ರಿಪ್ಪನ್ ಪೇಟೆ : ಪಟ್ಟಣದಲ್ಲಿ ನೂತನವಾಗಿ ಕಸ್ತೂರಿ ಕನ್ನಡ ಸಂಘ ಅಸ್ತಿತ್ವಕ್ಕೆ ಬಂದಿದ್ದು ಸೋಮವಾರ ಅದರ ಪದಾದಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು.
ಪಟ್ಟಣದಲ್ಲಿ ಸೋಮವಾರ ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗಕ್ಕೆ ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು.
ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗಕ್ಕೆ ಅಧ್ಯಕ್ಷರಾಗಿ ಆರ್ ಎ ಚಾಬುಸಾಬ್ , ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಫ಼್ಯಾನ್ಸಿ, ಗೌರವಾಧ್ಯಕ್ಷರಾಗಿ ಟಿ ಆರ್ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಂಎಂ ಪರಮೇಶ್,ರಾಜು ಗೌಡ ದೂನ,ಕೆರೆಹಳ್ಳಿ ರವೀಂದ್ರ ರವರು ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಧರ್, ಆಸೀಫ಼್ ಭಾಷಾ ಸಾಬ್ ,ಶೀಲಾ ಆರ್ ಡಿ ,ಉಲ್ಲಾಸ್ ಎಂ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ಅರ್ ಎ ಚಾಬುಸಾಬ್ ಇದೇ ತಿಂಗಳ 27 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‍ಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎಲ್ಲಾ ಕನ್ನಡ ಪ್ರೇಮಿಗಳು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ನೂತನ ಸಂಘ ಯಾವ ಸಂಘಕ್ಕೂ ಪರ್ಯಾಯವಲ್ಲ ಕನ್ನಡದ ಉಳಿವಿಗಾಗಿ ಈ ನಿರ್ಧಾರ ಕೈಗೊಳ್ಳಲಾಯಿತು.ಕಳೆದ ಹಲವಾರು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿನಲ್ಲಿಯೇ ನಡೆಸಲಾಗುತ್ತಿದೆ ಈ ವರ್ಷವೂ ನವೆಂಬರ್ ತಿಂಗಳಿನಲ್ಲಿಯೇ ನಡೆಸುವ ಸದುದ್ದೇಶದಿಂದ ಈ ಕಸ್ತೂರಿ ಕನ್ನಡ ಸಂಘ ಚಾಲನೆಗೆ ಬಂದಿದೆ ಎಂದರು.
ಹೊಸನಗರ ತಾಲೂಕ್ ಜನಪರ ವೇದಿಕೆ ಅಧ್ಯಕ್ಷರಾದ ಆರ್ ಎನ್ ಮಂಜುನಾಥ್ ಮಾತನಾಡಿ ಕನ್ನಡ ರಾಜ್ಯೋತ್ಸವವು ನವೆಂಬರ್ ತಿಂಗಳಿನಲ್ಲಿಯೇ ಆಚರಿಸುವುದು ರೂಡಿ ಅದು ಬಿಟ್ಟು ಡಿಸೆಂಬರ್ ತಿಂಗಳಿನಲ್ಲಿ ಆಚರಿಸುವುದು ಸಮಂಜಸವಲ್ಲ ಹಾಗಾಗಿ ನೂತನವಾಗಿ ಕಸ್ತೂರಿ ಕನ್ನಡ ಸಂಘ ಅಸ್ತಿತ್ವಕ್ಕೆ ಬಂದಿದೆ.ಹಿಂದಿನ ಸಂಘಗಳು ಕುಂಟು ನೆಪದಿಂದ ನವೆಂಬರ್ ತಿಂಗಳಿನಲ್ಲಿ
ರಾಜ್ಯೋತ್ಸವ ಕಾರ್ಯಕ್ರಮ ನಡೆಸಲು ಹಿಂದೇಟು ಹಾಕಿದ್ದರಿಂದ ನೂತನ ಕಸ್ತೂರಿ ಕನ್ನಡ ಸಂಘ ಚಾಲನೆಯಾಗಿದೆ,ಇದೇ ತಿಂಗಳ 27 ರಂದು ಅದ್ದೂರಿಯಾಗಿ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪುನೀತ್ ರಾಜ್‍ಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ನಡೆಸಲಾಗುವುದು ಎಲ್ಲಾ ಕನ್ನಡ ಪ್ರೇಮಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.