ಹೊಸನಗರ :ಕಸ್ತೂರಿ ಕನ್ನಡ ಸಂಘ, ಪುನೀತ್ ರಾಜಕುಮಾರ ಅಭಿಮಾನಿ ಬಳಗ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ!!

" ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ರಿಪ್ಪನಪೇಟೆ ಹೊಸನಗರ "

ಮೊದಲ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂದು ಬೆಳಗ್ಗೆ ನಡೆದ ಅಲಂಕೃತ  ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯನ್ನು ರಿಪ್ಪನಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಂಜುಳಾ ಕೇತಾರ್ಜಿ ರಾವ್ ಚಾಲನೆ ನೀಡಿದರು. ನಂತರ  ಕನ್ನಡ ಕಸ್ತೂರಿ ಸಂಘದ ಅಧ್ಯಕ್ಷರಾದ ಬಾಬುಸಾಬ್ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು,ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಹಾಗೂ ಚಟುವಟಿಕೆ ಸ್ಪರ್ಧೆಗಳು ಏರ್ಪಡಿಸಲಾಗಿತ್ತು.

ತದನಂತರ  ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆದ ಪ್ರಥಮ ವರ್ಷದ  ಕಾರ್ಯಕ್ರಮದ ಉದ್ಘಾಟನಾ  ಸಮಾರಂಭ ಆಯೋಜನೆ ಮಾಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಹಾಗೂ ವೈಜ್ಞಾನಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಪದ್ಮಶ್ರೀ ಅಕ್ಷರ ಸಂತ ಶ್ರೀಯುತ ಹರೇಕಳ ಹಾಜಬ್ಬ, ಹಾಗೂ ಉಪನ್ಯಾಸಕ ಡಾ ಜೆ.ಜಿ ಮಂಜುನಾಥ್ ಅವರುಗಳಿಗೆ ನಾಗರಿಕ ಸನ್ಮಾನ ಮಾಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಎಲ್ಲರ ಗಮನಸೆಳೆದ್ದಿದ್ದು ವಿಶೇಷವಾಗಿತ್ತು.

ಪದ್ಮಶ್ರೀ ಪುರಸ್ಕೃತ ಹಾಜಬ್ಬ ನವರು  ಅತ್ಯಂತ ಸಾಧಾರಣ ಆರ್ಥಿಕ ಸ್ಥಿತಿಯ ಕುಟುಂಬದಲ್ಲಿ ಜನಿಸಿದರು, ಅವರು ಹಣ ಸಂಪಾದಿಸಲು ಮತ್ತು ಕುಟುಂಬದ ಖರ್ಚಿಗೆ ಕೊಡುಗೆ ನೀಡುವ ಸಲುವಾಗಿ ಚಿಕ್ಕ ವಯಸ್ಸಿನಲ್ಲೇ ಶಾಲೆಯನ್ನು ತೊರೆದು, ಕಿತ್ತಲೆ ಹಣ್ಣಿನ ವ್ಯಾಪಾರವನ್ನು ಶುರುಮಾಡಿದರು, ಶಿಕ್ಷಣದ ಪಡೆಯಬೇಕಾದ ಮಹದಾಸೆಗೆ ಅವರ ಆರ್ಥಿಕ ಪರಿಸ್ಥಿತಿ ತಣ್ಣೀರೆರಚಿತು, ಕಿತ್ತಲೆ ಹಣ್ಣಿನ ಮಾರಾಟದಿಂದ ಬಂದ ಸಣ್ಣ ಉಳಿತಾಯದಿಂದ ತನ್ನ ಮಹಾದಾಸೆಯನ್ನು ಈಡೇರಿಸು ಸಲುವಾಗಿ, ತಾನು ಅನಕ್ಷರತೆಯಿಂದ ಬಳಲಿದ ನೋವನ್ನು ನಿವಾರಿಸಲು ತನ್ನ ಹುಟ್ಟೂರು ಹರೇಕಳ ದಲ್ಲಿ ಶಾಲೆ ನಿರ್ಮಾಣಕ್ಕಾಗಿ ಒಂದು ಎಕರೆ ಜಾಗವನ್ನು ಸುಮಾರು 25 ಸಾವಿರ ರೂಪಾಯಿಗಳಿಗೆ ಕೊಂಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು, ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರುವಲ್ಲಿ ಹಾಜಬ್ಬನವರ ಪಾತ್ರ ಗಮನಾರ್ಹವಾದುದು. ಅನಕ್ಷರಸ್ಥರಾದರೂ ಅಕ್ಷರದ ಬಗೆಗಿನ ಅವರ ಒಲವು ಇಂದು ಹಾಜಬ್ಬನವರನ್ನು  ಇಂದು ಅಕ್ಷರ ಸಂತನನ್ನಾಗಿಸಿದೆ.

ಕಿತ್ತಳೆ ಹಣ್ಣಿನ ಮಾರಿದ ಚಿಕ್ಕ ಆದಾಯದಲ್ಲೇ ಮಹತ್ತರ ಸಾಧನೆಗೆ ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದವು. ಬಂದ ಪ್ರಶಸ್ತಿಗಳ ನಗದನ್ನು ಸಹ ಶಾಲೆಯ ಮೂಲ ಸೌಕರ್ಯಗಳಿಗೆ ವಿನಿಯೋಗಿಸಿ ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದರು ಇಂದು ಅವರ ಅಪ್ರತಿಮ ಸಾಮಾಜಿಕ ಕಳಕಳಿಯ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ.

ಸ್ಥಳೀಯ ಗ್ರಾಮೀಣ ಯುವವಿಜ್ಞಾನಿ,ಉಪನ್ಯಾಸಕ  ಡಾ ಜೆ,ಜಿ ಮಂಜುನಾಥ್ ಸತತ ಎರಡುವರ್ಷ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ರಿಪ್ಪನಪೇಟೆಯ ಹಾಗೂ ಹೊಸನಗರ ತಾಲೂಕಿನ ಗರಿಮೆಯನ್ನ ವಿಶ್ವಮಟ್ಟದಲ್ಲಿ ಹೆಚ್ಚಿಸಿ ಅಪ್ರತಿಮ ಸಾಧನೆ ಮಾಡಿದ್ದಾರೆ.

ಇಂದು.ಡಾ ಜೆ. ಜಿ. ಮಂಜುನಾಥ್ ಅವರ ಸಾಧನೆ ಗಮನಿಸಿ  ಕಸ್ತೂರಿ ಕನ್ನಡ ಸಂಘದವತಿಯಿಂದ ಸನ್ಮಾನಿಸಲಾಯಿತು ಶ್ರೀಯುತರು ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್‌ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದರೊಂದಿದೆ ಹಾಗೂ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಮಡಿಕೇರಿಯ FMKCC ಕಾಲೇಜುನಲ್ಲಿ ಉಪನ್ಯಾಸಕರಾಗಿದ್ದಾರೆ.

ಇದೆ ಸಂದರ್ಭದಲ್ಲಿ ಯುವ ಅಪ್ರತಿಮವಾಗ್ಮಿ, ಕುಮಾರಿ ಭಾವನ ಆರ್ ಗೌಡ (ಸೊರಬ )ಅವರನ್ನ ಸಹ ಸನ್ಮಾನಿಸಲಾಯಿತು.

ಹಾಗೂ ಕಾರ್ಯಕ್ರಮದಲ್ಲಿ ರಿಪ್ಪನ ಪೇಟೆ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಮಾಜಿ ಶಾಸಕರುಗಳಾದ ಬಿ.ಸ್ವಾಮೀರಾವ್, ಗೋಪಾಲ ಕೃಷ್ಣ ಬೇಳೂರು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು...





Post a Comment

Previous Post Next Post