ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು.ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆಯು 1956 ರ ಹಿಂದಿನದು. ಪಂ. ಜವಾಹರಲಾಲ್ ನೆಹರು, ಭಾರತವು ಮಕ್ಕಳ ದಿನವನ್ನು ನವೆಂಬರ್ 20 ರಂದು ಆಚರಿಸಿತು. ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಅವರ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಮಕ್ಕಳೊಂದಿಗೆ ಚಾಚಾ ನೆಹರು ಎಂದು ಬಹಳ ಜನಪ್ರಿಯರಾಗಿದ್ದರಿಂದ ಇದನ್ನು ಮಾಡಲಾಯಿತು, ಆದ್ದರಿಂದ, ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ವಿದಾಯ ಹೇಳಲು ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ಶಿಕ್ಷಕರು ಗಣಪತಿ ಕೆ ಮಕ್ಕಳೊಂದಿಗೆ ಅನಿಸಿಕೆ ಹಂಚಿಕೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನ್ಯ ಆರ್ ಹತ್ತನೇ ತರಗತಿ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ದೀಪಿಕಾ,ಸುದೀಪ್,ದೀಕ್ಷೀತಾ,
ಪ್ರತೀಕ್ಷಾ,ಯಶವಂತ, ತರುಣ್,ಪುಷ್ಫ,ಸ್ವಾತಿ ಶಣೈ,ತನುಶ್ರೀ,ನಿಖಿತ,ಹರ್ಷಿತ,ಶ್ರವ್ಯ,ಸ್ರಜನ್,ಕೌಶಿಕ್ ಭಾಗವಹಿಸಿದ್ದರು.ನಂತರ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಪುಷ್ಪಾ ಬಡ್ತಿ ಮುಖ್ಯ ಶಿಕ್ಷಕರಾದ ಟೀಕಪ್ಪ ಹಾಗೂ ಕೆ ಪಿ ಎಸ್ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವರದಿ : ಪವನ್ ಕುಮಾರ್ ಕಠಾರೆ.