದು ಕರೆಗೆ ಸಹೃದಯಿ ದಾನಿಗಳ ಧನ ಸಹಾಯ, ಅಭೂತಪೂರ್ವ ಬೆಂಬಲ ಸಹಕಾರ ಇಂದು ವಿದ್ಯಾರ್ಥಿ ಬಾಳು ಹಸನಾಗಿದೆ....!!

ಹೌದು ವಿದ್ಯಾರ್ಥಿ ಸಹಾಯ ಕೋರಿ ವಿಸ್ತೃತ ವರದಿ ಪ್ರಕಟಿಸಿದ್ದೆವು ಇಂದು ಮಹೇಶ್ ಬಾನಿಗಾ ಮಾತನಾಡಿ ಡಿಜಿಟಲ್ ಮಾಧ್ಯಮದಲ್ಲಿ ಬಂದ ಎಲ್ಲಹಣ ಕ್ರೂಡಿಕರಿಸಿ ಸುಮಾರು  2 ಲಕ್ಷಕ್ಕೂ ಅಧಿಕ ಹಣ ಸಂಗ್ರಹಣೆ ಆಗಿದ್ದು ಚಿಕಿತ್ಸೆವೆಚ್ಚ ಭರಿಸಿದರ ಜೊತೆ ಜೊತೆಗೆ ಇಂದು  ಉಳಿದ 145000 ರೂಪಾಯಿಗಳ ಚೆಕ್ ಅನ್ನು ಯುವಕರ,ಸ್ಥಳೀಯರ ಜೊತೆಗೆ ವಿದ್ಯಾರ್ಥಿ ತಾಯಿ ವಿಶಾಲ ಅವರಿಗೆ ಹಸ್ತಾಂತರ ಮಾಡಿದರು.

ನೀರಿಕ್ಷೆಗೂ ಮೀರಿ  ಧನ ಸಹಾಯ ಮಾಡಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಹಾಗೂ ಬಡ ಕುಟುಂಬಕ್ಕೆ ತಾವುಗಳು ತೋರಿದ ಪ್ರೀತಿ ಬೆಂಬಲ ಸಹಕಾರಕ್ಕೆ ಮಹೇಶ್ ಬಾನಿಗಾ ಅವರು ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ವಿದ್ಯಾರ್ಥಿಯ ತಾಯಿ ವಿಶಾಲ ಅವರು ಸಹ ತನ್ನ ಮಗನ ಆರೋಗ್ಯ ಸುಧಾರಣೆಗೆ ಹರಸಿ ಹಾರೈಸಿದ, ಸಹಕಾರ ಮಾಡಿದ, ದಾನಿಗಳಿಗೂ ಹಾಗೂ ಯುವಕರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಹೇಳಿದರು.

ಇದೆ ಸಂದರ್ಭದಲ್ಲಿ ಮಹೇಶ್ ಬನಿಗಾ,ರೋಹಿತ್ ಗೌಡ ಕಾರ್ತಿಕ್ ಗೌಡ ಮಂಜುನಾಥ್ ಪುರಪ್ಪೆಮನೆ, ಮಂಜುನಾಥ್ ಬಾನಿಗಾ ಉಮೇಶ್ ಸೊಪ್ಪಿನಮಲ್ಲಿ, ಪ್ರಕಾಶ್ ನೀರೇರಿ, ಭದ್ರಪ್ಪ ನೀರೇರಿ, ಕೇಶವ ಮೂರ್ತಿ ನೀರೇರಿ, ಸಹ ಜೊತೆಗೆ ಇದ್ದು ಸಹಕಾರ ನೀಡಿದರು..





Post a Comment

Previous Post Next Post