"ಹನಿ ಹನಿ ಗೂಡಿದರೆ ಹಳ್ಳ ಎಂಬ ಮಾತು ಇಂದು ನಮ್ಮ ಊರಿನಲ್ಲಿ ಸಾಕರವಾಗಿದ್ದು " ಅಕ್ಷರಸಹ ಸತ್ಯವಾಗಿದ್ದು ವಾರದ ಹಿಂದೆ ಹೊಸನಗರ ತಾಲೂಕು ಮಾರುತಿಪುರ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಕೌಶಿಕ್ ಅಚಾನಕ್ಕಾಗಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಮೆದುಳಿಗೆ ಸಂಬಂದಿತ ತೀವ್ರ ಗಾಯವಾಗಿ ಜಿಲ್ಲಾ ಆಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಲಾಯ್ತು,ನಂತರ,ವೈದ್ಯರ ಸಲಹೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾತಿ ಮಾಡಿದರೂ ತಂದೆಯ ಆಧಾರವಿಲ್ಲದ, ಒಬ್ಬಂಟಿಯಾದ ತಾಯಿಯ ಅಳಲಿಗೆ,ಆದಾಯವಿಲ್ಲದ ಕುಟುಂಬ ಕಂಗಲಾಗಿ, ಕಣ್ಣೀರಲ್ಲಿ ಕೈ ತೊಳೆಯುವ ಸಂಕಷ್ಟಕ್ಕೆ ಬೆಂಗಾವಲಾಗಿ ನಿಂತಿದ್ದು ಕಾರ್ತಿಕ್ ಗೌಡ,ಮಹೇಶ್ ಬಾನಿಗಾ, ರೋಹಿತ್ ಗೌಡ ತಂಡದ ಸದಸ್ಯರು ಹೌದು ಈಗಾಗಲೇ ಸಾಕಷ್ಟು ಸಾಮಾಜಿಕಮುಖಿ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡ ಈ ಉತ್ಸಾಹಿಯುವಕರ ತಂಡ ಮಲೆನಾಡಲ್ಲಿ ಚಿರಪರಿಚಿತ ✍️✍️.
ಅವರ ಒಂದು ಕರೆಗೆ ಓಗೊಟ್ಟು, ಸುಮಾರು 2ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಒಗ್ಗೂಡಿಸಿ ದಾನಿಗಳ ನೆರವಿನಿಂದ ಸಂಗ್ರಹ ಮಾಡಿ, ಚಿಕಿತ್ಸೆಗೆ ಸಹಕಾರಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ವಾದ -ವಿವಾದ ಕಲಹ ಹೊ ತ್ತಿಸುವ ವಿವಾದಗಳ ಕೂಪವಾಗಿರುವ ಇಂದು ಸಾಮಾಜಿಕ ಮಾಧ್ಯಮವನ್ನ ಸಮಾಜಮುಖಿಯಾಗಿಯೂ ಬಳಸಬಹುದು ಎಂದು. ಹಾಗೂ ಫೋಟೋ ಕೇಂದ್ರೀತ ವ್ಯವಸ್ಥೆಗೆ ಅಂಟಿಕೊಂಡ ಕೆಲವರ ಮನಸ್ಥಿತಿಗೆ, "ಎಲೆ ಮರೆಯ ಕಾಯಿಯಂತೆ,ಕೊಡುಗೈ ದಾನಿಗಳ ಭಂಢಾರವೆ ಇದೆ " ಎಂದು ಇಂದು ತೋರಿಸಿಕೊಟ್ಟಿದ್ದಾರೆ.!!
ನೀರಿಕ್ಷೆಗೂ ಮೀರಿ,ಹೌದು 50 ರೂಪಾಯಿಯಿಂದ ವಯುಕ್ತಿಕ 5000 ವರೆಗೂ ಧನ ಸಹಾಯ ಮಾಡಿ ಹೃದಯವಂತಿಕೆಯನ್ನ ಮತ್ತೊಮ್ಮೆ ತೆರೆ ಮರೆಯಲ್ಲಿ ತೋರಿಸಿಕೊಟ್ಟಿದ್ದಾರೆ.ಹಾಗೂ ಸೂಪರ್ ಸೆವೆನ್ ಬ್ರದರ್ ಗುಬ್ಬಿಗ ತಾವು ಗೆದ್ದ ಟ್ರೋಫಿಯ ಸಂಪೂರ್ಣ ಮೊತ್ತವನ್ನು ಬಡ ವಿದ್ಯಾರ್ಥಿ ಬದುಕನ್ನ ಹಸನು ಮಾಡಲು ವಿನಿಯೋಗಿಸಿದ್ದು, ಯುವ ಸಮೂಹಕ್ಕೆ ಒಂದು ಉತ್ತಮ ಮಾದರಿಯಾಗಿ, ಎಲ್ಲರ ಪ್ರಶಂಸನೀಯಕ್ಕೆ ಪಾತ್ರವಾಗಿದೆ...
ಎಲ್ಲರ ಸಹಕಾರದಿಂದ ಇಂದು ವಿದ್ಯಾರ್ಥಿ ಕೌಶಿಕ್ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎಲ್ಲರ ಹಾರೈಕೆ ಆಶೀರ್ವಾದ ದಿಂದ ಮನೆಗೆ ಮರಳಲು ಸಿದ್ದಾಗಿದ್ದಾನೆ.
ಉತ್ಸಾಹಿ ಯುವಕರ ತಂಡದಿಂದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಆದ ಕಲಗೋಡ ರತ್ನಾಕರ್ ಅವರು ಸಹ ವಿದ್ಯಾರ್ಥಿಯಾ ಆರೋಗ್ಯ ಚೇತರಿಕೆ ಬಗ್ಗೆ ಆಗಾಗ್ಗೆ ವಿಚಾರಿಸಿ ನೀಡಿದ ಸಹಕಾರಕ್ಕೆ ಹಾಗೂ ಕೌಶಿಕ್ ಚಿಕಿತ್ಸೆ ಗೆ ಸಹಾಯ ಹಸ್ತಚಾಚಿದ ಎಲ್ಲರಿಗೂ ಮತ್ತೊಮ್ಮೆ ಹೃದಯಸ್ಪರ್ಶಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.